Vijay Hazare Trophy: ರಾಜಸ್ಥಾನ ವಿರುದ್ಧ ಕರ್ನಾಟಕಕ್ಕೆ 8 ವಿಕೆಟ್ ಜಯ; ಕ್ವಾರ್ಟರ್​ಫೈನಲ್ ಪ್ರವೇಶ

Karnataka Beat Rajasthan in Pre Quarterfinals: ರಾಜಸ್ಥಾನ ಗಳಿಸಿದ 199 ರನ್​ಗೆ ಪ್ರತಿಯಾಗಿ ಕರ್ನಾಟಕ ತಂಡ 44ನೇ ಓವರ್​ನಲ್ಲಿ 8 ವಿಕೆಟ್ ಕೈಲಿರುವಂತೆ ಗೆಲುವಿನ ದಡ ಮುಟ್ಟಿ ಕ್ವಾರ್ಟರ್ ಫೈನಲ್ ತಲುಪಿತು. ಬೌಲರ್ ವೈಶಾಖ್ ಮತ್ತು ಬ್ಯಾಟರ್ ಕೆ ಸಿದ್ಧಾರ್ಥ್ ಕರ್ನಾಟಕ ಗೆಲುವಿನ ರೂವಾರಿ ಆದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೈಪುರ್, ಡಿ. 19: ಕರ್ನಾಟಕ ಕ್ರಿಕೆಟ್ ತಂಡ 50 ಓವರ್​ಗಳ ದೇಶೀಯ ಕ್ರಿಕೆಟ್ ಟೂರ್ನಿಯಾದ ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ಎಂಟರ ಘಟ್ಟ (Round of 8) ತಲುಪಿತು. ಇಂದು ಇಲ್ಲಿ ನಡೆದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ (Preliminary quarterfinal match) ರಾಜಸ್ಥಾನ್ ವಿರುದ್ಧ ಕರ್ನಾಟಕ ನಿರೀಕ್ಷೆಮೀರಿ ಸುಲಭ ಗೆಲುವು ಸಾಧಿಸಿತು. ಗೆಲ್ಲಲು 200 ರನ್ ಗುರಿ ಪಡೆದ ಕರ್ನಾಟಕ ಇನ್ನೂ ಹಲವು ಓವರ್​ಗಳು ಇರುವಂತೆಯೇ 8 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ರಾಜಸ್ಥಾನದ ದೀಪಕ್ ಹೂಡಾ ಅಮೋಘ ಶತಕ ಗಳಿಸಿದರೂ ಆ ತಂಡ ಹೋರಾಟ ಇಲ್ಲದೇ ಸೋಲಪ್ಪಿತು.

    ಆರ್ ಸಮರ್ಥ್ ನಾಯಕತ್ವದ ಕರ್ನಾಟಕದ (Karnataka team led by R Samarth) ಇಂದಿನ ಗೆಲುವಿನಲ್ಲಿ ವೇಗದ ಬೌಲರ್ ವೈಶಾಖ್ ವಿಜಯಕುಮಾರ್ ಅವರ ಪಾತ್ರ ಗಮನಾರ್ಹವಾಗಿತ್ತು. ಏಳು ಓವರ್​ಗಳಲ್ಲಿ ಅವರು 23 ರನ್ನಿತ್ತು 4 ವಿಕೆಟ್ ಪಡೆದರು. ಪ್ರಸಿದ್ಧ್ ಕೃಷ್ಣ ಮತ್ತು ಪ್ರವೀಣ್ ದುಬೇ ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಕರ್ನಾಟಕದ ಬೌಲಿಂಗ್ ದಾಳಿ ಎದುರಿಸಲಾಗದೇ 42ನೇ ಓವರ್​ನಲ್ಲೇ 199 ರನ್​ಗೆ ಆಲೌಟ್ ಆಯಿತು. ದೀಪಕ್ ಹೂಡಾ ಅಮೋಘ ಶತಕ ಗಳಿಸಿದ್ದಷ್ಟೇ ರಾಜಸ್ಥಾನ್ ಇನಿಂಗ್ಸ್​ನ ಹೈಲೈಟ್. ಹೂಡಾ ಬಿಟ್ಟರೆ ಎರಡಂಕಿ ಸ್ಕೋರ್ ಗಳಿಸಿದ್ದು ಸಮರ್ಪಿತ್ ಜೋಷಿ ಮತ್ತು ರವಿ ಬಿಷ್ಣೋಯ್ ಮಾತ್ರ.

    ಗೆಲ್ಲಲು ಸಾಧಾರಣ ಗುರಿ ಪಡೆದ ಕರ್ನಾಟಕ ತಂಡ 44ನೇ ಓವರ್​ನಲ್ಲಿ 8 ವಿಕೆಟ್ ಕೈಲಿರುವಂತೆ ನಿರಾತಂಕವಾಗಿ ಗೆಲುವು ಸಾಧಿಸಿತು. ಕೆ ಸಿದ್ಧಾರ್ಥ್ ಅಜೇಯ 85 ರನ್ ಗಳಿಸಿ ಗೆಲುವಿನ ಪ್ರಮುಖ ರೂವಾರಿ ಎನಿಸಿದರು. ರವಿಕುಮಾರ್ ಸಮರ್ಥ್ ಮತ್ತು ಮನೀಶ್ ಪಾಂಡೆ ಕೂಡ ಅರ್ಧಶತಕಗಳನ್ನ ಗಳಿಸಿದರು. ಕೆ ಸಿದ್ಧಾರ್ಥ್ ಮತ್ತು ಮಾಜಿ ಕ್ಯಾಪ್ಟನ್ ಮನೀಶ್ ಪಾಂಡೆ ಇಬ್ಬರೂ 3ನೇ ವಿಕೆಟ್​ಗೆ 204 ರನ್​ಗಳ ಮುರಿಯದ ಜೊತೆಯಾಟದಲ್ಲಿ ಭಾಗಿಯಾದರು.

    ಇಂದು ಇನ್ನೂ ಎರಡು ಪ್ರೀಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದಿವೆ. ತ್ರಿಪುರಾ ವಿರುದ್ಧ ವಿದರ್ಭಾ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದೆ. ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ ನಡುವೆ ಇನ್ನೊಂದು ಪ್ರೀಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿದೆ.

    ಇದನ್ನೂ ಓದಿ: Year Ender 2021: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗರು ಇವರೇ ನೋಡಿ..!

    ಗ್ರೂಪ್ ಹಂತದಿಂದ ಐದು ತಂಡಗಳು ನೇರ ಕ್ವಾರ್ಟರ್ ಫೈನಲ್ ತಲುಪಿವೆ. ಪ್ರತೀ ಇಲೈಟ್ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಐದು ತಂಡಗಳು ಹಾಗೂ ಪ್ಲೇಟ್ ಗುಂಪಿನ ವಿಜೇತ ತಂಡ ಪ್ರೀಕ್ವಾರ್ಟರ್ ಫೈನಲ್ ತಲುಪಿವೆ. ಈಗ ಕರ್ನಾಟಕ ಸೇರಿ ಮೂರು ತಂಡಗಳು ಪ್ರೀಕ್ವಾರ್ಟರ್ ಹಂತದಿಂದ ಕ್ವಾರ್ಟರ್ ಫೈನಲ್ ಹಂತಕ್ಕೆ ಏರಿವೆ.

    ತಮಿಳುನಾಡು, ಹಿಮಾಚಲ ಪ್ರದೇಶ, ಸೌರಾಷ್ಟ್ರ, ಕೇರಳ ಮತ್ತು ಸರ್ವಿಸಸ್ ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್ ಹಂತದಲ್ಲಿ ಸಜ್ಜಾಗಿ ನಿಂತಿವೆ. ಡಿ. 21 ಮತ್ತು 22ರಂದು ಎಂಟರ ಹಂತದ ಪಂದ್ಯಗಳು ನಡೆಯಲಿವೆ.

    ಸ್ಕೋರು ವಿವರ:

    ರಾಜಸ್ಥಾನ್ 41.40 ಓವರ್ 199/10
    (ದೀಪಕ್ ಹೂಡಾ 109, ಸಮರ್ಪಿತ್ ಜೋಶಿ 33, ರವಿ ಬಿಷ್ಣೋಯ್ 17 ರನ್- ವೈಶಾಖ್ ವಿಜಯ್ ಕಮಾರ್ 22/4, ಕೆ ಗೌತಮ್ 61/2)

    ಕರ್ನಾಟಕ 43.4 ಓವರ್ 204/2
    (ಕೆ ಸಿದ್ಧಾರ್ಥ್ ಅಜೇಯ 85, ರವಿಕುಮಾರ್ ಸಮರ್ಥ್ 54, ಮನೀಶ್ ಪಾಂಡೆ ಅಜೇಯ 52 ರನ್)
    Published by:Vijayasarthy SN
    First published: