ಭಾರತ-ಇಂಗ್ಲೆಂಡ್ ನಡುವಣ ಟಿ20 ಸರಣಿಯ 4ನೇ ಪಂದ್ಯದಲ್ಲಿ ಅಂಪೈರ್ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. ಸೂರ್ಯಕುಮಾರ್ ಹಾಗೂ ವಾಷಿಂಗ್ಟನ್ ಸುಂದರ್ ಔಟ್ ನೀಡಿರುವುದು ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಇದೀಗ ಅಂಪೈರ್ಗಳ ನಿರ್ಧಾರಗಳ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.
ಅಂಪೈರ್ಗಳ ನಿರ್ಧಾರಗಳು ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತಿದೆ. ಉದಾಹರಣೆಗೆ ಯಾರು ಕೂಡ ಬ್ಯಾಟ್ಸ್ಮನ್ ಬೌಲ್ಡ್ ಆದಾಗ, ಚೆಂಡು ಸ್ಟಂಪ್ಗೆ ಶೇ.50 ರಷ್ಟು ತಾಗಿದೆ ಎಂದು ಔಟ್ ಎಂದು ತೀರ್ಪು ನೀಡುವುದಿಲ್ಲ. ಕ್ರಿಕೆಟ್ ಬಗ್ಗೆ ಹೆಚ್ಚಿನ ಜ್ಞಾನವಿದ್ದಾಗ, ಇದರ ಬಗ್ಗೆ ಚರ್ಚೆಗಳು ಮೂಡುವುದಿಲ್ಲ. ಏಕೆಂದರೆ ಸ್ಟಂಪ್ಗೆ ಕೊಂಚ ತಾಗಿದರೂ ಅದು ಔಟ್ ಎಂದು ಗೊತ್ತಿರುತ್ತದೆ ಎಂದು ಕೊಹ್ಲಿ ಪರೋಕ್ಷವಾಗಿ 4ನೇ ಟಿ20 ಪಂದ್ಯದಲ್ಲಿ ಕಳಪೆ ತೀರ್ಪು ನೀಡಿದ ಅಂಪೈರ್ನ ಗುರಿ ಮಾಡಿದರು.
ನಾನು ಡಿಆರ್ಎಸ್ ನಿಯಮ ಬರುವುದಕ್ಕೂ ಮುನ್ನವೇ ಬಹಳ ವರ್ಷಗಳಿಂದ ಆಡುತ್ತಿದ್ದೇನೆ. ಅಂದು ಡಿಆರ್ಎಸ್ ಇರಲಿಲ್ಲ. ಅಂದು ಅಂಪೈರ್ ಔಟ್ ಕೊಟ್ಟರೆ ಬ್ಯಾಟ್ಸ್ಮನ್ ಔಟಾಗಿರಲಿ ಅಥವಾ ನಾಟೌಟ್ ಆಗಿರಲಿ ಅದನ್ನು ಔಟ್ ಎಂದು ಒಪ್ಪಿಕೊಳ್ಳಬೇಕಾಗಿತ್ತು. ಅದು ಕನಿಷ್ಠ ಮಟ್ಟದಲ್ಲಿರಲಿ, ಇಲ್ಲದಿರಲಿ ಔಟ್ ಔಟೇ ಆಗಿತ್ತು ಎಂದು ಟೀಮ್ ಇಂಡಿಯಾ ನಾಯಕ ವಿವರಿಸಿದರು.
ಭಾರತ-ಇಂಗ್ಲೆಂಡ್ 4ನೇ ಟಿ20 ಪಂದ್ಯದ ವೇಳೆ ಸೂರ್ಯಕುಮಾರ್ ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಅಂಪೈರ್ ನೀಡಿದ ಸಾಫ್ಟ್ ಸಿಗ್ನಲ್ನ್ನು ಕೊಹ್ಲಿ ಒಪ್ಪಲಿಲ್ಲ. ರಿಪ್ಲೇನಲ್ಲಿ ನಾಟೌಟ್ ಎಂದು ಸಾಬೀತಾದರೂ ಟಿವಿ ಅಂಪೈರ್ ಬ್ಯಾಟ್ಸ್ಮನ್ ಔಟ್ ಎಂದರು. ಏಕೆಂದರೆ ಆನ್-ಫೀಲ್ಡ್ ಅಂಪೈರ್ ನೀಡಿದ ಸಾಫ್ಟ್ ಸಿಗ್ನಲ್ನಿಂದ ಅದೇ ತೀರ್ಪನ್ನು ಮುಂದುವರೆಸಿದರು. ಇದೇ ಕಾರಣದಿಂದ ವಿರಾಟ್ ಕೊಹ್ಲಿ ಅಂಪೈರ್ಗಳು ಕ್ರಿಕೆಟ್ನಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ