ಬೆಂಗಳೂರು (ಜ. 25): ಐಸಿಸಿ ಅಂಡರ್-19 ವಿಶ್ವಕಪ್ನಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ತೋರುತ್ತಿದೆ. ಈಗಾಗಲೇ ಆಡಿರುವ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಗೆದ್ದಿರುವ ಪ್ರಿಯಮ್ ಗರ್ಗ್ ಪಡೆ ಕ್ವಾರ್ಟನ್ ಫೈನಲ್ಗೆ ಲಗ್ಗೆ ಇಟ್ಟಿದೆ.
ನಿನ್ನೆ ನಡೆದ ನ್ಯೂಜಿಲೆಂಡ್ ಅಂಡರ್-19 ವಿರುದ್ಧದ ಪಂದ್ಯದಲ್ಲೂ ಭಾರತದ ಕಿರಿಯರು ಡಕ್ವರ್ತ್ ಲುಯಿಸ್ ನಿಯಮದ ಅನ್ವಯ 44 ರನ್ಗಳಿಂದ ಗೆದ್ದು ಬೀಗಿದರು.
Sri Lanka U19 ✅
Japan U19 ✅
New Zealand U19 ✅
India U19 complete a hat-trick of wins after they beat New Zealand U19 in #U19CWC 👏👏.
Report 📰 👉 https://t.co/rID9J9qdZ7
Upwards and onwards for #TeamIndia pic.twitter.com/6lJuVSo19K
— BCCI (@BCCI) January 24, 2020
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್ಗಾಳದ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾನ್ಶ್ ಸಕ್ಸೆನಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ, ಭಾರತ 23 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ 115 ರನ್ ಗಳಿಸಿದಾಗ ಜೋರಾಗಿ ಮಳೆ ಸುರಿಯಲು ಆರಂಭಿಸಿತು.
ಈ ಸಂದರ್ಭ ಜೈಸ್ವಾಲ್ 77 ಎಸೆತಗಳಲ್ಲಿ 57 ಹಾಗೂ ದಿವ್ಯಾನ್ಶ್ 62 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ತುಂಬಾ ಸಮಯದ ಬಳಿಕ ಮಳೆ ನಿತ್ತಿತ್ತು. ಆದರ, ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ಇಲ್ಲಿಗೆ ಅಂತ್ಯಗೊಳಿಸಿ ದಕ್ವರ್ತ್ ಲುಯಿಸ್ ನಿಯಮದ ಪ್ರಕಾರ ನ್ಯೂಜಿಲೆಂಡ್ಗೆ ಗೆಲ್ಲಲು 23 ಓವರ್ನಲ್ಲಿ 192 ರನ್ಗಳ ಟಾರ್ಗೆಟ್ ನೀಡಲಾಯಿತು.
ಈ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ ಕಿರಿಯರು ರವಿ ಬಿಷ್ಟೋಯಿ ಹಾಗೂ ಅಥರ್ವ ಅಂಕೊಲ್ಕರ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. 21 ಓವರ್ನಲ್ಲಿ ಕೇವಲ 147 ರನ್ಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ರೈಸ್ ಮ್ಯಾರಿಸ್ 42 ರನ್ ಗಳಿಸಿದ್ದು ತಂಡದ ಬ್ಯಾಟ್ಸ್ಮನ್ ಒಬ್ಬ ಕಲೆಹಾಕಿದ ಗರಿಷ್ಠ ಸ್ಕೋರ್ ಆಯಿತು.
KL Rahul: ವಿಕೆಟ್ ಕೀಪಿಂಗ್ ಜವಾಬ್ದಾರಿ ಬಗ್ಗೆ ಮೊದಲ ಬಾರಿ ಮನಬಿಚ್ಚಿ ಮಾತನಾಡಿದ ರಾಹುಲ್!
ಭಾರತ ಅಂಡರ್-19 ಪರ ರವಿ 4 ವಿಕೆಟ್ ಕಿತ್ತು ಮಿಂಚಿದರೆ, ಅಥರ್ವ 3 ವಿಕೆಟ್ ಪಡೆದರು. ಕಾರ್ತಿಕ್ ತ್ಯಾಗಿ ಹಾಗೂ ಸುಶಾಂತ್ ಮಿತ್ರಾ ತಲಾ 1 ವಿಕೆಟ್ ಪಡೆದರು.
44 ರನ್ಗಳ ಭರ್ಜರಿ ಜಯದೊಂದಿಗೆ ಭಾರತ ಕ್ವಾರ್ಟರ್ ಫೈನಲ್ ತಲುಪಿತು. ಸದ್ಯ ಭಾರತ ಆಡಿರುವ ಮೂರು ಪಂದ್ಯಗಳಲ್ಲಿ ಮೂರನ್ನೂ ಗೆದ್ದು ಗ್ರೂಪ್ ಎ ನಲ್ಲಿ 6 ಪಾಯಿಂಟ್ನೊಂದಿಗೆ ಅಗ್ರಸ್ಥಾನಲ್ಲಿದೆ. ಜನವರಿ 28 ರಂದು ಸೂಪರ್ ಲೀಗ್ ಕ್ವಾರ್ಟರ್ ಫೈನಲ್ 1 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೆಣೆಸಾಟ ನಡೆಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ