ಹೇಳಿ ಕೇಳಿ ಇಂದು ವಾಲೆಂಟೈನ್ಸ್ ಡೇ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯರೂ ಕೂಡ ಪ್ರೇಮಿಗಳ ದಿನಾಚರಣೆಯ ಶುಭಾಶಗಳನ್ನು ತಿಳಿಸಿದ್ದಾರೆ. ಹೀಗೆ ತಮ್ಮ ಫಸ್ಟ್ ಲವ್ ಬಗ್ಗೆ ತಿಳಿಸಿದವರಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಒಬ್ಬರು.
ಆದರೆ ಸಚಿನ್ ಅವರ ಫಸ್ಟ್ ಲವ್ ಅಂಜಲಿ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಈ ಹಿಂದೆ ಮಾಸ್ಟರ್ ಬ್ಲಾಸ್ಟರ್ ಅವರ ಲವ್ ಸ್ಟೋರಿ ಭಾರೀ ವೈರಲ್ ಆಗಿತ್ತು. ತಮ್ಮ 17ನೇ ವಯಸ್ಸಿನಲ್ಲಿ ಅಂಜಲಿಯವರನ್ನು ತೆಂಡೂಲ್ಕರ್ ಭೇಟಿಯಾಗಿದ್ದರು. ಆಗ ಅಂಜಲಿಯ ವಯಸ್ಸು 25. ಅಂದರೆ ಇಬ್ಬರ ವಯಸ್ಸಿನ ಅಂತರ 8 ವರ್ಷಗಳು. ಆ ಭೇಟಿ ಇಬ್ಬರನ್ನು ಪ್ರಣಯ ಜೋಡಿಗಳನ್ನಾಗಿಸಿತು.
ಬರೋಬ್ಬರಿ 5 ವರ್ಷಗಳ ಕಾಲ ಪ್ರೇಮಲೋಕದಲ್ಲಿ ತೇಲಾಡಿದ ಜೋಡಿ 1995 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅದಕ್ಕೂ ಮುನ್ನ ನನಗೊಂದು ಲವ್ ಇತ್ತು. ಅದು ಹೀಗಲೂ ಇದೆ ಎಂಬುದನ್ನು ಸಚಿನ್ ಪ್ರೇಮಿಗಳ ದಿನಾಚರಣೆಯಂದು ಬಹಿರಂಗಪಡಿಸಿದ್ದಾರೆ.
ಅದು ಮತ್ಯಾರ ಮೇಲೂ ಅಲ್ಲ. ತಮ್ಮ ಬ್ಯಾಟಿಂಗ್ ಮೇಲೆ ಎಂದು ತಮ್ಮ ಸಾಮಾಜಿಕ ಖಾತೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ತಿಳಿಸಿದ್ದಾರೆ. ಅಲ್ಲದೆ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಪ್ರಕಟಿಸಿ ಇದುವೇ ತಮ್ಮ ಮೊದಲ ಪ್ರೇಮ ಎಂದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಸಚಿನ್ ಅವರ ಮೊದಲ ಪ್ರೇಮ ತುಂಬಾ ಗಾಢವಾಗಿದ್ದರಿಂದ ಅವರು ಕ್ರಿಕೆಟ್ ದೇವರಾಗಿದ್ದಾರೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
My First Love! 😀 pic.twitter.com/KsYEYyLaxD
— Sachin Tendulkar (@sachin_rt) February 14, 2020
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮುಂದಿನ ಕನ್ನಡ ಸಿನಿಮಾ ಯಾವುದು? ಬಿಟ್ಟು ಕೊಟ್ರು ಒಂದು ಸಣ್ಣ ಸುಳಿವು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ