• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ICC U19 World Cup: ಫೈನಲ್​ನಲ್ಲಿ ಆಟಗಾರರ ಜಗಳ; ಬಾಂಗ್ಲಾ 3, ಭಾರತದ ಇಬ್ಬರು ಸ್ಟಾರ್ ಆಟಗಾರರ ವಿರುದ್ಧ ಕ್ರಮ!

ICC U19 World Cup: ಫೈನಲ್​ನಲ್ಲಿ ಆಟಗಾರರ ಜಗಳ; ಬಾಂಗ್ಲಾ 3, ಭಾರತದ ಇಬ್ಬರು ಸ್ಟಾರ್ ಆಟಗಾರರ ವಿರುದ್ಧ ಕ್ರಮ!

ಮೈದಾನದಲ್ಲಿ ಕೈ ಮಿಲಾಯಿಸುತ್ತಿರುಯವ ಉಭಯ ತಂಡದ ಆಟಗಾರರು.

ಮೈದಾನದಲ್ಲಿ ಕೈ ಮಿಲಾಯಿಸುತ್ತಿರುಯವ ಉಭಯ ತಂಡದ ಆಟಗಾರರು.

Under 19 World Cup Final 2020: ಬಾಂಗ್ಲಾ ಆಟಗಾರನೋರ್ವ ಭಾರತೀಯನ ಜೊತೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಕುರಿತಾದ ವಿಡಿಯೋ ಕೂಡ ವೈರಲ್​ ಆಗಿತ್ತು.

  • Share this:

    ಅಂಡರ್-19 ವಿಶ್ವಕಪ್ ಅನ್ನು ಚೊಚ್ಚಲ ಬಾರಿಗೆ ಗೆದ್ದು ಬೀಗಿದ ಖುಷಿಯಲ್ಲಿ ಬಾಂಗ್ಲಾದೇಶ ಕಿರಿಯರ ಸಂಭ್ರಮ ಮೈದಾನದಲ್ಲಿ ಮಿತಿ ಮೀರಿತ್ತು. ಸೋತ ಭಾರತೀಯರ ಮುಂದೆ ಅಸಭ್ಯವಾಗಿ ವರ್ತಿಸಿದ್ದರು. ಸದ್ಯ ಈ ವಿಚಾರವನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ.


    ಫೈನಲ್ ಪಂದ್ಯದಲ್ಲಿ ಗೆದ್ದ ನಂತರ ಬಾಂಗ್ಲಾದೇಶ ಅಂಡರ್-19 ತಂಡದ ಆಟಗಾರರು ಭಾರತ ಆಟಗಾರರ ಮುಂದೆ ಉದ್ಧಟತನ ಮೆರೆದಿದ್ದರು. ಭಾರತೀಯ ಆಟಗಾರರನ್ನು ಕಿಚಾಯಿಸಿದ್ದು ಅಲ್ಲದೆ ದೈಹಿಕ ಹಲ್ಲೆಗೂ ಮುಂದಾಗಿದ್ದು ಇದನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಗಂಭೀರವಾಗಿ ಪರಿಗಣಿಸಿದೆ ಎಂದು ಟೀಂ ಇಂಡಿಯಾ ವ್ಯವಸ್ಥಾಪಕ ಅನಿಲ್ ಪಟೇಲ್ ಹೇಳಿದ್ದಾರೆ.


    NZ vs IND, 3rd ODI LIVE: ಟೀಂ ಇಂಡಿಯಾ ಮತ್ತೆ ಕಳಪೆ ಬ್ಯಾಟಿಂಗ್; 3 ವಿಕೆಟ್ ಪತನ


    ಇದರಂತೆ ಸದ್ಯ ಬಾಂಗ್ಲಾದೇಶದ ಮೂವರು ಹಾಗೂ ಭಾರತದ ಇಬ್ಬರು ಆಟಗಾರರ ವಿರುದ್ಧ ಕ್ರಮ ಐಸಿಸಿ ಕಠಿಣ ಕ್ರಮ ಕೈಗೊಂಡಿದೆ. ಭಾರತದ ರವಿ ಬಿಷ್ಣೋಯ್ ಮತ್ತು ಆಕಾಶ್ ಸಿಂಗ್, ಬಾಂಗ್ಲಾದ ಮೊಹಮ್ಮದ್ ಹೃದೋಯ್, ಶಮೀಮ್ ಹೊಸೈನ್, ರಕಿಬುಲ್ ಹುಸೇನ್ ವಿರುದ್ಧ ಐಸಿಸಿ ಐಸಿಸಿ ಕ್ರಮ ಕೈಗೊಂಡಿದೆ.


    ಈ ಆಟಗಾರರಿಗೆ ಐಸಿಸಿ ನಿಯಮದ ಲೆವೆಲ್ 3 ಪ್ರಕಾರ ಸಸ್ಪೆನ್ಷನ್ ಹಾಗೂ ಡಿಮೆರಿಟ್ ಪಾಯಿಂಟ್ಸ್ ನೀಡಿದೆ. ಸಸ್ಪೆನ್ಷನ್ ಅಂಕಗಳ ಪ್ರಕಾರ 5 ರಿಂದ 10 ಅಂಡರ್-19 ಪಂದ್ಯ, ಎ ತಂಡ, ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವುದರಿಂದ ಆಟಗಾರರು ನಿಸೇಧಕ್ಕೆ ಒಳಗಾಗಿದ್ದಾರೆ.


    ಚೊಚ್ಚಲ ಅಂಡರ್-19 ವಿಶ್ವಕಪ್ ಗೆದ್ದಾಗ ಮೈದಾನಕ್ಕೆ ಓಡಿ ಬಂದ ಬಾಂಗ್ಲಾ ಕ್ರಿಕೆಟಿಗರು ಭಾರತೀಯ ಆಟಗಾರರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಬಾಂಗ್ಲಾ ಬ್ಯಾಟ್ಸ್​​ಮನ್ ಗೆಲುವಿನ ರನ್ ಬಾರಿಸುತ್ತಿದ್ದಂತೆ ಮೈದಾನಕ್ಕೆ ಬಾಂಗ್ಲಾ ಕ್ರಿಕೆಟಿಗರು ತೆರಳಿ ಅಲ್ಲಿ ಭಾರತೀಯ ಕ್ರಿಕೆಟಿಗರ ಮುಂದೆ ಅಸಭ್ಯವಾಗಿ ವರ್ತಿಸಿದ್ದಾರೆ.



    4 ಬಾರಿ ವಿಶ್ವ ಚಾಂಪಿಯನ್, 3 ಬಾರಿ ರನ್ನರ್ ಅಪ್: ಅಂಡರ್​ 19 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ್ದೇ ಪಾರುಪತ್ಯ


    ಅಲ್ಲದೆ ಬಾಂಗ್ಲಾ ಆಟಗಾರನೋರ್ವ ಭಾರತೀಯನ ಜೊತೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಕುರಿತಾದ ವಿಡಿಯೋ ಕೂಡ ವೈರಲ್​ ಆಗಿತ್ತು. ಇಬ್ಬರ ಜಗಳ ತಾರಕಕ್ಕೇರುತ್ತಿದೆ ಎಂಬುವ ಹೊತ್ತಿಗೆ ಮೈದಾನದಲ್ಲಿದ್ದ ಅಂಪೈರ್​​ ಉಭಯ ತಂಡದ ಆಟಗಾರರನ್ನು ದೂರ ಕರೆದುಕೊಂಡು ಹೋದರು.



    ಫೈನಲ್ ಕಾದಾಟದಲ್ಲಿ ಭಾರತ ನೀಡಿದ್ದ 178 ರನ್​ ಟಾರ್ಗೆಟ್ ಸವಾಲನ್ನು ಮೆಟ್ಟಿ ನಿಂತ ಬಾಂಗ್ಲಾದೇಶ ತಂಡ ಮೊತ್ತಮೊದಲ ಬಾರಿಗೆ ಜೂನಿಯರ್ ವಿಶ್ವಕಪ್ ಎತ್ತಿಹಿಡಿಯಿತು. ಯಾವುದೇ ಹಂತದ ವಿಶ್ವಕಪ್ ಲೆಕ್ಕಕ್ಕೆ ತೆಗೆದುಕೊಂಡರೂ ಬಾಂಗ್ಲಾದೇಶದ ಚೊಚ್ಚಲ ಗೆಲುವು ಇದಾಗಿದೆ. ಯಾವುದೇ ಜಾಗತಿಕ ಕ್ರಿಕೆಟ್ ಟೂರ್ನಿಯಲ್ಲೂ ಬಾಂಗ್ಲಾ ಚಾಂಪಿಯನ್ ಆಗಿರುವುದು ಇದೇ ಮೊದಲು.


    Published by:Vinay Bhat
    First published: