U19 World Cup: ಕ್ವಾರ್ಟರ್​ಫೈನಲ್​ನಲ್ಲಿ ಭಾರತಕ್ಕೆ ಬಾಂಗ್ಲಾ ಎದುರಾಳಿ; 8ರ ಘಟ್ಟ ತಲುಪಿದ ತಂಡಗಳಿವು

India vs Bangladesh Quarterfinal: ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್ ಸೇರಿ ಎಂಟು ತಂಡಗಳು ಕ್ವಾರ್ಟರ್​ಫೈನಲ್ ತಲುಪಿವೆ. ಜ. 29ರಂದು ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಅದಕ್ಕೆ ಮುನ್ನ ಇತರ ಮೂರು ಕ್ವಾರ್ಟರ್​ಫೈನಲ್ ಪಂದ್ಯಗಳು ನಡೆಯಲಿವೆ.

ಭಾರತ ಜೂನಿಯರ್ ಕ್ರಿಕೆಟರ್ಸ್

ಭಾರತ ಜೂನಿಯರ್ ಕ್ರಿಕೆಟರ್ಸ್

 • Share this:
  ವೆಸ್ಟ್ ಇಂಡೀಸ್: ನಾಲ್ಕು ಬಾರಿ ಚಾಂಪಿಯನ್ಸ್ ಭಾರತ ಮತ್ತು ಹಾಲಿ ಚಾಂಪಿಯನ್ ಬಾಂಗ್ಲಾದೇಶ ತಂಡಗಳು 2022ರ ಅಂಡರ್-19 ವಿಶ್ವಕಪ್ ಟೂರ್ನಿ ಕ್ವಾರ್ಟರ್​ಫೈನಲ್​ನಲ್ಲಿ ಮುಖಾಮುಖಿ ಆಗಲಿವೆ. ಭಾರತ, ಬಾಂಗ್ಲಾದೇಶ ಸೇರಿ ಎಂಟು ತಂಡಗಳು ಎಂಟರ ಘಟ್ಟ ಪ್ರವೇಶಿಸಿವೆ. ಇಂಗ್ಲೆಂಡ್, ಸೌತ್ ಆಫ್ರಿಕಾ, ಪಾಕಿಸ್ತಾನ್, ಅಫ್ಘಾನಿಸ್ತಾನ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಕ್ವಾರ್ಟರ್​ಫೈನಲ್ ತಲುಪಿದ ಇತರ 6 ತಂಡಗಳು. ಭಾರತ ಕಿರಿಯರ ತಂಡ ನಿನ್ನೆ ರಾತ್ರಿ ನಡೆದ ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಉಗಾಂಡ ವಿರುದ್ಧ 326 ರನ್​ಗಳ ಬೃಹತ್ ಮೊತ್ತದಿಂದ ಸೋಲಿಸಿತು. ಈ ಮೂಲದ ಗುಂಪಿನಲ್ಲಿ ಟಾಪರ್ ಆಗಿ ಕ್ವಾರ್ಟರ್​ಫೈನಲ್ ಪ್ರವೇಶಿಸಿತು.

  ಈ ಕಿರಿಯರ ವಿಶ್ವಕಪ್​ನಲ್ಲಿ 16 ತಂಡಗಳು ಸೆಣಸಿದ್ದು ನಾಲ್ಕು ಗುಂಪುಗಳನಾಗಿ ಮಾಡಲಾಗಿತ್ತು. ಪ್ರತೀ ಗುಂಪಿನಿಂದ ಎರಡೆರಡು ಅಗ್ರಸ್ಥಾನಿಗಳಂತೆ ಎಂಟು ತಂಡಗಳು ಸೂಪರ್ ಲೀಗ್ ಹಂತದ ಕ್ವಾರ್ಟರ್​ಫೈನಲ್ ಪ್ರವೇಶಿಸಿವೆ. ಇನ್ನುಳಿದ ತಂಡಗಳು ಪ್ಲೇಟ್ ಹಂತಕ್ಕೆ ಹೋಗಿದ್ದು ಅಲ್ಲಿ 7ನೇ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಅಂದರೆ ಸೂಪರ್ ಲೀಗ್​ನಲ್ಲಿ 1ರಿಂದ 8ನೇ ಸ್ಥಾನಗಳು ನಿರ್ಧಾರ ಆಗಲಿವೆ. ಪ್ಲೇಟ್ ಲೀಗ್​ನಲ್ಲಿ 9ರಿಂದ 16 ಸ್ಥಾನಗಳನ್ನ ಪಡೆಯುವ ತಂಡಗಳು ಯಾವುವು ಎಂದು ನಿರ್ಧಾರವಾಗಲಿವೆ.

  ಬಿ ಗುಂಪಿನಲ್ಲಿ ಭಾರತ ತನ್ನ ಎಲ್ಲಾ 3 ಪಂದ್ಯಗಳನ್ನ ಗೆದ್ದಿದೆ. ತನ್ನ ಗುಂಪಿನಲ್ಲಿದ್ದ ಸೌತ್ ಆಫ್ರಿಕಾ, ಐರ್ಲೆಂಡ್ ಮತ್ತು ಉಗಾಂಡ ತಂಡಗಳನ್ನ ಭಾರತೀಯರು ಸುಲಭವಾಗಿಯೇ ಪರಾಭವಗೊಳಿಸಿದೆ. ಅದರಲ್ಲೂ ಐವರು ಪ್ರಮುಖ ಆಟಗಾರರು ಕೋವಿಡ್ ಸೋಂಕಿಗೆ ಒಳಗಾಗಿ ಅಲಭ್ಯರಿದ್ದರೂ ಎರಡು ಪಂದ್ಯಗಳನ್ನ ಆಡಿ ಭರ್ಜರಿಯಾಗಿ ಗೆದ್ದಿದೆ.

  ನಿನ್ನೆ ಉಗಾಂಡ ವಿರುದ್ಧವಂತೂ ಭಾರತದ ಹುಡುಗರು ಅಕ್ಷರಶಃ ಆರ್ಭಟಿಸಿದ್ದರು. ಮೊದಲು ಬ್ಯಾಟ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 405 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಅಂಗಕೃಷ್ ರಘುವಂಶಿ ಮತ್ತು ರಾಜ್ ಬವ ಭರ್ಜರಿ ಶತಕ ಭಾರಿಸಿದ್ದರು. ರಾಜ್ ಬವ 108 ಬಾಲ್​ನಲ್ಲಿ ಅಜೇಯ 162 ಗಳಿಸಿದ ಪರಿಣಾಮ ಭಾರತದ ಸ್ಕೋರ್ 400 ರನ್ ಗಡಿ ದಾಟಲು ಸಾಧ್ಯವಾಯಿತು.

  ಇದನ್ನೂ ಓದಿ: T20 World Cup 2022: ಭಾರತಕ್ಕೆ ಪಾಕಿಸ್ತಾನವೇ ಮೊದಲ ಎದುರಾಳಿ; ಇಲ್ಲಿದೆ ವೇಳಾಪಟ್ಟಿ

  ಇಷ್ಟು ದೊಡ್ಡ ಮೊತ್ತದ ಗುರಿಯನ್ನ ಉಗಾಂಡ ಬೆನ್ನತ್ತುವ ಯಾವ ಸಣ್ಣ ನಿರೀಕ್ಷೆಯೂ ಇರಲಿಲ್ಲ. ಉಗಾಂಡ ತಂಡದ ಇನ್ನಿಂಗ್ಸ್ 79 ರನ್​ಗೆ ಅಂತ್ಯಗೊಂಡಿತು. ನಿಶಾಂತ್ ಸಿಂಧು 4 ವಿಕೆಟ್ ಪಡೆದರು.

  ಸೂಪರ್ ಲೀಗ್ ಕ್ವಾರ್ಟರ್​ಫೈನಲ್ ಪ್ರವೇಶಿಸಿದ ತಂಡಗಳು:

  ಭಾರತ, ಬಾಂಗ್ಲಾದೇಶ, ಇಂಗ್ಲೆಂಡ್, ಸೌತ್ ಆಫ್ರಿಕಾ, ಪಾಕಿಸ್ತಾನ್, ಅಫ್ಘಾನಿಸ್ತಾನ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ

  ಪ್ಲೇಟ್ ವಿಭಾಗಕ್ಕೆ ಹೋದ ತಂಡಗಳು: ಯುಎಇ, ಕೆನಡಾ, ಐರ್​ಲೆಂಡ್, ಉಗಾಂಡ, ಜಿಂಬಾಬ್ವೆ, ಪಪುವಾ ನ್ಯೂ ಗಿನಿಯಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್.

  ಇದನ್ನೂ ಓದಿ: ICC ಪುರುಷರ Test Teamನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೂವರು ಭಾರತೀಯ ಆಟಗಾರರು..! ಇಲ್ಲಿದೆ ವಿವರ

  ಸೂಪರ್ ಲೀಗ್ ಪಂದ್ಯಗಳು:

  ಕ್ವಾರ್ಟರ್​ಫೈನಲ್ ಪಂದ್ಯಗಳು:

  1) ಜ. 26: ಇಂಗ್ಲೆಂಡ್ vs ಸೌತ್ ಆಫ್ರಿಕಾ, ಸ್ಥಳ: ನಾರ್ತ್ ಸೌಂಡ್

  2) ಜ. 27: ಅಫ್ಘಾನಿಸ್ತಾನ್ vs ಶ್ರೀಲಂಕಾ; ಸ್ಥಳ: ಕೂಲಿಡ್ಜ್

  3) ಜ. 28: ಆಸ್ಟ್ರೇಲಿಯಾ vs ಪಾಕಿಸ್ತಾನ್; ಸ್ಥಳ: ನಾರ್ತ್ ಸೌಂಡ್

  4) ಜ. 29: ಬಾಂಗ್ಲಾದೇಶ vs ಭಾರತ; ಸ್ಥಳ: ನಾರ್ತ್ ಸೌಂಡ್

  ಇದನ್ನೂ ಓದಿ: ‘ಹತ್ತು ಓವರಲ್ಲಿ ಎಲ್ರನ್ನ ಔಟ್ ಮಾಡ್ತೀರಾ?’- ಪಾಕ್ ಕ್ರಿಕೆಟಿಗನಿಗೆ ಕೊಹ್ಲಿ ಡೈಲಾಗ್ ಮೆಲುಕು

  ಸೆಮಿಫೈನಲ್ ಪಂದ್ಯಗಳು: ಫೆಬ್ರವರಿ 1 ಮತ್ತು 2ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಫೆ. 5ರಂದು ಫೈನಲ್ ಪಂದ್ಯ ನಡೆಯಲಿದೆ.

  ಈ ಬಾರಿ ಕ್ವಾರ್ಟರ್​ಫೈನಲ್ ತಲುಪದ ಪ್ರಮುಖ ತಂಡವೆಂದರೆ ವೆಸ್ಟ್ ಇಂಡೀಸ್. ಇನ್ನು, ಕ್ವಾರ್ಟರ್​ಫೈನಲ್​ನಲ್ಲಿ ಎಲ್ಲಾ ನಾಲ್ಕು ಪಂದ್ಯಗಳು ರೋಚಕ ಆಗಿರಲಿವೆ. ಇಂಗ್ಲೆಂಡ್-ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ-ಪಾಕಿಸ್ತಾನ್ ಪಂದ್ಯಗಳು ಬಹಳ ನಿರೀಕ್ಷೆ ಮೂಡಿಸಿವೆ.
  Published by:Vijayasarthy SN
  First published: