ವಿಜಯ್ ಹಜಾರೆ ಟ್ರೋಫಿ: ನಾಕೌಟ್ ಹಂತಕ್ಕೆ ಪುದುಚೇರಿ; ಕರ್ನಾಟಕ ಸೇರಿ ಕ್ವಾರ್ಟರ್​ಫೈನಲ್ ಪ್ರವೇಶಿಸಿದ 8 ತಂಡಗಳ ಪಟ್ಟಿ

ಅಕ್ಟೋಬರ್ 20 ಮತ್ತು 21ರಂದು ಕ್ವಾರ್ಟರ್​ಫೈನಲ್ ಪಂದ್ಯಗಳು ನಡೆಯಲಿವೆ. ಅ. 23ರಂದು ಸೆಮಿಫೈನಲ್ ಹಾಗೂ ಅ. 25ರಂದು ಫೈನಲ್ ಪಂದ್ಯ ನಡೆಯಲಿದೆ.

Vijayasarthy SN | news18
Updated:October 17, 2019, 6:16 PM IST
ವಿಜಯ್ ಹಜಾರೆ ಟ್ರೋಫಿ: ನಾಕೌಟ್ ಹಂತಕ್ಕೆ ಪುದುಚೇರಿ; ಕರ್ನಾಟಕ ಸೇರಿ ಕ್ವಾರ್ಟರ್​ಫೈನಲ್ ಪ್ರವೇಶಿಸಿದ 8 ತಂಡಗಳ ಪಟ್ಟಿ
ಕ್ರಿಕೆಟ್ ಪ್ರಾತಿನಿಧಿಕ ಚಿತ್ರ
  • News18
  • Last Updated: October 17, 2019, 6:16 PM IST
  • Share this:
ವಿಜಯ್ ಹಜಾರೆ ಸೀಮಿತ ಓವರ್​ಗಳ ಕ್ರಿಕೆಟ್ ಟೂರ್ನಿ ನಾಕೌಟ್ ಹಂತದ ಗಡಿಗೆ ಬಂದಿದೆ. ಕರ್ನಾಟಕ, ಪಂಜಾಬ್, ದೆಹಲಿ, ಛತ್ತೀಸ್​ಗಡ, ಮುಂಬೈ, ತಮಿಳುನಾಡು, ಗುಜರಾತ್ ಮತ್ತು ಪುದುಚೇರಿ ತಂಡಗಳು ಕ್ವಾರ್ಟರ್​ಫೈನಲ್ ಪ್ರವೇಶಿಸಿವೆ. ಹೈದರಾಬಾದ್, ಜಾರ್ಖಂಡ್, ಸೌರಾಷ್ಟ್ರ ಸೇರಿದಂತೆ 30 ತಂಡಗಳು ಟೂರ್ನಿಯಿಂದ ನಿರ್ಗಮಿಸಿವೆ.

ಇಂದು ನಡೆದ ಕೊನೆಯ ಸುತ್ತಿನಲ್ಲಿ ನಡೆದ 6 ಪಂದ್ಯಗಳ ಪೈಕಿ ಅಸ್ಸಾಮ್ ಮತ್ತು ಪುದುಚೇರಿ ನಡುವಿನ ಹಣಾಹಣಿ ಮಾತ್ರ ನಿರ್ಣಾಯಕವಾಯಿತು. ಪ್ಲೇಟ್ ಗ್ರೂಪ್​ನ ಈ ಪಂದ್ಯದಲ್ಲಿ ಅಸ್ಸಾಮ್ ವಿರುದ್ಧ ಪುದುಚೇರಿ 5 ವಿಕೆಟ್​ಗಳಿಂದ ಸೋಲಿಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್ ಪ್ರವೇಶಿಸಿತು.

ಇದನ್ನೂ ಓದಿ: ಕೆನಡಾ ಟಿ-20 ಬಳಿಕ ಮತ್ತೆ ಮೈದಾನದಲ್ಲಿ ಅಬ್ಬರಿಸಲು ತಯಾರಾದ ಯುವರಾಜ್; ಯಾವ ತಂಡಕ್ಕೆ?

ಕ್ವಾರ್ಟರ್​ಫೈನಲ್ ಪ್ರವೇಶಿಸಿದ 8 ತಂಡಗಳು:
ಕರ್ನಾಟಕ, ಪಂಜಾಬ್, ಛತ್ತೀಸ್​ಗಡ, ಉತ್ತರ ಪ್ರದೇಶ, ಮುಂಬೈ, ತಮಿಳುನಾಡು, ಗುಜರಾತ್ ಮತ್ತು ಪುದುಚೇರಿ.

ಒಟ್ಟು 38 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಎ ಮತ್ತು ಬಿ ಗುಂಪಿನಲ್ಲಿ ಒಟ್ಟು 18 ತಂಡಗಳು ಹಣಾಹಣಿ ನಡೆಸಿದವು. ಎರಡೂ ಗುಂಪು ಸೇರಿ ಅಗ್ರಸ್ಥಾನ ಪಡೆದ 5 ತಂಡಗಳು ಕ್ವಾರ್ಟರ್​ಫೈನಲ್ ಪ್ರವೇಶಿಸಿದವು. ಸಿ ಗುಂಪಿನಲ್ಲಿದ್ದ 10 ತಂಡಗಳ ಪೈಕಿ ಟಾಪ್ 2 ತಂಡ ನಾಕೌಟ್ ಪ್ರವೇಶಿಸಿವೆ. ಪ್ಲೇಟ್ ಗುಂಪಿನಲ್ಲಿ 10 ತಂಡಗಳ ಪೈಕಿ ಒಂದು ತಂಡ ಮುಂದಿನ ಹಂತಕ್ಕೇರಿದೆ.

ಅಕ್ಟೋಬರ್ 20 ಮತ್ತು 21ರಂದು ಕ್ವಾರ್ಟರ್​ಫೈನಲ್ ಪಂದ್ಯಗಳು ನಡೆಯಲಿವೆ. ಅ. 23ರಂದು ಸೆಮಿಫೈನಲ್ ಹಾಗೂ ಅ. 25ರಂದು ಫೈನಲ್ ಪಂದ್ಯ ನಡೆಯಲಿದೆ. ಕಳೆದ ವರ್ಷ ನಡೆದ ವಿಜಯ್ ಟ್ರೋಫಿ ಟೂರ್ನಿಯನ್ನು ಮುಂಬೈ ತಂಡ ಗೆದ್ದುಕೊಂಡಿತ್ತು.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 17, 2019, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading