Ranji Trophy: ಮಿಥುನ್ ಆರ್ಭಟಕ್ಕೆ ಉತ್ತರ ತತ್ತರ; ಕರ್ನಾಟಕ ಭರ್ಜರಿ ಬ್ಯಾಟಿಂಗ್

ಉತ್ತರ ಪ್ರದೇಶ 111.2 ಓವರ್​ನಲ್ಲಿ 281 ರನ್​ಗೆ ಆಲೌಟ್ ಆಯಿತು. ರಾಜ್ಯ ತಂಡದ ಪರ ಅಭಿಮನ್ಯು ಮಿಥುನ್ 6 ವಿಕೆಟ್ ಕಿತ್ತು ಮಿಂಚಿದರು.

Vinay Bhat | news18-kannada
Updated:December 18, 2019, 4:10 PM IST
Ranji Trophy: ಮಿಥುನ್ ಆರ್ಭಟಕ್ಕೆ ಉತ್ತರ ತತ್ತರ; ಕರ್ನಾಟಕ ಭರ್ಜರಿ ಬ್ಯಾಟಿಂಗ್
ಅಭಿಮನ್ಯು ಮಿಥುನ್
  • Share this:
ಹುಬ್ಬಳ್ಳಿ (ಡಿ. 18): ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ರೋಚಕ ಜಯ ಸಾಧಿಸಿರುವ ಕರ್ನಾಟಕ ತಂಡ ಎರಡನೇ ಗೆಲುವನ್ನು ಎದುರು ನೋಡುತ್ತಿದೆ. ಅಭಿಮನ್ಯು ಮಿಥುನ್ ಬೌಲಿಂಗ್ ದಾಳಿಗೆ ತತ್ತರಿಸಿದ ಉತ್ತರ 281 ರನ್​ಗೆ ಆಲೌಟ್ ಆಯಿತು. ಬಳಿಕ ಇನ್ನಿಂಗ್ಸ್​​ ಆರಂಭಿಸಿರುವ ಕರ್ನಾಟಕ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ.

ಓಪನರ್​ಗಳಾದ ದೇಗ ನಿಸ್ಚಲ್(36) ಹಾಗೂ ದೇವದತ್ ಪಡಿಕ್ಕಲ್ ಮೊದಲ ವಿಕೆಟ್​ಗೆ 91 ರನ್​ಗಳ ಜೊತೆಯಾಟ ಆಡಿದರು. ಬಳಿಕ ಬಂದ ರವಿಕುಮಾರ್ ಸಮರ್ಥ್​(11) ಬೇಗನೆ ಔಟ್ ಆದರಾದರು ಪಡಿಕ್ಕಲ್ ಅರ್ಧಶತಕ ಸಿಡಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಪಡಿಕ್ಕಲ್ 108 ಎಸೆತಗಳಲ್ಲಿ 10 ಬೌಂಡರಿ ಬಾರಿಸಿ 74 ರನ್ ಕಲೆಹಾಕಿ ಔಟ್ ಆದರು.

India vs West Indies Live: ರೋಹಿತ್-ರಾಹುಲ್ ಭರ್ಜರಿ ಶತಕ; ಬೃಹತ್ ಮೊತ್ತದತ್ತ ಭಾರತ

ಇದಕ್ಕೂ ಮೊದಲು ನಿನ್ನೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಉತ್ತರ ಪ್ರದೇಶ ತಂಡ ಮೊದಲ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತು. ಮಾಜಿ ಅಂಡರ್-19 ವಿಶ್ವಕಪ್ ಕ್ರಿಕೆಟಿಗರಾದ 18 ವರ್ಷದ ಆರ್ಯನ್ ಜುಯಲ್ ಅಮೋಘ ಶತಕ ಬಾರಿಸಿದ್ದು ಮೊದಲ ದಿನದ ಹೈಲೈಟ್ ಎನಿಸಿತು.

 



ಅಭಿಮನ್ಯು ಮಿಥುನ್ ಅವರ ಮಾರಕ ಬೌಲಿಂಗ್ ನಡುವೆ ಆರ್ಯನ್ ಅವರು ಅಪ್ರತಿಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಐದನೇ ಕ್ರಮಾಂಕದಲ್ಲಿ ಬಂದ ಮೊಹಮ್ಮದ್ ಸೇಫ್ ಅವರು ಆರ್ಯನ್​ಗೆ ಸರಿಯಾದ ಜೋಡಿಯಾಗಿ ನಿಂತರು. ಆರ್ಯನ್ ಮತ್ತು ಸೇಫ್ ಇಬ್ಬರೂ ನಾಲ್ಕನೇ ವಿಕೆಟ್​ಗೆ 109 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದು ವಿಶೇಷ. ಆರ್ಯನ್ ಅಮೋಘ 109 ರನ್ ಸಿಡಿಸಿ ಔಟಾದರು.

ಐಪಿಎಲ್ ಹರಾಜಿಗೆ ಕ್ಷಣಗಣನೆ; ಯಾವ ತಂಡದ ಬಳಿ ಎಷ್ಟು ಹಣ?, ಎಷ್ಟು ಪ್ಲೇಯರ್ಸ್​ ಖರೀದಿಸಬಹುದು?

ಅಂತಿಮವಾಗಿ ಉತ್ತರ ಪ್ರದೇಶ 111.2 ಓವರ್​ನಲ್ಲಿ 281 ರನ್​ಗೆ ಆಲೌಟ್ ಆಯಿತು. ರಾಜ್ಯ ತಂಡದ ಪರ ಅಭಿಮನ್ಯು ಮಿಥುನ್ 6 ವಿಕೆಟ್ ಕಿತ್ತು ಮಿಂಚಿದರೆ, ರೋನಿತ್ ಮೋರೆ ಹಾಗೂ ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದರು.

First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ