Video: ಈತನ ಬೌಲಿಂಗ್ ಶೈಲಿ ನೋಡಿ ಬ್ಯಾಟ್ಸ್​ಮನ್ ತಬ್ಬಿಬ್ಬು..!

ಕೆವಿನ್

ಕೆವಿನ್

ಈ ಪಂದ್ಯದಲ್ಲಿ ಮರಾಠ ಅರೇಬಿಯನ್ಸ್ ನೀಡಿದ 101 ರನ್​ಗಳ ಟಾರ್ಗೆಟ್​ ಅನ್ನು 8.1 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಲಾಹೋರ್ ಖಲಂದರ್ಸ್ ಗೆಲುವು ದಾಖಲಿಸಿತು.

  • Share this:

    ಅಬುಧಾಬಿ ಟಿ10 ಲೀಗ್‌ ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ. ಟೀಮ್ ಅಬುಧಾಬಿ ಮತ್ತು ನಾರ್ತನ್ ವಾರಿಯರ್ಸ್ ಪಂದ್ಯವು ಫೀಲ್ಡರ್ ಚೆಂಡನ್ನು ಹಿಡಿಯದೇ ಜೆರ್ಸಿ ಬದಲಿಸಿದ್ದರಿಂದ ಸುದ್ದಿಯಾದರೆ, ಮರಾಠ ಅರೇಬಿಯನ್ಸ್-ಟೀಮ್ ಅಬುಧಾಬಿ ಪಂದ್ಯವು ಕ್ರಿಸ್ ಗೇಲ್ ಅವರ 12 ಎಸೆತಗಳಲ್ಲಿನ ಅರ್ಧಶತಕದಿಂದ ಸುದ್ದಿಯಾಯಿತು.


    ಇದೀಗ ಲಾಹೋರ್ ಖಲಂದರ್ಸ್ ಹಾಗೂ ಮರಾಠ ಅರೇಬಿಯನ್ಸ್ ನಡುವಣ ಪಂದ್ಯವು 22 ವರ್ಷದ ಸ್ಪಿನ್ನರ್​ನಿಂದ ಎಲ್ಲರ ಗಮನ ಸೆಳೆದಿದೆ. ಹೌದು, ಟಿ10 ಲೀಗ್​ನ 16ನೇ ಪಂದ್ಯದಲ್ಲಿ ಖಲಂದರ್ಸ್ ವಿರುದ್ದ ಬೌಲಿಂಗ್ ಮಾಡಿದ ಕೆವಿನ್ ಕೊಥಿಗೊಡ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಕೆವಿನ್ ಅವರ ವಿಚಿತ್ರ ಬೌಲಿಂಗ್ ಶೈಲಿ ನೋಡಿ ಅತ್ತ ಬ್ಯಾಟಿಂಗ್ ಮಾಡುತ್ತಿದ್ದ ಟಾಮ್ ಬ್ಯಾಂಟನ್ ತಬ್ಬಿಬ್ಬಾದರು.




    ಅಲ್ಲದೆ ಈ ವಿಲಕ್ಷಣ ಶೈಲಿಯಿಂದ ಕೆವಿನ್ ಹಲವು ಬಾರಿ ನೆಲಕ್ಕೆ ಉರುಳಿ ಗಾಯಗೊಂಡಿದ್ದಾರೆ. ಈ ಹಿಂದೆ ಶ್ರೀಲಂಕಾ ಅಂಡರ್ 19 ತಂಡವನ್ನು ಪ್ರತಿನಿಧಿಸಿದ್ದ ವೇಳೆ ಕೆವಿನ್ ಕೊಥಿಗೊಡ ತಮ್ಮ ಬೌಲಿಂಗ್ ಶೈಲಿಯಿಂದ ಸುದ್ದಿಯಾಗಿದ್ದರು. ಆ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಂಡಿರದ ಯುವ ಸ್ಪಿನ್ನರ್ ಇದೀಗ ಟಿ10 ಲೀಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.









    View this post on Instagram






    A post shared by CricTracker (@crictracker)





    ಇನ್ನು ಈ ಪಂದ್ಯದಲ್ಲಿ 1 ಓವರ್ ಬೌಲಿಂಗ್ ಮಾಡಿದ್ದ ಕೆವಿನ್ ಕೊಥಿಗೊಡ 5 ರನ್ ನೀಡಿದ್ದರು. ಅಲ್ಲದೆ ಬೌಲಿಂಗ್ ವೇಳೆ ಗಾಯಗೊಂಡ ಕಾರಣ ಓವರ್ ಮುಂದುವರೆಸಿರಲಿಲ್ಲ. ಹಾಗೆಯೇ ಮರಾಠ ಅರೇಬಿಯನ್ಸ್ ನೀಡಿದ 101 ರನ್​ಗಳ ಟಾರ್ಗೆಟ್​ ಅನ್ನು 8.1 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಲಾಹೋರ್ ಖಲಂದರ್ಸ್ ಗೆಲುವು ದಾಖಲಿಸಿತು.

    Published by:zahir
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು