IPL Digital Rights: ಕ್ರೀಡಾ ಕ್ಷೇತ್ರದಲ್ಲಿನ ಏಕಸ್ವಾಮ್ಯ ಮುರಿದ Viacom18

Viacom18 ಪ್ರಮುಖ ಡಿಜಿಟಲ್ ಮಾಧ್ಯಮ, ಮನರಂಜನೆ ಮತ್ತು ಕ್ರೀಡಾ ತಾಣವಾಗಿ ಹೊರಹೊಮ್ಮುವ ಮೂಲಕ ಪ್ರತಿಷ್ಠಿತ ಪ್ರಸಾರಕರು ಮತ್ತು ಡಿಜಿಟಲ್ ಕಂಪನಿಗಳನ್ನು ಮೀರಿಸಿದೆ.

ನೀತಾ ಅಂಬಾನಿ

ನೀತಾ ಅಂಬಾನಿ

 • Share this:
  ಐಪಿಎಲ್‌ನ ಡಿಜಿಟಲ್ ಮಾಧ್ಯಮ ಹಕ್ಕುಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ವಯಾಕಾಮ್ 18 ಭಾರತದ ಪ್ರಮುಖ ಕ್ರೀಡಾ ವೇದಿಕೆಯಾಗಿ ಹೊರಹೊಮ್ಮಿದೆ. ಈಮೂಲಕ ಪ್ರಪಂಚದ ಉನ್ನತ ಕ್ರೀಡಾ ಲೀಗ್‌ಗಳನ್ನು ಪ್ರಸಾರ (IPL Digital Media Rights) ಮಾಡಲು ರೆಡಿಯಾಗಿದೆ. Viacom18 ಆಸ್ಟ್ರೇಲಿಯಾ, ಇಂಗ್ಲೆಂಡ್, ಕೆರಿಬಿಯನ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಪ್ರಮುಖ ವಿದೇಶಿ ಮಾರುಕಟ್ಟೆಗಳಿಗೆ IPL ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಸಹ ಗೆದ್ದಿದೆ. ಅಲ್ಲದೇ ಈ ಹೊಸ ಐಪಿಎಲ್​ ಡಿಜಿಟಲ್​ ಹಕ್ಕು ಲಭಿಸಿರುವುದು ಈಗ ದೇಶದ ಪ್ರತಿಯೊಂದು ಮೂಲೆ ಮೂಲೆಗೆ ಭಾರತದ ಅತಿದೊಡ್ಡ ಸ್ಫೋರ್ಟ್ಸ್​ ಲೀಗ್​ ಅನ್ನು ಕೊಂಡೊಯ್ಯಲು ಸಾಧ್ಯವಾಗಲಿದೆ. 

  ಅಲ್ಲದೇ ಇದು 60 ಮಿಲಿಯನ್ ಫ್ರೀ ಡಿಶ್ ಹೊಂದಿರುವ ಮನೆಗಳನ್ನು ಒಳಗೊಂಡಂತೆ ಭಾರತದ ಪ್ರತಿಯೊಂದು ಭಾಗದಲ್ಲಿರುವ ಪ್ರತಿಯೊಬ್ಬ ಭಾರತೀಯರಿಗೂ IPL ಲಭ್ಯವಾಗುವಂತೆ ಮಾಡುತ್ತದೆ ಎಂಬುದು ವಿಶೇಷ.

  ಏಕಸ್ವಾಮ್ಯ ಮುರಿದ ಹೆಗ್ಗಳಿಕೆ
  ಹೊಸ ಒಪ್ಪಂದವು ಒಂದೇ ಬ್ರಾಡ್‌ಕಾಸ್ಟರ್‌ನ ಏಕಸ್ವಾಮ್ಯವನ್ನು ಸಹ ಕೊನೆಗೊಳಿಸಿದೆ. ಸೋನಿಯು ಮೊದಲ 10 ವರ್ಷಗಳಿಗೆ (2008-17) 8200 ಕೋಟಿ ರೂಪಾಯಿಗಳನ್ನು ಪಾವತಿಸಿ ಹಕ್ಕುಗಳನ್ನು ಪಡೆದುಕೊಂಡಿದ್ದರೆ, 16347.50 ಬಿಡ್ ಬೆಲೆಯೊಂದಿಗೆ ಸ್ಟಾರ್ ಮುಂದಿನ ಐದು ವರ್ಷಗಳವರೆಗೆ ಅದನ್ನು ಗೆದ್ದುಕೊಂಡಿತು. ಇದೀಗ ಆಟದ ಮೈದಾನಕ್ಕೆ ವಯಾಕಾಮ್ 18 ಲಗ್ಗೆಯಿಟ್ಟಿದೆ.

  ದೇಶದ ಮೂಲೆ ಮೂಲೆಗೂ ಕ್ರಿಕೆಟ್
  Viacom18 ಪ್ರಮುಖ ಡಿಜಿಟಲ್ ಮಾಧ್ಯಮ, ಮನರಂಜನೆ ಮತ್ತು ಕ್ರೀಡಾ ತಾಣವಾಗಿ ಹೊರಹೊಮ್ಮುವ ಮೂಲಕ ಪ್ರತಿಷ್ಠಿತ ಪ್ರಸಾರಕರು ಮತ್ತು ಡಿಜಿಟಲ್ ಕಂಪನಿಗಳನ್ನು ಮೀರಿಸಿದೆ. ಈ IPL ಹಕ್ಕುಗಳೊಂದಿಗೆ, Viacom18 ದೇಶದ ಪ್ರತಿಯೊಂದು ಮೂಲೆ ಮೂಲೆಗೆ ಭಾರತದ ಅತಿದೊಡ್ಡ ಕ್ರೀಡಾಕೂಟವನ್ನು ಕೊಂಡೊಯ್ಯಲಿದೆ ಎಂದು ಕಂಪನಿ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

  ಇದನ್ನೂ ಓದಿ: Viacom 18 ತೆಕ್ಕೆಗೆ IPL ಪಂದ್ಯಗಳ ಡಿಜಿಟಲ್ ಪ್ರಸರಣಾ ಹಕ್ಕು, ಇನ್ನು ಮನೆಮನೆಯಲ್ಲೂ ಕ್ರಿಕೆಟ್  ಹಕ್ಕುಗಳ ಪ್ಯಾಕೇಜ್ಪ್ರತಿ ಪಂದ್ಯಕ್ಕೆ ಹಕ್ಕುಗಳ ಶುಲ್ಕ (ಕೋಟಿ ರೂ. ಗಳಲ್ಲಿ)
  ಭಾರತೀಯ ಉಪಖಂಡ ಡಿಜಿಟಲ್ ಹಕ್ಕುಗಳ ಪ್ಯಾಕೇಜ್50.00
  ಭಾರತೀಯ ಉಪಖಂಡದ ಡಿಜಿಟಲ್ ಹಕ್ಕುಗಳ ವಿಶೇಷ ಪ್ಯಾಕೇಜ್33.24
  ಅಂತಾರಾಷ್ಟ್ರೀಯ ಪ್ರಾಂತ್ಯಗಳು:
  ಗುಂಪು A (ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸಿಂಗಾಪುರ್, ಕೆರಿಬಿಯನ್)0.30
  ಗ್ರೂಪಿಂಗ್ ಸಿ (ದಕ್ಷಿಣ ಆಫ್ರಿಕಾ, ಉಪ ಸಹಾರನ್ ಆಫ್ರಿಕಾ)0.65
  ಗ್ರೂಪಿಂಗ್ ಡಿ (ಯುಕೆ, ಐರ್ಲೆಂಡ್, ಕಾಂಟಿನೆಂಟಲ್ ಯುರೋಪ್) 0.50

  ಸಾಕರ್ (FIFA ವರ್ಲ್ಡ್ ಕಪ್, ಲಾ ಲಿಗಾ, ಸೀರಿ A ಮತ್ತು Ligue 1), ಬ್ಯಾಡ್ಮಿಂಟನ್, ಟೆನ್ನಿಸ್ ಮತ್ತು ಬಾಸ್ಕೆಟ್‌ಬಾಲ್ NBA) ನಲ್ಲಿ ಹಕ್ಕುಗಳನ್ನು ಪಡೆದ ನಂತರ, Viacom18 ಮೊದಲ ಬಾರಿ ಕ್ರಿಕೆಟ್​ ಹಕ್ಕುಗಳನ್ನು ಸಹ ಪಡೆದುಕೊಂಡಿದೆ. IPL ಡಿಜಿಟಲ್​ ಹಕ್ಕು Viacom18 ಮತ್ತು ಅದರ ಪ್ಲಾಟ್‌ಫಾರ್ಮ್‌ಗಳನ್ನು ದೇಶದ ಅತಿದೊಡ್ಡ ಕ್ರೀಡಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದನ್ನಾಗಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.  ಅಲ್ಲದೇ, ದೊಡ್ಡ, ಸಣ್ಣ ಹಾಗೂ ಹೆಚ್ಚು ತೊಡಗಿಸಿಕೊಂಡಿರುವ ಪ್ರೇಕ್ಷಕರನ್ನು ತಲುಪಲು ಜಾಹೀರಾತುದಾರರಿಗೆ ಇದು ಅಸಾಧಾರಣ ಅವಕಾಶವಾಗಿದೆ.

  ಇದನ್ನೂ ಓದಿ: IPL Digital Rights: ಲೀಗ್ ಜೊತೆ ನಮ್ಮ ಸಂಬಂಧ ಇನ್ನಷ್ಟು ಗಾಢ, ಇದುವೇ ನಮಗೆ ಹೆಮ್ಮೆ ಎಂದ ನೀತಾ ಅಂಬಾನಿ

  ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನೀತಾ ಅಂಬಾನಿ ಅವರು, ಐಪಿಎಲ್ ಭಾರತದಲ್ಲಿ ಅತ್ಯುತ್ತಮವಾದುದನ್ನು ನಿರೂಪಿಸಲಿದೆ. ಪ್ರಸ್ತುತ ಡಿಜಿಟಲ್ ಕ್ರಾಂತಿಗೆ ಒಳಗಾಗುತ್ತಿರುವ ದೇಶದ ಪ್ರತಿಯೊಂದು ಮನೆಗೂ ಈ ಐಪಿಎಲ್ ಪಂದ್ಯಗಳು ತಲುಪುತ್ತದೆ ಎಂದು ಹೇಳಿದ್ದಾರೆ. ಈಮೂಲಕ ಭವಿಷ್ಯದ ಕುರಿತು ಅವರು ಸುಳಿವು ನೀಡಿದ್ದಾರೆ.
  Published by:guruganesh bhat
  First published: