ಬೆಂಗಳೂರು (ಅ. 02): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಛತ್ತೀಸ್ ಘಡ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಮೊತ್ತ ಕಲೆಹಾಕಿದೆ. ನಾಯಕ ಮನೀಶ್ ಪಾಂಡೆ ಆಕರ್ಷಕ ಶತಕ ಹಾಗೂ ಕೆ ಎಲ್ ರಾಹುಲ್ ಅರ್ಧಶತಕದ ನೆರವಿನಿಂದ ರಾಜ್ಯ ತಂಡ ಎದುರಾಳಿಗೆ ಗೆಲ್ಲಲು 286 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಉಳಿದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ದೇವದತ್ ಪಡಿಕ್ಕಲ್(8) ಹಾಗೂ ಕರುಣ್ ನಾಯರ್(1) ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು ಕೆ ಎಲ್ ರಾಹುಲ್ ಹಾಗೂ ನಾಯಕ ಮನೀಶ್ ಪಾಂಡೆ.
ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿತು. ರಾಹುಲ್ ಎಂದಿನಂತೆ ಎಚ್ಚರಿಕೆಯ ಬ್ಯಾಟಿಂಗ್ಗೆ ಮುಂದಾದರೆ, ಪಾಂಡೆ ಬಿರುಸಿನ ಆಟದ ಮೊರೆಹೋದರು.
India vs South Africa Live Score: ರೋಹಿತ್ ಆಕರ್ಷಕ ಶತಕ; ಮಯಾಂಕ್-ಹಿಟ್ಮ್ಯಾನ್ ಜೋಡಿ ಭರ್ಜರಿ ಆಟ
25 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕದ ಮೊತ್ತವನ್ನು ಇವರಿಬ್ಬರು 34 ಓವರ್ಗೆ 175ಕ್ಕೆ ತಂದಿಟ್ಟರು. 150 ರನ್ಗಳ ಅಮೋಘ ಜೊತೆಯಾಟ ಆಡಿದರು.
ರಾಹುಲ್ 103 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ 81 ರನ್ಗೆ ಔಟ್ ಆದರು. ಬಳಿಕ ಬಂದ ಬ್ಯಾಟ್ಸ್ಮನ್ಗಳು ಪಾಂಡೆಗೆ ಸರಿಯಾಗಿ ಸಾತ್ ನೀಡಲಿಲ್ಲ. ಆದರೂ ನಾಯಕನ ಆಟವಾಡಿದ ಪಾಂಡೆ ಶತಕ ಸಿಡಿಸಿ ಅಬ್ಬರಿಸಿದರು. 50 ಓವರ್ಗೆ 7 ವಿಕೆಟ್ ಕಳೆದುಕೊಂಡು ಕರ್ನಾಟಕದ ಮೊತ್ತವನ್ನು 285 ರನ್ಗೆ ತಂದಿಟ್ಟರು.
118 ಎಸೆತಗಳಲ್ಲಿ ಪಾಂಡೆ 6 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿ ಅಜೇಯ 142 ರನ್ ಚಚ್ಚಿದರು. ಛತ್ತೀಸ್ ಘಡ್ ಪರ ಪುನೀತ್ ಹಾಗೂ ಶಶಾಂಕ್ ತಲಾ 2 ವಿಕೆಟ್ ಕಿತ್ತರೆ, ಪಂಕಾಜ್ ಹಾಗೂ ಸುಮಿತ್ ತಲಾ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ