ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಮೂಡಿಬಂದ ತೀರ್ಪು ಹೊಸ ಚರ್ಚೆಗೆ ಕಾರಣವಾಗಿದೆ. ಚೆಂಡು ನೆಲಕ್ಕೆ ತಾಗಿದರೂ ಸೂರ್ಯಕುಮಾರ್ ಯಾದವ್ರನ್ನು ಔಟ್ ಎಂದು ಘೋಷಿಸಿದ್ದು, ಇದೀಗ ಅಂಪೈರ್ ತೀರ್ಮಾನದ ವಿರುದ್ದ ಪ್ರಶ್ನೆಗಳು ಮೂಡುವಂತೆ ಮಾಡಿದೆ.
ಹೌದು, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರು. ಆದಿಲ್ ರಶೀದ್ ಅವರ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಹಿಟ್ಮ್ಯಾನ್ ತಂಡದ ಖಾತೆ ತೆರೆದರು.
ನಾಲ್ಕನೇ ಓವರ್ನಲ್ಲಿ ರೋಹಿತ್ ಶರ್ಮಾ ಜೋಫ್ರಾ ಆರ್ಚರ್ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಚೊಚ್ಚಲ ಬಾರಿ ಟೀಮ್ ಇಂಡಿಯಾ ಪರ ಬ್ಯಾಟಿಂಗ್ಗೆ ಇಳಿದ ಸೂರ್ಯಕುಮಾರ್ ಯಾದವ್ ಭರ್ಜರಿ ಸಿಕ್ಸರ್ನೊಂದಿಗೆ ತಮ್ಮ ಅಂತಾರಾಷ್ಟ್ರೀಯ ಖಾತೆ ತೆರೆದಿದ್ದು ವಿಶೇಷ.
Was this the best-ever first international ball played of all time?#INDvENG #SuryakumarYadav #IndiaTaiyarHai #TeamIndia pic.twitter.com/IekaNPpCXR
— Star Sports (@StarSportsIndia) March 19, 2021
ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಆದಿಲ್ ರಶೀದ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಬಂದು ಸ್ಟಂಪ್ ಆಗಿ ಹೊರನಡೆದರು. ಇದರ ಬಳಿಕ ಜೊತೆಯಾದ ಸೂರ್ಯಕುಮಾರ್ ಯಾದವ್-ರಿಷಭ್ ಪಂತ್ ತಂಡದ ಮೊತ್ತವನ್ನು 10 ಓವರ್ ಮುಕ್ತಾಯದ ವೇಳೆ 75 ಕ್ಕೇರಿಸಿದರು. ಅಲ್ಲದೆ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಸೂರ್ಯುಕುಮಾರ್ ಯಾದವ್ ಬ್ಯಾಟ್ ಮೇಲೆಕ್ಕೆತ್ತಿದರು.
ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಅಂತಿಮ ಓವರ್ಗಳಲ್ಲಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಅಲ್ಲದೆ 14ನೇ ಓವರ್ನ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದ್ದರು. ನಂತರದ ಎಸೆತದಲ್ಲಿ ಮತ್ತೊಂದು ಭರ್ಜರಿ ಹೊಡೆತಕ್ಕೆ ಕೈಹಾಕಿದರೂ, ಚೆಂಡು ಬೌಂಡರಿ ಲೈನ್ನಿಂದ ಓಡಿ ಬಂದ ಡೇವಿಡ್ ಮಲಾನ್ ಕೈ ಸೇರಿತ್ತು.
ಇತ್ತ ಫೀಲ್ಡ್ ಅಂಪೈರ್ ಔಟ್ ಎಂದು ಘೋಷಿಸಿದ್ದರು. ಇದಾಗ್ಯೂ ಥರ್ಡ್ ಅಂಪೈರ್ ಮನವಿ ಮಾಡಲಾಯಿತು. ಈ ವೇಳೆ ಪರಿಶೀಲಿಸಿದಾಗ ಚೆಂಡು ಮೈದಾನಕ್ಕೆ ತಾಗುತ್ತಿರುವುದು ಕಾಣುತ್ತಿತ್ತು. ಹಲವು ಬಾರಿ ಪರಿಶೀಲಿಸಿದರೂ ಬೆರಳುಗಳ ಎಡೆಯಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಸ್ಫಷ್ಟವಾಗಿತ್ತು. ಆದರೆ ಅದನ್ನೇ ಪುರಾವೆಯಾಗಿಸುವ ಅವಕಾಶವಿರಲಿಲ್ಲ. ಹೀಗಾಗಿ ಅಂತಿಮ ತೀರ್ಪು ಪ್ರಕಟಿಸುವ ಅವಕಾಶ ಮೂರನೇ ಅಂಪೈರ್ಗಿತ್ತು. ಇದಾಗ್ಯೂ ಮೂರನೇ ಅಂಪೈರ್ ಸೂರ್ಯಕುಮಾರ್ ಅವರನ್ನು ಔಟ್ ಎಂದು ಘೋಷಿಸಿದರು.
ಇದಕ್ಕೆ ಮುಖ್ಯ ಕಾರಣ ಆನ್-ಫೀಲ್ಡ್ ಅಂಪೈರ್ ಮೊದಲೇ ನೀಡಿದ ತೀರ್ಪು. ಹೌದು, ಚೆಂಡು ಡೇವಿಡ್ ಮಲಾನ್ ಕೈ ಸೇರುತ್ತಿದ್ದಂತೆ ಫೀಲ್ಡ್ ಅಂಪೈರ್ ಔಟ್ ನೀಡಿದ್ದರು. ಇತ್ತ ರೀಪ್ಲೇನಲ್ಲಿ ಔಟ್ ಅಥವಾ ನಾಟೌಟ್ ಎನ್ನಲು ಸರಿಯಾದ ಪುರಾವೆ ಕೂಡ ಇರಲಿಲ್ಲ. ಹೀಗಾಗಿ 3ನೇ ಅಂಪೈರ್ ಫೀಲ್ಡ್ ಅಂಪೈರ್ನ ತೀರ್ಪನ್ನೇ ಮುಂದುವರೆಸಿದರು.
गजब है! टेक्नोलॉजी का क्या फायदा जब ग्राउंड अंपायर के साथ ही जाना है। साफ नॉट आउट था।👎😠#INDvENG #INDvsENG pic.twitter.com/ZTEH9gxfpa
— Shashank Pradhan (@PradhanShashank) March 18, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ