Vijay Hazare Trophy: ರಾಹುಲ್ ಭರ್ಜರಿ ಆಟ; ಸೆಮಿಫೈನಲ್​ಗೆ ಲಗ್ಗೆಯಿಟ್ಟ ಕರ್ನಾಟಕ

ರೋಹನ್ ಕದಮ್ ಜೊತೆಯಾದ ರಾಹುಲ್ ಅತ್ಯುತ್ತಮ ಇನ್ನಿಂಗ್ಸ್​ ಕಟ್ಟಿ ತಂಡದ ಗೆಲುವನ್ನು ಖಚಿತ ಪಡಿಸಿದರು. ರಾಹುಲ್ 112 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಿಡಿಸಿ 90 ರನ್ ಬಾರಿಸಿದರು.

Vinay Bhat | news18-kannada
Updated:October 21, 2019, 8:17 AM IST
Vijay Hazare Trophy: ರಾಹುಲ್ ಭರ್ಜರಿ ಆಟ; ಸೆಮಿಫೈನಲ್​ಗೆ ಲಗ್ಗೆಯಿಟ್ಟ ಕರ್ನಾಟಕ
ಕೆ ಎಲ್ ರಾಹುಲ್
  • Share this:
ಬೆಂಗಳೂರು (ಅ. 21): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಂದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಪುದಚೇರಿ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಭರ್ಜರಿ ಜಯ ಸಾಧಿಸಿ ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಕರ್ನಾಟಕದ ಸಂಘಟಿತ ಬೌಲಿಂಗ್ ದಾಳಿ ಹಾಗೂ ಕೆ ಎಲ್ ರಾಹುಲ್​ರ ಆಕರ್ಷಕ 90 ರನ್​ಗಳ ನೆರವಿನಿಂದ 8 ವಿಕೆಟ್​ಗಳಿಂದ ಗೆದ್ದು ಬೀಗಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪುದಚೇರಿ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು.41 ರನ್ ಆಗುವ ಹೊತ್ತಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ಒಂದಾದ ಸಾಗರ್ ತ್ರಿವೆದಿ ಹಾಗೂ ವಿಕ್ನೇಶ್ವರನ್ ಎಚ್ಚರಿಯ ಆಟ ಪ್ರದರ್ಶಿಸಿದರು.

ಉತ್ತಮ ಜೊತೆಯಾಟ ಆಡಿದ ಈ ಜೋಡಿ 76 ರನ್​ಗಳ ಕಾಣಿಕೆ ನೀಡಿತು. ಸಾಗರ್ 60 ಎಸೆತಗಳಲ್ಲಿ 54 ರನ್ ಗಳಿಸಿದರು. ವಿಕ್ನೇಶ್ವರನ್ 98 ಎಸೆತಗಳಲ್ಲಿ 58 ರನ್ ಬಾರಿಸಿದರು. ಕೊನೆಯಲ್ಲಿ ಫಾಬಿದ್ ಅಹ್ಮದ್ 37 ರನ್ ಬಾರಿಸಿದ ಪರಿಣಾಮ ಪುದಚೇರಿ 50 ಓವರ್​ಗೆ 9 ವಿಕೆಟ್ ಕಳೆದುಕೊಂಡು 207 ರನ್ ಬಾರಿಸಿತು.

ಸಿಕ್ಸ್ ಮೂಲಕ ದ್ವಿಶತಕ; ಇದು ಕೂಡ ರೋಹಿತ್ ದಾಖಲೆಯ ಪಟ್ಟಿಗೆ ಸೇರಿತು!

ಕರ್ನಾಟಕ ಪರ ಪ್ರವೀಣ್ ದುಬೆ 3 ವಿಕೆಟ್ ಕಿತ್ತರೆ, ವಿ ಕೌಶಿಕ್ ಹಾಗೂ ಅಭಿಮನ್ಯು ಮಿಥುನ್ ತಲಾ 2 ಮತ್ತು ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರು.

 



208 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ ಭರ್ಜರಿ ಆರಂಭ ಪಡೆದುಕೊಂಡಿತು. ಕೆ ಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಅತ್ಯುತ್ತಮ ಜೊತೆಯಾಟ ಆಡಿದರು. ಮೊದಲ ವಿಕೆಟ್​​ಗೆ ಈ ಜೋಡಿ 98 ರನ್​ಗಳ ಕಾಣಿಕೆ ನೀಡಿದರು. ಪಟಿಕ್ಕಲ್ 54 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಔಟ್ ಆದರು.

India vs South Africa, Live: ಭಾರತ 497/9 ಡಿಕ್ಲೇರ್; ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡ ಆಫ್ರಿಕಾ

ಬಳಿಕ ರೋಹನ್ ಕದಮ್ ಜೊತೆಯಾದ ರಾಹುಲ್ ಅತ್ಯುತ್ತಮ ಇನ್ನಿಂಗ್ಸ್​ ಕಟ್ಟಿ ತಂಡದ ಗೆಲುವನ್ನು ಖಚಿತ ಪಡಿಸಿದರು. ರಾಹುಲ್ 112 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಿಡಿಸಿ 90 ರನ್ ಬಾರಿಸಿದರು. ಇತ್ತ ರೋಹನ್ ಅಜೇಯ ಅರ್ಧಶತಕ ಸಿಡಿಸಿದರೆ, ನಾಯಕ ಮನೀಶ್ ಪಾಂಡೆ ಅಜೇಯ 20 ರನ್ ಬಾರಿಸಿ ತಂಡಕ್ಕೆ ಜಯ ತಂದಿಟ್ಟರು.

ಕರ್ನಾಟಕ 41 ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿ 8 ವಿಕೆಟ್​ಗಳಿಂದ ಗೆದ್ದು ಬೀಗಿತು. ಅಲ್ಲದೆ ಸೆಮಿ ಫೈನಲ್​ಗೆ ಎಂಟ್ರಿ ನೀಡಿತು.

First published: October 21, 2019, 8:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading