ಬೆಂಗಳೂರು (ಅ. 04): ವಿಶಾಖಪಟ್ಟಣಂನಲ್ಲಿ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಮೊದಲ ಇನ್ನಿಂಗ್ಸ್ ಮುಗಿಸಿರುವ ಕೊಹ್ಲಿ ಪಡೆ 502 ರನ್ಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇಡೀ ಇನ್ನಿಂಗ್ಸ್ನ ಪ್ರಮುಖ ಹೈಲೇಟ್ಸ್ ಮಯಾಂಕ್ ಅಗರ್ವಾಲ್ ಆಟ.
ರೋಹಿತ್ ಶರ್ಮಾ ಜೊತೆಗೂಡಿ ಅದ್ಭುತ ಆಟ ಪ್ರದರ್ಶಿಸಿದ ಮಯಾಂಕ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದರು. ಬರೋಬ್ಬರಿ 371 ಎಸೆತಗಳನ್ನು ಎದುರಿಸಿದ ಅಗರ್ವಾಲ್ 23 ಬೌಂಡರಿ ಹಾಗೂ 6 ಸಿಕ್ಸರ್ ಬಾರಿಸಿ 215 ರನ್ ಗಳಿಸಿದರು. ಈ ಮೂಲಕ ಭಾರತ ಟೆಸ್ಟ್ ತಂಡದಲ್ಲಿ ಖಾಯಂ ಓಪನರ್ ಸ್ಥಾನವನ್ನು ಭದ್ರ ಪಡಿಸಿಕೊಂಡರು.
ಆದರೆ, ಒಂದು ಕಾಲದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಮಯಾಂಕ್ ಇಂದು ಈ ರೀತಿಯ ಪ್ರದರ್ಶನ ನೀಡಲು ಕರ್ನಾಟಕದ ಆಟಗರಾನೇ ಕಾರಣ ಎಂಬುದು ಬಹಿರಂಗವಾಗಿದೆ.
India vs South Africa, Live Cricket Score: ಎಲ್ಗರ್-ಡಿಕಾಕ್ ಶತಕದ ಜೊತೆಯಾಟ; ಆಫ್ರಿಕಾ ಫೈಟ್ಬ್ಯಾಕ್!
![Vinay Kumar is the man behind the success of Mayank Agarwal, says Robin Uthappa]()
ವಿನಯ್ ಕುಮಾರ್
ಈ ಹಿಂದೆ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಪರಿಣಾಮ ಮಯಾಂಕ್ರನ್ನು ಆರ್ಸಿಬಿ ತಂಡ ಕೈಬಿಟ್ಟಿತ್ತು. ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮೋಷನ್ ಪ್ರೋಮೋದಿಂದಲೇ ಔಟ್ ಆಗಿದ್ದರು.
ಈ ಸಂದರ್ಭ ರಣಜಿ ಕ್ರಿಕೆಟ್ ಮಯಾಂಕ್ಗೆ ಕೈಹಿಡಿಯಿತು. ಇಲ್ಲಿ ಮಯಾಂಕ್ ಮಿಂಚಲು ಪ್ರಮುಖ ಕಾರಣ ದಾವಣಗೆರೆ ಎಕ್ಸ್ಪ್ರೆಸ್ ವಿನಯ್ ಕುಮಾರ್. ಕರ್ನಾಟಕ ರಣಜಿ ತಂಡದ ನಾಯಕನಾಗಿದ್ದ ವಿನಯ್ ಅವರು ಮಯಾಂಕ್ಗೆ ಅನೇಕ ಟಿಪ್ಸ್ ನೀಡಿದರಂರೆ. ಈ ಅಚ್ಚರಿಯ ಸಂಗತಿಯನ್ನು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರ ನಿವೃತ್ತಿ?
"ವಿನಯ್ ಕುಮಾರ್ ಅವರು ಮಯಾಂಕ್ಗೆ ಉತ್ತಮ ರನ್ ಗಳಿಸುವಂತೆ ಪ್ರೇರಣೆ ಮಾಡಿದ್ದರು. ಇದಾದ ಬೆನ್ನಲ್ಲೆ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಅಗರ್ವಾಲ್ ಭರ್ಜರಿ ತ್ರಿಶತಕ ಬಾರಿಸಿದ್ದರು. ಆ ಬಳಿಕ ಮಯಾಂಕ್ ತಿರುಗಿ ನೋಡಿದ್ದೇಯಿಲ್ಲ. ರನ್ ಮಳೆಯನ್ನೇ ಹರಿಸಿದರು. ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದರು" ಎಂದು ಉತ್ತಪ್ಪ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ