• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Vijay Hazare: ಕರ್ನಾಟಕ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಅಶ್ವಿನ್​ಗೆ ಬಿತ್ತು ಭಾರೀ ದಂಡ!

Vijay Hazare: ಕರ್ನಾಟಕ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಅಶ್ವಿನ್​ಗೆ ಬಿತ್ತು ಭಾರೀ ದಂಡ!

ಆರ್ ಅಶ್ವಿನ್

ಆರ್ ಅಶ್ವಿನ್

ಅಶ್ವಿನ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 8 ರನ್ ಗಳಿಸಿ ಔಟ್ ಆದರು. ಆದರೆ, ಈ ಸಂದರ್ಭ ಬಿಸಿಸಿಐ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಅಶ್ವಿನ್​ಗೆ ಭಾರೀ ದಂಡ ವಿಧಿಸಲಾಗಿದೆ.

  • Share this:

ಬೆಂಗಳೂರು (ಅ. 26): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಂಣದಲ್ಲಿ ನಿನ್ನೆ ನಡೆದ ವಿಜಯ್ ಹಜಾರೆ ಟ್ರೋಫಿಯ ಅಂತಿಮ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಭರ್ಜರಿ ಜಯ ಸಾಧಿಸಿ 4ನೇ ಬಾರಿ ಟ್ರೋಫಿಗೆ ಮತ್ತಿಕ್ಕಿತು.

ಈ ನಡುವೆ ಪಂದ್ಯ ನಡೆಯುತ್ತಿರುವಾಗ ಅಚ್ಚರಿಯ ಘಟನೆಯೊಂದು ನಡೆದಿದೆ. ಇದು ವಿವಾದಕ್ಕೂ ಕಾರಣವಾಗಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ತಮಿಳುನಾಡು ತಂಡ ಆರಂಭದಲ್ಲೇ ಮುರಳಿ ವಿಜಯ್ ಕಳೆದುಕೊಂಡಿತು. ಇದಾದ ಬಳಿಕ 3ನೇ ಕ್ರಮಾಂಕದಲ್ಲಿ ವಿಚಿತ್ರ ಎಂಬಂತೆ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದರು.

ಅಶ್ವಿನ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 8 ರನ್ ಗಳಿಸಿ ಔಟ್ ಆದರು. ಆದರೆ, ಈ ಸಂದರ್ಭ ಬಿಸಿಸಿಐ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಅಶ್ವಿನ್​ಗೆ ಭಾರೀ ದಂಡ ವಿಧಿಸಲಾಗಿದೆ.

Vijay Hazare: ಫೈನಲ್​ನಲ್ಲಿ ಗೆದ್ದು ಬೀಗಿದ ಪಾಂಡೆ ಪಡೆ; 4ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ

ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಬಂದಾಗ ಅಶ್ವಿನ್​ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್ ಹಾಕಿಕೊಂಡಿದ್ದಾರೆ. ಇದು ನಿಯಮದ ಉಲ್ಲಂಘನೆಯಾಗಿದ್ದು ಮ್ಯಾಚ್ ರೆಪ್ರಿ ಚಿನ್ಮಯ ಶರ್ಮಾ ಅವರು ಅಶ್ವಿನ್​ಗೆ ದಂಡ ವಿಧಿಸಿದ್ದಾರೆ. ಅಲ್ಲದೆ ಬಿಸಿಸಿಐ ಕೂಡ ಕಠಿಣ ಈ ವಿಚಾರವಾಗಿ ಕ್ರಮಕೈಗೊಳ್ಳುವ ಅಂದಾಜಿದೆ.

 ನಿನ್ನೆಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಗೆಲುವಿನತ್ತ ದಾಪುಗಾಲಿಡುತ್ತಿದೆ ಎಂಬೊತ್ತಿಗೆ ಪಂದ್ಯಕ್ಕೆ ವರುಣ ಅಡ್ಡಿ ಪಡಿಸಿತು. ಹೀಗಾಗಿ ಆಟವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು. ಸುಮಾರು 45 ನಿಮಿಷ ಕಾದರು ಮಳೆ ನಿಲ್ಲದ ಪರಿಣಾಮ ಅಂತಿಮವಾಗಿ ಪಂದ್ಯವನ್ನು ಸ್ಥಗಿತಗೊಳಿಸಿ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ  ಜಯಶಾಲಯಾಗಿ ಹೊರ ಹೊಮ್ಮಿತು.

 

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು