• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಗೌತಮ್ ಮಾರಕ ದಾಳಿ, ಪಾಂಡೆ-ಪವನ್ ಬ್ಯಾಟಿಂಗ್ ಮೋಡಿ; ಜಾರ್ಖಂಡ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

ಗೌತಮ್ ಮಾರಕ ದಾಳಿ, ಪಾಂಡೆ-ಪವನ್ ಬ್ಯಾಟಿಂಗ್ ಮೋಡಿ; ಜಾರ್ಖಂಡ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

ಮನೀಶ್ ಪಾಂಡೆ

ಮನೀಶ್ ಪಾಂಡೆ

123 ರನ್​ಗಳ ಭರ್ಜರಿ ಗೆಲುವಿನೊಂದಿಗೆ ರಾಜ್ಯ ತಂಡ ಗ್ರೂಪ್ ಎ ಹಂತದ ಅಂಕಪಟ್ಟಿಯಲ್ಲಿ 6 ಪಾಯಿಂಟ್​ನೊಂದಿಗೆ ಅಗ್ರಸ್ಥಾನದಲ್ಲಿದೆ.

  • Share this:

ಬೆಂಗಳೂರು (ಸೆ. 27): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ಭರ್ಜರಿ ಜಯ ಸಾಧಿಸಿದೆ. ಪವನ್ ದೇಶಪಾಂಡೆ, ದೇವದತ್ ಪಡಿಕ್ಕಲ್ ಹಾಗೂ ನಾಯಕ ಮನೀಶ್ ಪಾಂಡೆ ಅರ್ಧಶತಕದ ಜೊತೆ ಕೃಷ್ಣಪ್ಪ ಗೌತಮ್ ಮಾರಕ ದಾಳಿಯ ನೆರವಿನಿಂದ ರಾಜ್ಯ ತಂಡ 123 ರನ್​ಗಳ ಬೃಹತ್ ಗೆಲುವು ತನ್ನದಾಗಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ ನಿಧಾನಗತಿಯ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಕೆ ಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಆಮೆಗತಿಯಲ್ಲಿ ಬ್ಯಾಟ್ ಬೀಸಿದರು. ರಾಹುಲ್ ಉತ್ತಮ ಇನ್ನಿಂಗ್ಸ್​ ಕಟ್ಟುವಲ್ಲಿ ಮತ್ತೆ ಎಡವಿದರು. 51 ಎಸೆತಗಳಲ್ಲಿ 1 ಬೌಂಡರಿ ಬಾರಿಸಿ ಕೇವಲ 29 ರನ್​ಗೆ ಔಟ್ ಆದರು.

ಇತ್ತ ದೇವದತ್ ಅರ್ಧಶತಕ ಬಾರಿಸಿ 83 ಎಸೆತಗಳಲ್ಲಿ 58 ರನ್​ ನಿರ್ಗಮಿಸಿದರು. ಕೃಷ್ಣಮೂರ್ತಿ ಸಿದ್ಧಾರ್ಥ್​ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 22 ರನ್​ಗೆ ಔಟ್ ಆದರು. 30 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತ 140ರ ಆಸುಪಾಸಿನಲ್ಲಿತ್ತಷ್ಟೆ. ಈ ಸಂದರ್ಭ ಒಂದಾದ ನಾಯಕ ಮನೀಶ್ ಪಾಂಡೆ ಹಾಗೂ ಪವನ್ ದೇಶಪಾಂಡೆ ತಂಡದ ರನ್ ಗತಿಯಲ್ಲಿ ಏರಿಸಿದರು.

ಬಿರುಸಿನ ಆಟ ಪ್ರದರ್ಶಿಸಿದ ಈ ಜೋಡಿ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. ಅದರಂತೆ ಇವರಿಬ್ಬರು 4ನೇ ವಿಕೆಟ್​ಗೆ 76 ರನ್​ಗಳ ಜೊತೆಯಾಟ ಆಡಿದರು. ಉತ್ತಮ ಆಟ ಪ್ರದರ್ಶಿಸುತ್ತಿದ್ದ ಪಾಂಡೆ 44 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 52 ರನ್​ಗೆ ಔಟ್ ಆದರು.

 



ಇತ್ತ ಅರ್ಧಶತಕ ಬಾರಿಸಿ ಭರ್ಜರಿ ಆಟ ಪ್ರದರ್ಶಿಸಿದ ದೇವದತ್ ಕೊನೆಯ ಓವರ್​ಗೆ ವರೆಗೂ ಬ್ಯಾಟ್ ಬೀಸಿ ತಂಡವನ್ನು ಉತ್ತಮ ಸ್ಥಿತಿಗೆ ತಂದಿಟ್ಟರು.

ದೇಶಪಾಂಡೆ 59 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ನೊಂದಿಗೆ 70 ರನ್ ಚಚ್ಚಿದರು. ಪರಿಣಾಮ ಕರ್ನಾಟಕ ನಿಗದಿತ 50 ಓವರ್​ಗೆ 9 ವಿಕೆಟ್ ಕಳೆದುಕೊಂಡು 285 ರನ್ ಕಲೆಹಾಕಿತು. ಜಾರ್ಖಂಡ್ ಪರ ರಾಹುಲ್ ಶುಕ್ಲ ಹಾಗೂ ಆನಂದ್ ಸಿಂಗ್ ತಲಾ 4 ವಿಕೆಟ್ ಕಿತ್ತರು.

286 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಜಾರ್ಖಂಡ್ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿದೆ. ನಾಯಕ ಇಶಾನ್ ಕಿಶನ್ 11 ರನ್​ಗೆ ಔಟ್ ಆದರೆ, ಆನಂದ್ ಸಿಂಗ್ 32 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ಸೌರಭ್ ತಿವಾರಿ 43 ಹಾಗೂ ಅನುಕುಲ್ ರಾಯ್ 26 ರನ್ ಗಳಿಸಿದ್ದೆ ಹೆಚ್ಚು.

ಉಳಿದ ಬ್ಯಾಟ್ಸ್​ಮನ್​ಗಳು ಗೌತಮ್ ಸ್ಪಿನ್ ಮೋಡಿ ಬಲಿಯಾದರು. ಅಂತಿಮವಾಗಿ ಜಾರ್ಖಂಡ್ 37.5 ಓವರ್​ನಲ್ಲಿ 162 ರನ್​ಗಳಿಗೆ ಸರ್ವಪತನ ಕಂಡಿತು. ಕರ್ನಾಟಕ ಪರ ಗೌತಮ್ 5 ವಿಕೆಟ್ ಕಿತ್ತರೆ, ಶ್ರೇಯಸ್ ಗೋಪಾಲ್ 2, ಅಭಿಮನ್ಯು ಮಿಥುನ್ ಹಾಗೂ ರೋನಿತ್ ಮೋರ್ ತಲಾ 1 ವಿಕೆಟ್ ಪಡೆದರು.

123 ರನ್​ಗಳ ಭರ್ಜರಿ ಗೆಲುವಿನೊಂದಿಗೆ ರಾಜ್ಯ ತಂಡ ಗ್ರೂಪ್ ಎ ಹಂತದ ಅಂಕಪಟ್ಟಿಯಲ್ಲಿ 6 ಪಾಯಿಂಟ್​ನೊಂದಿಗೆ ಅಗ್ರಸ್ಥಾನದಲ್ಲಿದೆ.

First published: