• Home
 • »
 • News
 • »
 • sports
 • »
 • BBL- ಉನ್ಮುಕ್ತ್ ಚಂದ್, ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡಲಿರುವ ಭಾರತದ ಮೊದಲ ಆಟಗಾರ

BBL- ಉನ್ಮುಕ್ತ್ ಚಂದ್, ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡಲಿರುವ ಭಾರತದ ಮೊದಲ ಆಟಗಾರ

ಉನ್ಮುಕ್ತ್ ಚಂದ್

ಉನ್ಮುಕ್ತ್ ಚಂದ್

Unmukt Chand in BBL- ಭಾರತೀಯ ಕ್ರಿಕೆಟಿಗ ಉನ್ಮುಕ್ತ್ ಚಂದ್ ಅವರು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ. ಮೆಲ್ಬೋರ್ನ್ ರೆನಿಗೇಡ್ಸ್ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಬಿಬಿಎಲ್ ಆಡುವ ಮೊದಲ ಭಾರತೀಯ ಎನಿಸಿದ್ದಾರೆ.

 • Cricketnext
 • 2-MIN READ
 • Last Updated :
 • Share this:

  ನವದೆಹಲಿ, ನ. 04: ಭಾರತದ ಐಪಿಎಲ್​ನಂತೆ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (Australia’s Big Bash League) ಬಹಳ ಹೆಸರುವಾಸಿ. ಅಲ್ಲಿ ಮಹಿಳೆಯರ ವುಮೆನ್ ಬಿಗ್ ಬ್ಯಾಷ್ ಲೀಗ್​ನಲ್ಲಿ (Indians in WBBL) ಭಾರತದ 8 ಆಟಗಾರ್ತಿಯರು ಆಡುತ್ತಿದ್ದು ಇತಿಹಾಸ ಬರೆದಿದ್ದಾರೆ. ಇದೀಗ ಪುರುಷರ ಬಿಗ್ ಬ್ಯಾಷ್ ಲೀಗ್ ಟೂರ್ನಿಗೆ ಭಾರತೀಯ ಕ್ರಿಕೆಟಿಗ ಉನ್ಮುಕ್ತ್ ಚಂದ್ (Unmukt Chand, first Indian in BBL) ಎಂಟ್ರಿ ಕೊಟ್ಟಿದ್ದಾರೆ. ಭಾರತದ ಆಟಗಾರನೊಬ್ಬ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು. ಆರೋನ್ ಫಿಂಚ್ ನೇತೃತ್ವದ ಮೆಲ್ಬೋರ್ನ್ ರೆನಿಗೇಡ್ಸ್ ತಂಡವನ್ನು (Melbourne Renegades BBL team) ಉನ್ಮುಕ್ತ್ ಸೇರಿದ್ದಾರೆ.


  28 ವರ್ಷದ ಉನ್ಮುಕ್ತ್ ಚಂದ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯದಿದ್ದರೂ ಜೂನಿಯರ್ ಕ್ರಿಕೆಟರ್ ಆಗಿ ಮೇಲೆ ಬಂದವರು. 2012ರ ಕಿರಿಯರ ವಿಶ್ವಕಪ್​ನಲ್ಲಿ ಭಾರತ ತಂಡದ ನಾಯಕರಾಗಿದ್ದವರು. ಆಗ ಆಸ್ಟ್ರೇಲಿಯಾ ವಿರುದ್ಧದ ಫೈನಲ್​ನಲ್ಲಿ ಉನ್ಮುಕ್ತ್ ಶತಕ ಭಾರಿಸಿದ್ದರು. ವಿರಾಟ್ ಕೊಹ್ಲಿಯ ಬಳಿಕ ಭಾರತಕ್ಕೆ ಉತ್ಕೃಷ್ಟ ಬ್ಯಾಟರ್ ಸಿಕ್ಕಿದನೆಂದು ಸಂಭ್ರಮ ಪಟ್ಟವರು ಬಹಳ ಮಂದಿ. ಆದರೆ, ಉನ್ಮುಕ್ತ್ ಚಂದ್ ಅವರ ಕ್ರಿಕೆಟ್ ವೃತ್ತಿಜೀವನ ನಿರೀಕ್ಷಿಸಿದಂತೆ ಗರಿಗೆದರಲಿಲ್ಲ.


  ರಣಜಿ ಹಾಗೂ ದೇಶೀಯ ಕ್ರಿಕೆಟ್​ನಲ್ಲಿ ಅವರು ಆಡಿದ್ಧಾರೆ. ಐಪಿಎಲ್​ನಲ್ಲಿ ಡೆಲ್ಲಿ, ಮುಂಬೈ ಮತ್ತು ರಾಜಸ್ಥಾನ್ ತಂಡಗಳೊಂದಿಗೆ ಆಡಿದ್ದಾರೆ. ಭಾರತ ಎ ತಂಡದಲ್ಲೂ ಅವರು ಇದ್ದರು. ಆದರೆ, ಟೀಮ್ ಇಂಡಿಯಾಗೆ ಆಯ್ಕೆ ಮಾಡುವಷ್ಟು ಗಮನ ಸೆಳೆಯಲು ಅವರಿಂದ ಆಗಿಲ್ಲ.


  ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಗುಡ್​ಬೈ:


  ಕೆಲ ದಿನಗಳ ಹಿಂದಷ್ಟೇ ಉನ್ಮುಕ್ತ್ ಚಂದ್ ಅವರು ತಾನು ಭಾರತದಲ್ಲಿ ಕ್ರಿಕೆಟ್ ವೃತ್ತಿ ಜೀವನ ಅಂತ್ಯಗೊಳಿಸಿ ವಿಶ್ವದ ಬೇರೆಡೆ ಅವಕಾಶ ಅರಸುವುದಾಗಿ ಹೇಳಿದ್ದರು. ಅದಾದ ಬಳಿಕ ಅವರು ಅಮೆರಿಕದ ಮೈನರ್ ಲೀಗ್ ಕ್ರಿಕೆಟ್ (MLC) ಟೂರ್ನಿಯಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದ ಪರ ಆಡಿದ್ದಾರೆ. ಸೆಪ್ಟೆಂಬರ್​ನಲ್ಲಿ ಮುಕ್ತಾಯಗೊಂಡ ಆ ಟೂರ್ನಿಯನ್ನು ಸಿಲಿಕಾನ್ ವ್ಯಾಲಿ ತಂಡವೇ ಗೆದ್ದಿದೆ. ಆ ಟೂರ್ನಿ ಜಯಿಸಲು ಪ್ರಮುಖ ಪಾತ್ರಧಾರಿಗಳಲ್ಲಿ ಉನ್ಮುಕ್ತ್ ಅವರೂ ಒಬ್ಬರು.


  ಇದನ್ನೂ ಓದಿ: T20 World Cup- ಭಾರತ ಮುಂದಿನ ಪಂದ್ಯಗಳನ್ನ ಎಷ್ಟು ಅಂತರದಿಂದ ಗೆಲ್ಲಬೇಕು? ಇಲ್ಲಿದೆ ಲೆಕ್ಕಾಚಾರ


  ಸದ್ಯ ಅಮೆರಿಕದಲ್ಲಿರುವ ಉನ್ಮುಕ್ತ್ ಚಂದ್ ಅವರಿಗೆ ಬಿಬಿಎಲ್​ನಲ್ಲಿ ಆಡುವ ದೊಡ್ಡ ಅವಕಾಶ ಸಿಕ್ಕಿರುವುದು ಗಮನಾರ್ಹ.


  ಬಿಬಿಎಲ್ ಸೇರ್ಪಡೆಗೆ ಉನ್ಮುಕ್ತ್ ಪ್ರತಿಕ್ರಿಯೆ:


  “ಬಹಳ ಖುಷಿಯಾಗುತ್ತಿದೆ. ಮೆಲ್ಬೋರ್ನ್ ರೆನಿಗೇಡ್ಸ್ ಕುಟುಂಬದ ಭಾಗವಾಗಿರಲು ಹೆಮ್ಮೆಯಾಗುತ್ತಿದೆ. ಬಿಗ್ ಬ್ಯಾಷ್ ಲೀಗ್ ಪಂದ್ಯಾವಳಿಯನ್ನ ನಾನು ಯಾವಾಗಲೂ ನೋಡುತ್ತಿದ್ದೆ. ಇಲ್ಲಿ ಬಂದು ಒಳ್ಳೆಯ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿದೆ.


  ಇದನ್ನೂ ಓದಿ: Unmukt Chand- 69 ಬಾಲ್​ನಲ್ಲಿ 132 ರನ್ ಚಚ್ಚಿದ ಮಾಜಿ ಐಪಿಎಲ್ ಆಟಗಾರ ಉನ್ಮುಕ್ತ್ ಚಂದ್; 15 ಫೋರ್, 7 ಸಿಕ್ಸರ್


  ”ಮೆಲ್ಬೋರ್ನ್​ಗೆ ಬಂದು ಟೂರ್ನಿಯಲ್ಲಿ ಪಾಲ್ಗೊಳ್ಳಲು ತುದಿಗಾಲಿನಲ್ಲಿ ಇದ್ದೇನೆ. ಆಸ್ಟ್ರೇಲಿಯಾದಲ್ಲಿ ಬಹಳ ಖುಷಿಯಿಂದ ಆಡಿದ್ದೇನೆ. ಮೆಲ್ಬೋರ್ನ್​ಗೆ ನಾನು ಈ ಮುಂಚೆ ಹೋಗಿಲ್ಲ. ಇಲ್ಲಿ ಬಹಳಷ್ಟು ಭಾರತೀಯರು ಇದ್ದಾರೆಂಬುದು ಗೊತ್ತು. ನಮ್ಮ ಪಂದ್ಯಗಳಿಗೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆಂದು ಭಾವಿಸಿದ್ಧೇನೆ” ಎಂದು ಉನ್ಮುಕ್ತ್ ಹೇಳಿದ್ದಾರೆ.


  ಮೆಲ್ಬೋರ್ನ್ ರೆನಿಗೇಡ್ಸ್ ತಂಡದ ಸ್ವಾಗತ:


  ಉನ್ಮುಕ್ತ್ ಚಂದ್ ಅವರು ಈ ತಿಂಗಳ ಕೊನೆಯ ವಾರದಲ್ಲಿ ಅಮೆರಿಕದಿಂದ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಬಿಬಿಎಲ್ ಲೀಗ್​ನ ಇಡೀ ಅವಧಿಯಲ್ಲಿ ಅವರು ಮೆಲ್ಬೋರ್ನ್ ರೆನಿಗೇಡ್ಸ್ ತಂಡಕ್ಕೆ ಲಭ್ಯ ಇರಲಿದ್ದಾರೆ. ಉನ್ಮುಕ್ತ್ ಅವರನ್ನ ಬರಮಾಡಿಕೊಳ್ಳಲು ತಂಡವೂ ಉತ್ಸುಕವಾಗಿದೆ.


  ಇದನ್ನೂ ಓದಿ: Rahul Dravid- ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ


  “ಉನ್ಮುಕ್ತ್ ಅವರು ತಂಡದಲ್ಲಿ ಇರುವುದು ಸಂತೋಷವಾಗಿದೆ. ರೆನಿಗೇಡ್ ಸದಸ್ಯನಾಗಿ ಅವರಿಂದ ಬಹಳ ನಿರೀಕ್ಷೆಯಲ್ಲಿದ್ದೇವೆ. ಬಿಬಿಎಲ್​ನಲ್ಲಿ ಆಡುವ ಮೊದಲ ಭಾರತೀಯ ಆಟಗಾರನೆಂದು ಇತಿಹಾಸ ಸೃಷ್ಟಿಸಿದ್ದಾರೆ. ನಮ್ಮ ಕ್ಲಬ್​ಗೂ, ನಮ್ಮ ಫ್ಯಾನ್ಸ್​ಗೂ ಮತ್ತು ಲೀಗ್​ಗೂ ಇದು ಒಳ್ಳೆಯ ವಿಚಾರ” ಎಂದು ಮೆಲ್ಬೋರ್ನ್ ರೆನಿಗೇಡ್ಸ್ ತಂಡದ ಜನರಲ್ ಮ್ಯಾನೇಜರ್ ಜೇಮ್ಸ್ ರೋಸನ್​ಗಾರ್ಟನ್ ತಿಳಿಸಿದ್ಧಾರೆ.


  ಆರೋನ್ ಫಿಂಚ್ ನಾಯಕ:


  ಮೆಲ್ಬೋರ್ನ್ ರೆನಿಗೇಡ್ಸ್ ತಂಡಕ್ಕೆ ಆರೋನ್ ಫಿಂಚ್ ನಾಯಕರಾಗಿದ್ದಾರೆ. ಶೌನ್ ಮಾರ್ಷ್, ಜೇಮ್ಸ್ ಪ್ಯಾಟಿನ್ಸನ್, ಕೇನ್ ರಿಚರ್ಡ್ಸನ್, ನಿಕ್ ಮ್ಯಾಡಿನ್ಸನ್ ಅವರಂತ ದಿಗ್ಗಜರೂ ಈ ತಂಡದಲ್ಲಿದ್ದಾರೆ.


  ಮೆಲ್ಬೋರ್ನ್ ರೆನಿಗೇಡ್ಸ್ ತಂಡ: ಆರೋನ್ ಫಿಂಚ್, ಕ್ಯಾಮರಾನ್ ಬೋಯ್ಸೆ, ಉನ್ಮುಕ್ತ್ ಚಂದ್, ಜ್ಯಾಕ್ ಇವಾನ್ಸ್, ಜೇಕ್ ಫ್ರೇಸರ್-ಮೆಕ್​ಗುರ್ಕ್, ಸ್ಯಾಮ್ ಹಾರ್ಪರ್, ಮಾರ್ಕಸ್ ಹ್ಯಾರಿಸ್, ಮೆಕೆಂಜೀ ಹಾರ್ವೆ, ಜೋಶ್ ಲಾಲೋರ್, ನಿಕ್ ಮ್ಯಾಡಿನ್ಸನ್, ಶೌನ್ ಮಾರ್ಷ್, ಜೇಮ್ಸ್ ಪ್ಯಾಟಿನ್ಸನ್, ಮಿಶೆಲ್ ಪೆರಿ, ಜ್ಯಾಕ್ ಪ್ರೆಸ್ಟ್​ವಿಡ್ಜ್, ಕೇನ್ ರಿಚರ್ಡ್ಸನ್, ವಿಲ್ ಸದರ್​ಲ್ಯಾಂಡ್, ರೀಸ್ ಟೋಪ್ಲೀ.

  Published by:Vijayasarthy SN
  First published: