Bowling record- ಸ್ಪಿನ್ ಜೋಡಿ ಕಮಾಲ್; 11 ಓವರ್ 7 ರನ್ 10 ವಿಕೆಟ್

Syed Mushtaq Ali Trophy T20 Tournament- ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಪ್ಲೇಟ್ ಗ್ರೂಪ್​ನಲ್ಲಿ ವಿದರ್ಭಾ ಅಗ್ರಸ್ಥಾನ ಪಡೆದಿದೆ. ತಂಡದ ಸ್ಪಿನ್ನರ್​ಗಳಾದ ಅಕ್ಷಯ್ ಮತ್ತು ಅಥರ್ವ ಬೌಲಿಂಗ್ ದಾಖಲೆ ಸೃಷ್ಟಿಸಿದ್ದಾರೆ.

ಅಕ್ಷಯ್ ಕರ್ನೇವಾರ್

ಅಕ್ಷಯ್ ಕರ್ನೇವಾರ್

 • Share this:
  ವಿಜಯವಾಡ: ವಿದರ್ಭಾ ತಂಡದ ಸ್ಪಿನ್ನರ್ ಅಕ್ಷಯ್ ಕರ್ನೇವಾರ್ (Vidarbha spinner Akshay Karnewar) ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಪ್ಲೇಟ್ ಗ್ರೂಪ್​ನಲ್ಲಿ (Syed Mushtaq Ali Trophy T20, Plate Group) ವಿದರ್ಭಾ ತಂಡ ಸತತ 5 ಪಂದ್ಯಗಳನ್ನ ಗೆದ್ದು ಪ್ರೀಕ್ವಾರ್ಟರ್ ಫೈನಲ್ (Preliminary Quarterfinal) ತಲುಪಿತು. ತಂಡದ ಸ್ಪಿನ್ ಜೋಡಿಗಳಾದ ಅಕ್ಷಯ್ ಕರ್ನೇವಾರ್ ಮತ್ತು ಅಥರ್ವ ತಯಿದೆ (Atharva Taide) ಅವರು ವಿದರ್ಭ ಗೆಲುವುಗಳ ರೂವಾರಿ ಎನಿಸಿದ್ದಾರೆ. ನಿನ್ನೆ ಮಣಿಪುರ್ (Manipur) ವಿರುದ್ಧದ ಪಂದ್ಯದಲ್ಲಿ ಅಕ್ಷಯ್ ಕರ್ನೇವಾರ್ 4 ಓವರ್ ಬೌಲ್ ಮಾಡಿ 2 ವಿಕೆಟ್ ಪಡೆದರು. ವಿಶೇಷ ಅಂದರೆ ಅವರು ಮಾಡಿದ ಎಲ್ಲಾ ನಾಲ್ಕೂ ಓವರ್​ಗಳು ಮೇಡನ್ ಓವರ್ ಆಗಿತ್ತು.

  ನಿನ್ನೆ ಸಿಕ್ಕಿಂ (Sikkim) ವಿರುದ್ಧ ನಡೆದ ಪಂದ್ಯದಲ್ಲೂ ಅಕ್ಷಯ್ ಕರ್ನೇವಾರ್ ಕಮಾಲ್ ಮಾಡಿದ್ದರು. 4 ಓವರ್ ಬೌಲ್ ಮಾಡಿ 5 ರನ್ ಇತ್ತು 4 ವಿಕೆಟ್ ಪಡೆದಿದ್ದರು. ಆದರೆ, ಇಂದು ನಾಲ್ಕು ಓವರ್ ಮೇಡನ್ ಮಾಡಿದ್ದು ಹೊಸ ದಾಖಲೆ ಆಗಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದು ಪಂದ್ಯದಲ್ಲಿ ಬೌಲರ್​ವೊಬ್ಬ ಎಲ್ಲಾ ಓವರ್ ಮೇಡನ್ ಮಾಡಿದ್ದು ಇದೇ ಮೊದಲು.

  ಅಥರ್ವ ತಯಿದೆ ಆಲ್​ರೌಂಡ್ ಆಟ:

  ಅಕ್ಷಯ್ ಕರ್ನೇವಾರ್ ಜೊತೆಗೆ ವಿದರ್ಭಾ ತಂಡದ ಮತ್ತೊಬ್ಬ ಸ್ಪಿನ್ನರ್ ಅಥರ್ವ ತಯಿದೆ ಕೂಡ ಉತ್ತಮ ಬೌಲಿಂಗ್ ಮಾಡಿದರು. ನಿನ್ನೆ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಅವರು ಒಂದು ಮೇಡನ್ ಓವರ್ ಬೌಲ್ ಮಾಡಿದ್ದಲ್ಲದೇ 2 ವಿಕೆಟ್ ಕೂಡ ಪಡೆದಿದ್ದಾರೆ. ಇಂದು ಸಿಕ್ಕಿಂ ವಿರುದ್ಧದ ಪಂದ್ಯದಲ್ಲೂ ಅವರು 2 ಓವರ್ ಬೌಲ್ ಮಾಡಿ 2 ರನ್ನಿತ್ತು 2 ವಿಕೆಟ್ ಪಡೆದಿದ್ದಾರೆ.

  ಎರಡು ಪಂದ್ಯಗಳಿಂದ ವಿದರ್ಭದ ಈ ಇಬ್ಬರು ಸ್ಪಿನ್ ಬೌಲರ್​ಗಳು ಒಟ್ಟು 11 ಓವರ್ ಬೌಲ್ ಮಾಡಿದ್ದು ಅದರಲ್ಲಿ 5 ಓವರ್ ಮೇಡನ್ ಇದ್ದವು. ಇಬ್ಬರು ಸೇರಿ 7 ರನ್ನಿತ್ತು 10 ವಿಕೆಟ್ ಕೂಡ ಕಬಳಿಸಿದ್ದಾರೆ.

  ಇದನ್ನೂ ಓದಿ: Sanjay Bangar- ಟೀಮ್ ಇಂಡಿಯಾ ಮಾಜಿ ಕೋಚ್ ಸಂಜಯ್ ಬಂಗಾರ್ ಈಗ ಆರ್​ಸಿಬಿ ಮುಖ್ಯ ಕೋಚ್

  ಅಥರ್ವ ತಯಿದೆ ಕೇವಲ ಬೌಲಿಂಗ್ ಅಷ್ಟೇ ಅಲ್ಲ ಬ್ಯಾಟಿಂಗ್​ನಲ್ಲೂ ಮಿಂಚಿದ್ದಾರೆ. ಮಣಿಪುರ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 21 ಬಾಲ್​ನಲ್ಲಿ 46 ರನ್ ಗಳಿಸಿ ಗಮನ ಸೆಳೆದರು. ಸಿಕ್ಕಿಂ ವಿರುದ್ಧದ ಪಂದ್ಯದಲ್ಲೂ ಅವರು ಉತ್ತಮ ಬ್ಯಾಟಿಂಗ್ ನಡೆಸಿದ್ದರು.

  ಮಣಿಪುರ್ ವಿರುದ್ಧದ ಪಂದ್ಯದಲ್ಲಿ:
  ಅಕ್ಷಯ್ ಕಾರ್ನೇವಾರ್: 4 ಓವರ್ 4 ಮೇಡನ್ 0 ರನ್ 2 ವಿಕೆಟ್
  ಅಥರ್ವ ತಯಿದೆ: 1 ಓವರ್ 1 ಮೇಡನ್ 0 ರನ್ 2 ವಿಕೆಟ್

  ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ:
  ಅಕ್ಷಯ್ ಕಾರ್ನೇವಾರ್: 4 ಓವರ್ 0 ಮೇಡನ್ 5 ರನ್ 4 ವಿಕೆಟ್
  ಅಥರ್ವ ತಯಿದೆ: 2 ಓವರ್ 0 ಮೇಡನ್ 2 ರನ್ 2 ವಿಕೆಟ್

  ವಿದರ್ಭದ ಮುಂದಿನ ಪಂದ್ಯ:

  ಪ್ಲೇಟ್ ಗ್ರೂಪ್​ನಲ್ಲಿ ಅಗ್ರಸ್ಥಾನದೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ವಿದರ್ಭ ತಂಡ ನವೆಂಬರ್ 16ರಂದು ತಮಿಳುನಾಡು ತಂಡವನ್ನ ಎದಿರುಗೊಳ್ಳಲಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

  ಇದನ್ನೂ ಓದಿ: T20 Cricket- ಪ್ರೀಕ್ವಾರ್ಟರ್​ನಲ್ಲಿ ಕರ್ನಾಟಕಕ್ಕೆ ಸೌರಾಷ್ಟ್ರ ಸವಾಲು; ಇಲ್ಲಿದೆ ನಾಕೌಟ್ ಪಟ್ಟಿ

  ನ. 16ರಂದು ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು:
  1) ತಮಿಳುನಾಡು vs ವಿದರ್ಭಾ
  2) ಕರ್ನಾಟಕ vs ಸೌರಾಷ್ಟ್ರ
  3) ಹಿಮಾಚಲ ಪ್ರದೇಶ vs ಮಧ್ಯ ಪ್ರದೇಶ

  ನ. 18ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯಗಳು:
  1) ಮಹಾರಾಷ್ಟ್ರ vs TBD
  2) ಬಂಗಾಳ vs TBD
  3) ರಾಜಸ್ಥಾನ್ vs TBD
  4) ಗುಜರಾತ್ vs ಹೈದರಾಬಾದ್
  Published by:Vijayasarthy SN
  First published: