Rudi Koertzen Dies: ಕಾರು ಅಪಘಾತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ನಿಧನ

ದಕ್ಷಿಣ ಆಫ್ರಿಕಾದ (South Africa) ಅಂಪೈರ್ ರೂಡಿ ಕರ್ಟ್ಜೆನ್ (Rudi Koertzen) ಇಂದು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ರೂಡಿ ಕರ್ಟ್ಜೆನ್ ನಿಧನ

ರೂಡಿ ಕರ್ಟ್ಜೆನ್ ನಿಧನ

  • Share this:
ದಕ್ಷಿಣ ಆಫ್ರಿಕಾದ (South Africa) ಅಂಪೈರ್ ರೂಡಿ ಕರ್ಟ್ಜೆನ್ (Rudi Koertzen) ಇಂದು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದಶಕಗಳಿಂದ ಕ್ರಿಕೆಟ್​ (Cricket) ಮೈದಾನದಲ್ಲಿ ಅಂಪೈರ್ (Umpire ) ಆಗಿ ಕಾರ್ಯನಿರ್ವಹಿಸಿದ್ದ ರೂಡಿ ಕರ್ಟ್ಜೆನ್ ಇಂದು ಅಪಘಾತದಲ್ಲಿ ಸಾವನಪ್ಪಿದ್ದು, ದಕ್ಷಿಣ ಆಫ್ರಿಕಾದ ಕ್ರಿಕೆಟ್​ ಮಂಡಳಿ ಸಂತಾಪ ಸೂಚಿಸಿದೆ. ಇಂದು ಬೆಳಗ್ಗಿನ ಜಾವ ರಿವರ್ಸ್‌ಡೇಲ್‌ನ್​ ಎಂಬಲ್ಲಿ ರೂಡಿ ಕರ್ಟ್ಜೆನ್ ಕಾರು ಅಪಘಾತವಾಗಿ ಸಾವನಪ್ಪಿದ್ದಾರೆ. 73 ವರ್ಷದ ರೂಡಿ ಕರ್ಟ್ಜೆನ್ ನೆಲ್ಸನ್ ಮಂಡೇಲಾ ಕೊಲ್ಲಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ಸಮಯಸದಲ್ಲಿ ಈ ಅಪಘಾತ ಸಂಭವಿಸಿದೆ. ಕೇಪ್ ಟೌನ್‌ನಲ್ಲಿ ಗಾಲ್ಫ್‌ ಆಡಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎಂದು ಕರ್ಟ್ಜೆನ್ ಅವರ ಮಗ ಅಲ್ಗೋವಾ ಎನ್ನುವವರು ಮಾಹಿತಿ ನೀಡಿದ್ದಾರೆ.

ಕಾರು ಅಪಘಾತದಲ್ಲಿ ಅಂಪೈರ್​ ನಿಧನ:

ಹೌದು, ದಕ್ಷಿಣ ಆಫ್ರಿಕಾದ ಖ್ಯಾತ ಅಂತರಾಷ್ಟ್ರೀಯ ಅಂಫೈರ್​ ಆಗಿದ್ದಂತಹ ರೂಡಿ ಕರ್ಟ್ಜೆನ್ ಇಂದು ಕಾರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಅವರು ಎಂದಿನಂತೆ ಗಾಲ್ಫ್ ಆಡಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ರಿವರ್ಸ್‌ಡೇಲ್‌ನ್​ ಎಂಬಲ್ಲಿ ರೂಡಿ ಕರ್ಟ್ಜೆನ್ ಕಾರು ಅಪಘಾತವಾಗಿ ಸಾವನಪ್ಪಿದ್ದಾರೆ. ಇವರ ನಿಧನಕ್ಕೆ ಕ್ರಿಕೆಟ್​ ವಲಯದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಭಾರತ ತಂಡದ ಮಾಜಿ ಸ್ಪೋಟಕ ಆಟಗಾರ ವಿರೇಂದ್ರ ಸೆಹ್ವಾಗ್​ ಸಹ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಈ ಕುರಿತು ಟ್ವೀಟ್​ ಸಹ ಮಾಡಿದ್ದಾರೆ.

ವೇಲ್ ರೂಡಿ ಕೊರ್ಟ್ಜೆನ್! ಓಂ ಶಾಂತಿ. ಅವರ ಕುಟುಂಬಕ್ಕೆ ದೇವರು ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ನನಗೂ ಹಾಗೂ ರೂಡಿ ಕೊರ್ಟ್ಜೆನ್
ಅವನೊಂದಿಗೆ ಉತ್ತಮ ಸಂಬಂಧವಿತ್ತು. ನಾನು ದುಡುಕಿನ ಹೊಡೆತವನ್ನು ಆಡಿದಾಗಲೆಲ್ಲ, "ಸಂವೇದನಾಶೀಲವಾಗಿ ಆಟವಾಡಿ, ನಾನು ನಿಮ್ಮ ಬ್ಯಾಟಿಂಗ್ ವೀಕ್ಷಿಸಲು ಬಯಸುತ್ತೇನೆ" ಎಂದು ನನಗೆ ಹೇಳುತ್ತಿದ್ದರು. ಅವರು ತಮ್ಮ ಮಗನಿಗಾಗಿ ನಿರ್ದಿಷ್ಟ ಬ್ರಾಂಡ್ ಕ್ರಿಕೆಟ್ ಪ್ಯಾಡ್‌ಗಳನ್ನು ಖರೀದಿಸಲು ಬಯಸಿದ್ದರು ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೆ ಟೀಂ ಇಂಡಿಯಾ ಪಕ್ರಟ, ಕನ್ನಡಿಗನಿಗೆ ಉಪ ನಾಯಕನ ಪಟ್ಟ

ರೂಡಿ ಕೊರ್ಟ್ಜೆನ್ ವೃತ್ತಿ ಜೀವನ:

ಇನ್ನು, ರೂಡಿ ಕೊರ್ಟ್ಜೆನ್ 1981ರಲ್ಲಿ ಅಂಪೈರ್ ವೃತ್ತಿ ಆರಂಭಿಸಿದರು. ಆದರೆ 1992ರಲ್ಲಿ ಟೀಂ ಇಂಡಿಯಾ ಮತ್ತು ಆಫ್ರಿಕಾ ನಡುವಿನ ಸರಣಿಯ ಮೂಲಕ ರೂಡಿ ಅವರು ಅಂತರಾಷ್ಟ್ರೀಯ ಪಂದ್ಯಗಳಿಗೆ ಅಂಪೈರಿಂಗ್​ ಮಾಡಲಾರಂಭಿಸಿದರು. ಅಲ್ಲದೇ ವಿಶೇಷ ಎಂಬಂತೆ ಐಸಿಸಿ ಪ್ರಥಮ ಬಾರಿಗೆ ಟಿವಿ ಅಂಪೈರಿಂಗ್​ ಅನ್ನು ಈ ಸರಣಿಯಿಂದ ಪ್ರಾರಂಭಿಸಲಾಗಿತ್ತು. ರೂಡಿ ಕರ್ಟ್‌ಜೆನ್ 108 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್​ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ 209 ಏಕದಿನ ಮತ್ತು 14 T20 ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ.

ರೂಡಿ ಕರ್ಟ್ಜೆನ್


ಇವರು 1992 ರಲ್ಲಿಅಂಪೈರ್​ ವೃತ್ತಿ ಆರಂಭಿಸಿ 2010ರಲ್ಲಿ ನಿವೃತ್ತಿ ಹೊಂದಿದರು. ಇಇವರ ವಿಶೇಷ ಸಾಧನೆ ಎಂದರೆ ಪ್ರಪಂಚದಲ್ಲಿ ಡೇವಿಡ್ ಶೆಫರ್ಡ್ ಬಳಿಕ 150ಕ್ಕೂ ಹೆಚ್ಚು ಏಖದಿನ ಪಂದ್ಯಗಳಿಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ 2006 ಏಪ್ರಿಲ್ 19ರಂದು ನಡೆದ ಪಂದ್ಯದ ಮೂಲಕ ಅವರು ಈ ಸಾಧನೆ ಮಾಡಿದರು. ಅಲ್ಲದೇ ಅವರು ಒಟ್ಟು 172 ಏಕದಿನ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡುವ ಮೂಲಕ ಶೆಫರ್ಡ್ ದಾಖಲೆಯನ್ನೂ ಮುರಿದಿದ್ದಾರೆ.
Published by:shrikrishna bhat
First published: