VIDEO: ಅಣ್ರಾವ್ರ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಿದ RCB

ಹೌದು ಸಚಿನ್ ತೆಂಡುಲ್ಕರ್ ಹಾಗೂ ಡಾ.ರಾಜ್ ಕುಮಾರ್​ ಹುಟ್ಟುಹಬ್ಬವನ್ನು ಆರ್​ಸಿಬಿ ಮತ್ತಷ್ಟು ವಿಶೇಷವಾಗಿಸಿದೆ.

zahir | news18
Updated:April 25, 2019, 2:15 PM IST
VIDEO: ಅಣ್ರಾವ್ರ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಿದ RCB
ರಾಜ್
  • News18
  • Last Updated: April 25, 2019, 2:15 PM IST
  • Share this:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವಣ ಪಂದ್ಯವು ಕನ್ನಡಿಗರಿಗೆ ಹಲವಾರು ಕಾರಣಗಳಿಂದ ವಿಶೇಷ ಎನಿಸಿತ್ತು. ಏಕೆಂದರೆ ಭಾರತದಲ್ಲಿ ಬುಧವಾರ (ಏ.24) ಇಬ್ಬರು ದಿಗ್ಗಜರ ಹುಟ್ಟುಹಬ್ಬ. ಒಬ್ಬರು ಕ್ರಿಕೆಟ್ ದೇವರಾದರೆ, ಮತ್ತೊಬ್ಬರು ಅಭಿಮಾನಿ ದೇವರುಗಳ ದೇವರು.

ಹೌದು ಸಚಿನ್ ತೆಂಡುಲ್ಕರ್ ಹಾಗೂ ಡಾ.ರಾಜ್ ಕುಮಾರ್​ ಹುಟ್ಟುಹಬ್ಬವನ್ನು ಆರ್​ಸಿಬಿ ಮತ್ತಷ್ಟು ವಿಶೇಷವಾಗಿಸಿದೆ. ಅದರಲ್ಲೂ ಚಿನ್ನಸ್ವಾಮಿಯ ದೊಡ್ಡ ಪರದೆಯ ಮೂಲಕ ಅಣ್ಣಾವ್ರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಯಿತು.




ಮೊದಲೇ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದ್ದು ತುಂಬಿದ್ದರು. ಈ ನಡುವೆ ರಸಿಕರ ರಾಜನ ಫೋಟೋ ಬಿಗ್​ ಸ್ಕ್ರೀನ್​ನಲ್ಲಿ ಕಾಣಿಸುತ್ತಿದ್ದಂತೆ ಫ್ಯಾನ್​ಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಈ ಮೂಲಕ ರಾಯಲ್ ಚಾಲೆಂಜರ್ಸ್​ ಫ್ರಾಂಚೈಸಿ ರಾಜಣ್ಣ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ವಿಶೇಷವಾಗಿ ಆಚರಿಸಿತು.
First published: April 24, 2019, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading