Vijay Hazare: ಫೈನಲ್​ನಲ್ಲಿ ಗೆದ್ದು ಬೀಗಿದ ಪಾಂಡೆ ಪಡೆ; 4ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ

ಕರ್ನಾಟಕ ಗೆಲುವಿನತ್ತ ದಾಪುಗಾಲಿಡುತ್ತಿದೆ ಎಂಬೊತ್ತಿಗೆ ಪಂದ್ಯಕ್ಕೆ ವರುಣ ಅಡ್ಡಿ ಪಡಿಸಿತು. ಸುಮಾರು 45 ನಿಮಿಷ ಕಾದರು ಮಳೆ ನಿಲ್ಲದ ಪರಿಣಾಮ ಅಂತಿಮವಾಗಿ ಪಂದ್ಯವನ್ನು ಸ್ಥಗಿತಗೊಳಿಸಿ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ಜಯಶಾಲಯಾಗಿ ಹೊರ ಹೊಮ್ಮಿತು.

Vinay Bhat | news18-kannada
Updated:October 25, 2019, 4:46 PM IST
Vijay Hazare: ಫೈನಲ್​ನಲ್ಲಿ ಗೆದ್ದು ಬೀಗಿದ ಪಾಂಡೆ ಪಡೆ; 4ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿಯೊಂದಿಗೆ ಕರ್ನಾಟಕ ತಂಡದ ಆಟಗಾರರು
  • Share this:
ಬೆಂಗಳೂರು (ಅ. 25): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಭರ್ಜರಿ ಗೆಲುವು ಸಾಧಿಸಿದೆ. ಮಳೆ ಬಾಧಿತ ಪಂದ್ಯದಲ್ಲಿ ವಿಜೆಡಿ ನಿಯಮದ ಅನ್ವಯ ರಾಜ್ಯ ತಂಡ 60 ರನ್​ಗಳಿಂದ ಗೆದ್ದು ಬೀಗಿದ್ದು ನಾಲ್ಕನೇ ಬಾರಿ ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಕ್ಕಿದೆ.

ತಮಿಳುನಾಡು ನೀಡಿದ್ದ 253 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಕರ್ನಾಟಕ ಆರಂಭದಲ್ಲಿ ದೇವದತ್ ಪಟಿಕ್ಕಲ್(11) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್​ಗೆ ಜೊತೆಯಾದ ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅತ್ಯುತ್ತಮ ಜೊತೆಯಾಟ ಆಡಿದರು. ಶತಕದ ಕಾಣಿಕೆಯೊಂದಿಗೆ ಪ್ರಮುಖ ಪಂದ್ಯದಲ್ಲಿ ಈ ಜೋಡಿ ಅದ್ಭುತ ಪ್ರದರ್ಶನ ನೀಡಿತು.

ಅಗರ್ವಾಲ್ ಕೇವಲ 41 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರೆ, ರಾಹುಲ್ 71 ಎಸೆತಗಳಲ್ಲಿ 50 ರನ್ ಪೂರೈಸಿದರು. ಹೀಗೆ ಕರ್ನಾಟಕ ಗೆಲುವಿನತ್ತ ದಾಪುಗಾಲಿಡುತ್ತಿದೆ ಎಂಬೊತ್ತಿಗೆ ಪಂದ್ಯಕ್ಕೆ ವರುಣ ಅಡ್ಡಿ ಪಡಿಸಿತು. ಹೀಗಾಗಿ ಆಟವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು. ಸುಮಾರು 45 ನಿಮಿಷ ಕಾದರು ಮಳೆ ನಿಲ್ಲದ ಪರಿಣಾಮ ಅಂತಿಮವಾಗಿ ಪಂದ್ಯವನ್ನು ಸ್ಥಗಿತಗೊಳಿಸಿ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ಜಯಶಾಲಯಾಗಿ ಹೊರ ಹೊಮ್ಮಿತು.

IND vs BAN: ಬಾಂಗ್ಲಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ರೆಡಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ರಾಜ್ಯ ತಂಡ 23 ಓವರ್​​ನಲ್ಲಿ 1 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದ್ದಾಗ ವರುಣನ ಆಟ ಆರಂಭವಾಯಿತು. ಅಗರ್ವಾಲ್ 55 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 69 ರನ್ ಕಲೆಹಾಕಿದರೆ, ಕೆ ಎಲ್ ರಾಹುಲ್ 72 ಎಸೆತಗಳಲ್ಲಿ 52 ರನ್ ಗಳಿಸಿದರು.

ಏನಿದು ವಿಜೆಡಿ ನಿಯಮ?:

ಜಯದೇವನ್ ನಿಯಮ ಅಥವಾ ವಿಜೆಡಿ ನಿಯಮ ಪ್ರಮುಖವಾಗಿ ಎರಡು ರೇಖೇಗಳನ್ನು ಆಧರಿಸಿದೆ. ಒಂದು ರನ್​ ಗಳಿಕೆಯ ಸಾಮಾನ್ಯ ರೇಖೆಯಾದರೆ ಮತ್ತೊಂದು ಗುರಿ ನಿಗದಿಪಡಿಸುವ ರೇಖೆ. ರನ್​ ಗಳಿಸಿದ ರೇಖೆಯಲ್ಲಿ ಮೊದಲು ಬ್ಯಾಟ್ ಮಾಡುವ ತಂಡದ ಪತನಗೊಂಡ ವಿಕೆಟ್ ಹಾಗೂ ಪವಲ್ ಪ್ಲೇ ಓವರ್ಸ್​ ಜೊತೆ ಕೊನೆಯ ಸ್ಲಾಗ್ ಓವರ್​​ನಲ್ಲಿನ ರನ್​ರೇಟ್ ಆಧರಿಸಿ 2ನೇ ಇನ್ನಿಂಗ್ಸ್​ ಆರಂಭಿಸುವ ತಂಡಕ್ಕೆ ಟಾರ್ಗೆಟ್ ನಿಗದಿಪಡಿಸಲಾಗುತ್ತದೆ.ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ತಮಿಳುನಾಡು ತಂಡ ಆರಂಭದಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ಮುರಳಿ ವಿಜಯ್ ಸೊನ್ನೆ ಸುತ್ತಿದರೆ, ರವಿಚಂದ್ರನ್ ಅಶ್ವಿನ್ 8 ರನ್​ಗೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ಒಂದಾದ ಅಭಿನವ್ ಮುಕುಂದ್ ಹಾಗೂ ಬಾಬ ಅಪರಜಿತ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

IND vs BAN: ಧೋನಿ-ಕೊಹ್ಲಿ ಅಲ್ಲ; ಬಾಂಗ್ಲಾ ಸರಣಿಗೆ ಇದೇ ಮೊದಲ ಬಾರಿ ಆಯ್ಕೆಯಾಗಿಲ್ಲ ಈ ಆಟಗಾರ

ಅತ್ಯುತ್ತಮ ಜೊತೆಯಾಟ ಆಡಿದ ಈ ಜೋಡಿ ತಂಡದ ಮೊತ್ತವನ್ನು 100ರ ಗಡಿ ದಾಡಿಸಿದರು. ಅಲ್ಲದೆ ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ 124 ರನ್​ಗಳ ಅಮೋಘ ಜೊತೆಯಾಟ ಆಡಿತು.

85 ರನ್ ಗಳಿಸಿ ಶತಕದ ಅಂಚಿನಲ್ಲಿದ್ದ ಮುಕುಂದ್​ಗೆ ಪ್ರತೀಕ್ ಜೈನ್​ ಶಾಕ್ ನೀಡಿ ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಇದರ ಬೆನ್ನಲ್ಲೆ ಅಪರಿಜಿತ್ ಕೂಡ 66 ರನ್ ಗಳಿಸಿರುವಾಗ ರನೌಟ್​ಗೆ ಬಲಿಯಾದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ವಿಜಯ್ ಶಂಕರ್ 38 ಹಾಗೂ ಶಾರುಖ್​ ಖಾನ್ 27 ರನ್ ಗಳಿಸಿದ್ದೇ ಹೆಚ್ಚು. ನಾಯಕ ದಿನೇಶ್ ಕಾರ್ತಿಕ್ ಕೂಡ 11 ರನ್ ಗಳಿಸಿದರಷ್ಟೆ.

ಕ್ರಿಕೆಟ್ ಪಂದ್ಯದ ವೇಳೆ ವಾಟರ್ ಬಾಯ್ ಆಗಿ ಕೆಲಸ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ!

ಈ ನಡುವೆ ಅಂತಿಮ ಓವರ್​ನಲ್ಲಿ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ವಿಕೆಟ್ ಕಿತ್ತು ಕಾರ್ತಿಕ್ ಪಡೆಯನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಕೊನೆಯ ಓವರ್​ನ ಮೂರನೇ ಎಸೆತದಲ್ಲಿ ಶಾರುಖ್ ಖಾನ್, 4ನೇ ಎಸೆತದಲ್ಲಿ ಎಂ ಮೊಹಮ್ಮದ್(10) ಹಾಗೂ ಮುರುಗನ್ ಅಶ್ವಿನ್(0) ಅವರನ್ನು ಔಟ್ ಮಾಡಿ ಹ್ಯಾಟ್ರಿಕ್ ವಿಕೆಟ್ ಕಿತ್ತರು.

ಅಂತಿಮವಾಗಿ ತಮಿಳುನಾಡು 49.5 ಓವರ್​ನಲ್ಲಿ 252 ರನ್​ಗೆ ಆಲೌಟ್ ಆಯಿತು. ಕರ್ನಾಟಕ ಪರ ಅಭಿಮನ್ಯು 5 ವಿಕೆಟ್ ಕೀಳಿದರೆ, ವಿ ಕೌಶಿಕ್ 2, ಪ್ರತೀಕ್ ಜೈನ್ ಹಾಗೂ ಕೃಷ್ಣಪ್ಪ ಗೌತಮ್ ತಲಾ1 ವಿಕೆಟ್ ಪಡೆದರು.
First published: October 25, 2019, 1:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading