ಅಬ್ಬಾ..! ಬ್ಯಾಟಿಂಗ್​ ಅಂದರೆ ಇದು; ಕಾರ್ಕಳ ಯುವತಿಯ ಕವರ್​ ಡ್ರೈವ್​ ವಿಡಿಯೋ ಭಾರೀ ವೈರಲ್​​

ಉಡುಪಿಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಜ್ಯೋತಿ ಎಂಬಾಕೆಯ ಅದ್ಭುತ ಕವರ್​ ಡ್ರೈವ್​ ವಿಡಿಯೋ ಸದ್ಯ ಎಲ್ಲಾ ಕಡೆ ವೈರಲ್​ ಆಗುತ್ತಿದೆ. ಅಷ್ಟೇ ಏಕೆ, ಅಂತರಾಷ್ಟ್ರೀಯ ಮಾಧ್ಯಮ ಇಎಸ್​​ಪಿಎನ್​ ಕ್ರಿಕ್​​ ಇನ್​ಫೋ ತನ್ ಟ್ವಿಟ್ಟರ್​​ ಖಾತೆಯಲ್ಲಿ​ ಪೋಸ್ಟ್​ ಮಾಡಿದೆ.

news18-kannada
Updated:June 13, 2020, 2:39 PM IST
ಅಬ್ಬಾ..! ಬ್ಯಾಟಿಂಗ್​ ಅಂದರೆ ಇದು; ಕಾರ್ಕಳ ಯುವತಿಯ ಕವರ್​ ಡ್ರೈವ್​ ವಿಡಿಯೋ ಭಾರೀ ವೈರಲ್​​
ಜ್ಯೋತಿ
  • Share this:
ಮನೆಯಂಗಳದಲ್ಲಿ ಬ್ಯಾಟ್​ ಹಿಡಿದ ಯುವತಿ. ಅತ್ತಕಡೆಯಿಂದ ಜೋರಾಗಿ ಬಂದು ಬೌಲಿಂಗ್​ ಮಾಡಿದ ಬೌಲರ್​. ಕ್ಷಣಾರ್ಧದಲ್ಲೇ ಚೆಂಡನ್ನು ಕವರ್​ ಡ್ರೈವ್​ನತ್ತ ಅಟ್ಟಿದ ಯುವತಿ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಉಡುಪಿಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಜ್ಯೋತಿ ಎಂಬಾಕೆಯ ಅದ್ಭುತ ಕವರ್​ ಡ್ರೈವ್​ ವಿಡಿಯೋ ಸದ್ಯ ಎಲ್ಲಾ ಕಡೆ ವೈರಲ್​ ಆಗುತ್ತಿದೆ. ಅಷ್ಟೇ ಏಕೆ, ಅಂತರಾಷ್ಟ್ರೀಯ ಮಾಧ್ಯಮ ಇಎಸ್​​ಪಿಎನ್​ ಕ್ರಿಕ್​​ ಇನ್​ಫೋ ತನ್ ಟ್ವಿಟ್ಟರ್​​ ಖಾತೆಯಲ್ಲಿ​ ಪೋಸ್ಟ್​ ಮಾಡಿದೆ. ಅನೇಕರು ಯುವತಿಯ ಬ್ಯಾಟಿಂಗ್​ ಶೈಲಿ ನೋಡಿ ಫಿದಾ ಆಗಿದ್ದಾರೆ.

ವಿಡಿಯೋದಲ್ಲಿ ಲೆಗ್​ ಸೈಡಿನಲ್ಲಿ ಬಂದ ಚೆಂಡನ್ನು ಜ್ಯೋತಿ ಆಫ್​ ಸೈಡ್​ಗೆ ಅಟ್ಟಿದ್ದಾರೆ. ಸದ್ಯ ಯುವತಿಯ ಬ್ಯಾಟಿಂಗ್​ ಶೈಲಿಯ ವಿಡಿಯೋವನ್ನು ಕಂಡು ಅನೇಕರು ಕ್ರಿಕೆಡಿಗರನ್ನೇ ನಾಚಿಸುವಂತಿಗೆ ಎಂದು ಕಾಮೆಂಟ್​ ಬರೆಯುತ್ತಿದ್ದಾರೆ.ಕೊರೋನಾ ಲಾಕ್​ಡೌನ್​ ಸಮಯದಲ್ಲಿ ಜ್ಯೋತಿ ಅಣ್ಣಂದಿರ ಜೊತೆ ಸೇರಿಕೊಂಡು ಕ್ರಿಕೆಟ್​ ಆಡುತ್ತಾ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಆಕೆ ಬ್ಯಾಟಿಂಗ್ ಮಾಡುವ ದೃಶ್ಯವನ್ನು ರಂಜಿತ್​​ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 
First published: June 13, 2020, 2:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading