ನಾನು ಅಂಡರ್-19 ವಿಶ್ವಕಪ್ ಗೆದ್ದು 7 ವರ್ಷಗಳು ಕಳೆದಿವೆ..! ಆದರೆ..; ಉನ್ಮುಕ್ತ್​ ಚಂದ್ ಬೇಸರದ ಮಾತು

ನನ್ನ ಕ್ರಿಕೆಟ್ ಹಾದಿಯನ್ನು ಬೇರೆಯವರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ವಿರಾಟ್ ಕೊಹ್ಲಿ, ಪೃಥ್ವಿ ಶಾ ಅವರಿಗೆ ಬೇಗನೆ ಟೀಂ ಇಂಡಿಯಾ ಬಾಗಿಲು ತೆರೆಯಿತು. ನನಗೆ ನನ್ನದೆ ಆದ ವಿಭಿನ್ನವಾದ ಹಾದಿ ಮತ್ತು ಹೆಸರಿದೆ- ಉನ್ಮುಕ್ತ್​ ಚಂದ್

ಉನ್ಮುಕ್ತ್​​ ಚಂದ್

ಉನ್ಮುಕ್ತ್​​ ಚಂದ್

  • Share this:
ಬೆಂಗಳೂರು (ಸೆ. 04): ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಂಚಿತರಾಗಿರುವ ಸಾಲಿನಲ್ಲಿ 2012 ಅಂಡರ್-19 ಹೀರೋ, ಪ್ರತಿಭಾನ್ವಿತ ಆಟಗಾರ ಉನ್ಮುಕ್ತ್​ ಚಂದ್ ಪ್ರಮುಖರು. ದೇಶೀಯ ಕ್ರಿಕೆಟ್​ನಲ್ಲಿ ಎಷ್ಟೇ ಸಾಧನೆ ಮಾಡಿದರು ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಾತ್ರ ಇವರಿಗೆ ಸ್ಥಾನ ಸಿಗಲಿಲ್ಲ.

2012 ರ ಅಂಡರ್-19 ವಿಶ್ವಕಪ್​​ನಲ್ಲಿ ಭಾರತ ತಂಡವನ್ನು ಮುನ್ನಡೆಸಿ ಕಪ್ ಗೆಲ್ಲಿಸಿ ಕೊಟ್ಟಿದ್ದರು. ಈ ಸಂದರ್ಭ ಕ್ರಿಕೆಟ್ ದಿಗ್ಗಜರು ಉನ್ಮುಕ್ತ್​ ಚಂದ್​ರನ್ನು ಹಾಡಿ ಹೊಗಳಿದ್ದರು. ಟೀಂ ಇಂಡಿಯಾದ ಮುಂದಿನ ಭರವಸೆಯ ಆಟಗಾರ, ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ, ಮೊಹಮ್ಮದ್ ಕೈಫ್ ರೀತಿಯಲ್ಲಿ ಚಂದ್ ಬೆಳಗಲಿದ್ದಾರೆ ಎಂಬ ಮಾತುಗಳು ಬಂದಿತ್ತು.

ಇದಾಗಿ ಸುಮಾರು 7 ವರ್ಷ ಕಳೆದಿವೆ. ಇವರ ಜೊತೆಯಿದ್ದ ಹನುಮಾ ವಿಹಾರಿ, ಸಂದೀಪ್ ಶರ್ಮಾ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದರು. ಆದರೆ, ಉನ್ಮಕ್ತ್​​ ಚಂದ್​ಗೆ ಮಾತ್ರ ಟೀಂ ಇಂಡಿಯಾದಲ್ಲಿ ಇಂದಿಗೂ ಸ್ಥಾನ ಸಿಗಲಿಲ್ಲ.

Unmukt Chand on comparisons with Virat Kohli and Prithvi Shaw: ‘My journey is very different
ಉನ್ಮುಕ್ತ್​​ ಚಂದ್


ವೆಸ್ಟ್​ ಇಂಡೀಸ್​ನಲ್ಲಿ ಕೊಹ್ಲಿ ಆಟೋಗ್ರಾಫ್​ಗಾಗಿ ಮುಗಿಬಿದ್ದ ಜನರು; ಆದರೆ ಅಲ್ಲಿ ಆಗಿದ್ದೇ ಬೇರೆ!

ಸದ್ಯ ಈ ಬಗ್ಗೆ ಮಾತನಾಡಿರುವ ಚಂದ್, ನನಗಿನ್ನೂ ಟೀಂ ಇಂಡಿಯಾದಲ್ಲಿ ಆಡುತ್ತೇನೆ ಎಂಬ ಭರವಸೆ ಇದೆ. ಆದರೆ, ವಿರಾಟ್ ಕೊಹ್ಲಿ, ಪೃಥ್ವಿ ಶಾಗಿಂತ ನನ್ನ ಹಾದಿ ಭಿನ್ನವಾಗಿದೆ ಎಂದಿದ್ದಾರೆ.

‘ನಾನು ಅಂಡರ್-19 ವಿಶ್ವಕಪ್ ಗೆದ್ದು ಏಳು ವರ್ಷಗಳು ಕಳೆದಿವೆ. ಆ ಬಳಿಕ ಸಾಕಷ್ಟು ಬದಲಾವಣೆಯಾಗಿವೆ. ಏಳು ವರ್ಷದ ಹಿಂದಿನದು ನನಗೆ ಇಂದಿಗೂ ಅದ್ಭುತ ಕ್ಷಣ. ಅಂತಃ ದೊಡ್ಡ ಟೂರ್ನಮೆಂಟ್​ನಲ್ಲಿ ನನಗೆ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಅಲ್ಲದೆ ಕಪ್ ಗೆದ್ದಿದ್ದೆವು. ಆ ಕ್ಷಣ ನನ್ನ ಹೃದಯದಲ್ಲಿ ಹಚ್ಚ ಹಸಿರಾಗಿರುತ್ತದೆ’‘ಆದರೀಗ ಕಾಲ ಬದಲಾಗಿದೆ, ನಾವು ಮುಂದುವರೆಯಬೇಕು. ನಾನು ನನ್ನ ತಂಡಕ್ಕಾಗಿ, ದೇಶಕ್ಕಾಗಿ ಆಡಬೇಕು. ನನಗೀಗ ಕೇವಲ 26 ವರ್ಷ. ಟೀಂ ಇಂಡಿಯಾದಲ್ಲಿ ಆಡಲು ಶ್ರಮ ವಹಿಸುತ್ತಿದ್ದೇನೆ. ಮತ್ತು ಅದನ್ನು ಸಾಧಿಸುತ್ತೇನೆ. ಇದು ನನ್ನ ಕೊನೆಯ ಕನಸು. ಕೆಲವರಿಗೆ ಅವಕಾಶ ಕೂಡಲೇ ಬರುತ್ತೆ…ಇನ್ನೂ ಕೆಲವರು ಕಾಯಬೇಕು’

‘ನನ್ನ ಕ್ರಿಕೆಟ್ ಹಾದಿಯನ್ನು ಬೇರೆಯವರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ವಿರಾಟ್ ಕೊಹ್ಲಿ, ಪೃಥ್ವಿ ಶಾ ಅವರಿಗೆ ಬೇಗನೆ ಟೀಂ ಇಂಡಿಯಾ ಬಾಗಿಲು ತೆರೆಯಿತು. ನನಗೆ ನನ್ನದೆ ಆದ ವಿಭಿನ್ನವಾದ ಹಾದಿ ಮತ್ತು ಹೆಸರಿದೆ. ಸದ್ಯದಲ್ಲೆ ಭಾರತ ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುತ್ತೇನೆ ಎಂಬ ಭರವಸೆ ನನ್ನಲಿದೆ’ ಎಂದು ಚಂದ್ ಹೇಳಿದ್ದಾರೆ.

First published: