ಬೆಂಗಳೂರು (ಸೆ. 26): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಕರ್ನಾಟಕ ಸವಾಲಿನ ಮೊತ್ತ ಪೇರಿಸಿದೆ. ಪವನ್ ದೇಶಪಾಂಡೆ, ದೇವದತ್ ಪಡಿಕ್ಕಲ್ ಹಾಗೂ ನಾಯಕ ಮನೀಶ್ ಪಾಂಡೆ ಅರ್ಧಶತಕದ ನೆರವಿನಿಂದ 50 ಓವರ್ಗೆ ರಾಜ್ಯ ತಂಡ 285 ರನ್ ಕಲೆಹಾಕಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕರ್ನಾಟಕ ನಿಧಾನಗತಿಯ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಕೆ ಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಆಮೆಗತಿಯಲ್ಲಿ ಬ್ಯಾಟ್ ಬೀಸಿದರು. ರಾಹುಲ್ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಮತ್ತೆ ಎಡವಿದರು. 51 ಎಸೆತಗಳಲ್ಲಿ 1 ಬೌಂಡರಿ ಬಾರಿಸಿ ಕೇವಲ 29 ರನ್ಗೆ ಔಟ್ ಆದರು.
ಇತ್ತ ದೇವದತ್ ಅರ್ಧಶತಕ ಬಾರಿಸಿ 83 ಎಸೆತಗಳಲ್ಲಿ 58 ರನ್ ನಿರ್ಗಮಿಸಿದರು. ಕೃಷ್ಣಮೂರ್ತಿ ಸಿದ್ಧಾರ್ಥ್ ಕೂಡ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲದೆ 22 ರನ್ಗೆ ಔಟ್ ಆದರು. 30 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತ 140ರ ಆಸುಪಾಸಿನಲ್ಲಿತ್ತಷ್ಟೆ. ಈ ಸಂದರ್ಭ ಒಂದಾದ ನಾಯಕ ಮನೀಶ್ ಪಾಂಡೆ ಹಾಗೂ ಪವನ್ ದೇಶಪಾಂಡೆ ತಂಡದ ರನ್ ಗತಿಯಲ್ಲಿ ಏರಿಸಿದರು.
ಈ ತೊಂದರೆಯಿಂದ ಬಳಲುತ್ತಿದ್ದಾರಂತೆ ಧೋನಿ; ವಿಶ್ವಕಪ್ ಬಳಿಕ MSD ಕ್ರಿಕೆಟ್ ಆಡದಿರಲು ಕಾರಣ ಬಹಿರಂಗ!
ಬಿರುಸಿನ ಆಟ ಪ್ರದರ್ಶಿಸಿದ ಈ ಜೋಡಿ ಬೌಂಡರಿ-ಸಿಕ್ಸರ್ಗಳ ಮಳೆ ಸುರಿಸಿದರು. ಅದರಂತೆ ಇವರಿಬ್ಬರು 4ನೇ ವಿಕೆಟ್ಗೆ 76 ರನ್ಗಳ ಜೊತೆಯಾಟ ಆಡಿದರು. ಉತ್ತಮ ಆಟ ಪ್ರದರ್ಶಿಸುತ್ತಿದ್ದ ಪಾಂಡೆ 44 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 52 ರನ್ಗೆ ಔಟ್ ಆದರು.
.@im_manishpandey did what he does best 🔥
The skipper scored 52 runs off 44 balls for Karnataka in the #VijayHazareTrophy 🙌#KARvJHA #VijayHazare #OrangeArmy #RiseWithUs pic.twitter.com/ki9lWAR2ew
— SunRisers Hyderabad (@SunRisers) September 26, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ