Rajwardhan Hangargekar: ನಿಜವಾದ ವಯಸ್ಸನ್ನು ಮುಚ್ಚಿಟ್ರಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ..?

Chennai Super Kings: ರೈನಾ ಹಾಗೂ ಮಹೇಶ್  ಅವರ ಖರೀದಿಯ ವಿವಾದ ಮುಗಿಯುವ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನ ವಿರುದ್ಧ ಆರೋಪ ಕೇಳಿಬಂದಿದೆ.. ಇತ್ತೀಚಿಗಷ್ಟೇ ಮುಕ್ತಾಯವಾದ ಅಂಡರ್-19 ವಿಶ್ವಕಪ್ ನಲ್ಲಿ ಭಾಗಿಯಾಗಿದ್ದ ರಾಜವರ್ಧನ್ ಹಂಗರ್ಗೇಕರ್ ವಯಸ್ಸು ವಿವಾದಕ್ಕೊಳಗಾಗಿದೆ.

ರಾಜವರ್ಧನ್ ಹಂಗೆಗೇಕರ್

ರಾಜವರ್ಧನ್ ಹಂಗೆಗೇಕರ್

 • Share this:
  ಐಪಿಎಲ್ ಹರಾಜು(IPL Auction) ಪ್ರಕ್ರಿಯೆ ಮುಕ್ತಾಯವಾಗಿದೆ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)ತಂಡದ ವಿರುದ್ಧ ಅಭಿಮಾನಿಗಳು(Fans) ಸಿಡಿದೆದ್ದಿದ್ದಾರೆ. ಒಬ್ಬರಲ್ಲಾ ಒಬ್ಬರ ಆಟಗಾರರ ಹೆಸರು ಇಟ್ಟುಕೊಂಡು ಅಭಿಮಾನಿಗಳು ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ಇದು ಸಾಲದು ಅಂತ ಸಿಎಸ್ಕೆ ತಂಡದ ಗ್ರಹಚಾರ ಕೂಡ ಕೆಟ್ಟಿರುವ ಹಾಗಿದೆ.. ಮೊದಲು ಸುರೇಶ್ ರೈನಾ(Suresh Raina) ಅವರನ್ನು ಖರೀದಿ ಮಾಡಿಲ್ಲ ಎನ್ನುವ ಕಾರಣಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.. ಇದಾದ ಬಳಿಕ ಬದಲಿಗೆ ಶ್ರೀಲಂಕಾದ (Sri lanka) ಶ್ರೀಲಂಕಾದ ಯುವ ಸ್ಪಿನ್ನರ್ ಮಹೇಶ್ ತೀಕ್ಷಣ ಅವರ ಖರೀದಿಯನ್ನು ಅನೇಕ ಸಿಎಸ್​ಕೆ ಅಭಿಮಾನಿಗಳು ವಿರೋಧಿಸಲಾರಂಭಿಸಿದ್ದಾರೆ. ಮತ್ತು ಟ್ವಿಟ್ಟರ್ ನಲ್ಲಿ ಈ ತಂಡದ ವಿರುದ್ಧ ಅಭಿಯಾನ ಕೂಡ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ #Boycott_ChennaiSuperKings ಎಂದು ಹ್ಯಾಶ್​ಟ್ಯಾಗ್ ಬಳಸಿ ಟ್ವೀಟ್​ ಮಾಡಲಾಗ್ತಿದೆ.. ಇವೆರಡರ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಹೊಸ ಸಂಕಷ್ಟ ಎದುರಾಗಿದೆ..

  CSK ಆಟಗಾರ ರಾಜವರ್ಧನ್ ಹಂಗರ್ಗೇಕರ್ ವಯಸ್ಸಿನ ವಿವಾದ

  ರೈನಾ ಹಾಗೂ ಮಹೇಶ್  ಅವರ ಖರೀದಿಯ ವಿವಾದ ಇನ್ನೂ ಮುಗಿಯುವ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನ ವಿವಾದ ವಿರುದ್ಧ ಕೇಳಿಬಂದಿದೆ.. ಇತ್ತೀಚಿಗಷ್ಟೇ ಮುಕ್ತಾಯವಾದ ಅಂಡರ್ ಅಂಡರ್-19 ವಿಶ್ವಕಪ್ ನಲ್ಲಿ ಭಾಗಿಯಾಗಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಟಗಾರ
  ರಾಜವರ್ಧನ್ ಹಂಗರ್ಗೇಕರ್ ವಿರುದ್ಧ ವಯಸ್ಸಿನ ವಿವಾದದ ಪ್ರಕರಣ ಕೇಳಿಬಂದಿದೆ..

  ಇದನ್ನೂ ಓದಿ: ಇವರೇ ನೋಡಿ RCB ತಂಡದ ಮುಂದಿನ ನಾಯಕ

  ವೇಗದ ಬೌಲರ್ ರಾಜವರ್ಧನ್ ಹಂಗರ್ಗೇಕರ್ ಅವರು ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಟ್ಟು ಅಂಡರ್-19 ವಿಶ್ವಕಪ್ ಆಡಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹಂಗರ್ಗೆಕರ್ ಅವರ ನಿಜವಾದ ವಯಸ್ಸು 21 ವರ್ಷಗಳು ಮತ್ತು ಇದರ ಹೊರತಾಗಿಯೂ ಅವರು ಅಂಡರ್-19 ವಿಶ್ವಕಪ್ ಆಡಿದರು. ಹಂಗರ್ಗೇಕರ್ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಜೊತೆಗೆ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ವಿಶ್ವಕಪ್ ಗೆದ್ದಿತು.

  ಹಂಗೇಕರ್ ತಮ್ಮ ನಿಜವಾದ ವಯಸ್ಸನ್ನು ಮರಿಮಾಚಿ ವಂಚಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಕ್ರೀಡಾ ಮತ್ತು ಯುವಜನ ಇಲಾಖೆ ಆಯುಕ್ತ ಓಂಪ್ರಕಾಶ್ ಬಕೋರಿಯಾ ಮಾಡಿದ್ದಾರೆ. ಈ ಐಎಎಸ್ ಅಧಿಕಾರಿ ಬಿಸಿಸಿಐಗೆ ಪತ್ರ ಬರೆದಿದ್ದು, ಅದರಲ್ಲಿ ಹಂಗೇಕರ್ ವಿರುದ್ಧ ಸಾಕ್ಷ್ಯವನ್ನೂ ಕಳುಹಿಸಿದ್ದಾರೆ... ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಹುದೊಡ್ಡ ಆಘಾತ ಎದುರಾಗಿದೆ..

  ರಾಜವರ್ಧನ್ ಹಂಗೇರ್‌ಗೆಕರ್ ವಯಸ್ಸು 21

  ರಾಜವರ್ಧನ್ ಧರಶಿವ್‌ನ ಟೆರ್ನಾ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ. ಶಾಲೆಯ ದಾಖಲೆಗಳ ಪ್ರಕಾರ, 1 ರಿಂದ 7 ನೇ ತರಗತಿಯವರೆಗೆ ಹಂಗೇರ್‌ಗೆಕರ್ ಅವರ ಜನ್ಮ ದಿನಾಂಕ ಜನವರಿ 10, 2001. ಆದರೆ, 8ನೇ ತರಗತಿಗೆ ಹೊಸ ಪ್ರವೇಶವನ್ನು ನೀಡುವಾಗ, ಮುಖ್ಯೋಪಾಧ್ಯಾಯರು ಅನೌಪಚಾರಿಕವಾಗಿ ರಾಜ್ಯವರ್ಧನ್ ಅವರ ಜನ್ಮ ದಿನಾಂಕವನ್ನು 10 ನವೆಂಬರ್ 2002 ಕ್ಕೆ ಬದಲಾಯಿಸಿದ್ದಾರೆ. ಜನವರಿ 14 ಮತ್ತು ಫೆಬ್ರವರಿ 5 ರ ನಡುವೆ ನಡೆದ ಅಂಡರ್-19 ಕ್ರಿಕೆಟ್ ವಿಶ್ವಕಪ್‌ ನಡೆಯುವ ವೇಳೆಗೆ ರಾಜ್ಯವರ್ಧನ್ ಹಂಗೇರ್‌ಗೆಕರ್ ಅವರ ವಯಸ್ಸು 21 ವರ್ಷಗಳು ಎಂಬುದು ಸಾಭೀತಾಗಿದೆ.

  ಇದನ್ನೂ ಓದಿ: RCB ಅಭಿಮಾನಿಗಳಲ್ಲೂ ಶುರುವಾಯಿತು ಕೆಜಿಎಫ್ ಟ್ರೆಂಡ್

  1.5 ಕೋಟಿಗೆ ರಾಜವರ್ಧನ್ ಹಂಗರ್ಗೇಕರ್ ಖರೀದಿಸಿದ್ದ CSK

  ಹಂಗೇಕರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 1.5 ಕೋಟಿಗೆ ಖರೀದಿಸಿದೆ. ಮುಂಬೈ ಇಂಡಿಯನ್ಸ್ ಕೂಡ ಅವರನ್ನು ಖರೀದಿಸಲು ಬಿಡ್ ಮಾಡಿತು ಆದರೆ ಅಂತಿಮವಾಗಿ ಚೆನ್ನೈ ಗೆದ್ದಿತು. . ಈಗ ಒಂದು ವೇಳೆ ಬಿಸಿಸಿಐ ನಡೆಸಿದ ತನಿಖೆಯಲ್ಲಿ ರಾಜ್ಯವರ್ಧನ್ ತಪ್ಪಿತಸ್ಥರೆಂದು ಸಾಬೀತಾದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಹುದೊಡ್ಡ ನಷ್ಟ ಉಂಟಾಗಲಿದೆ.. ಯಾಕಂದ್ರೆ ಬಿಸಿಸಿಐ ರಾಜವರ್ಧನ್ ಅವರನ್ನ ಕ್ರಿಕೆಟ್ ನಿಂದ ವರ್ಷಗಳ ಕಾಲ ಅಮಾನತು ಸಹ ಮಾಡಬಹುದಾಗಿದೆ.. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ವಿಜ್ಞಗಳ ಮೇಲೆ ವಿಜ್ಞಾ ಆಗುತ್ತಿದೆ.
  Published by:ranjumbkgowda1 ranjumbkgowda1
  First published: