• Home
 • »
 • News
 • »
 • sports
 • »
 • IND vs PAK U19: ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಕೊನೆಯ ಎಸೆತದಲ್ಲಿ ರೋಚಕ ಗೆಲುವು

IND vs PAK U19: ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಕೊನೆಯ ಎಸೆತದಲ್ಲಿ ರೋಚಕ ಗೆಲುವು

ಭಾರತ ಅಂಡರ್-19 ಕ್ರಿಕೆಟ್ ಬ್ಯಾಟರ್ಸ್

ಭಾರತ ಅಂಡರ್-19 ಕ್ರಿಕೆಟ್ ಬ್ಯಾಟರ್ಸ್

ACC U-19 Asia Cup Cricket: ಏಷ್ಯಾ ಕಪ್ ಅಂಡರ್-19 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ವೀರೋಚಿತ ಸೋಲುಂಡಿದೆ. ಪಾಕಿಸ್ತಾನ ಸೆಮಿಫೈನಲ್ ಖಾತ್ರಿಪಡಿಸಿಕೊಂಡಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಸೋಮವಾರ ನಿರ್ಣಾಯಕ ಪಂದ್ಯ ನಡೆಯಲಿದೆ.

 • Share this:

  ದುಬೈ, ಡಿ. 25: ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನ ವಯೋಮಾನದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ (ACC U-19 Asia Cup Cricket Tournament) ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪಿದೆ. ಇಂದು ನಡೆದ ಎ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 2 ವಿಕೆಟ್​ಗಳಿಂದ ರೋಚಕ ಗೆಲುವು ಪಡೆಯಿತು. ಗೆಲ್ಲಲು ಭಾರತ ಒಡ್ಡಿದ 238 ರನ್ ಗುರಿಯನ್ನ ಪಾಕಿಸ್ತಾನದ ಕಿರಿಯರು ಕೊನೆಯ ಎಸೆತದಲ್ಲಿ ತಲುಪಿದರು. ಮುಹಮ್ಮದ್ ಶೆಹಜಾದ್ ಅವರ ಅಮೋಘ ಬ್ಯಾಟಿಂಗ್ ಮತ್ತು ಜೀಶನ್ ಜಮೀರ್ ಅವರ ಮಾರಕ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ಗೆಲುವು ಪಡೆಯಿತು. ಎ ಗುಂಪಿನಲ್ಲಿ ಪಾಕಿಸ್ತಾನ ಸತತ ಎರಡು ಗೆಲುವುಗಳಿಂದ 4 ಅಂಕಗಳನ್ನ ಹೊಂದಿ ಸೆಮಿಫೈನಲ್ ಖಾತ್ರಿಪಡಿಸಿಕೊಂಡಿದೆ.


  ಪಾಕಿಸ್ತಾನದ ಗೆಲುವಿನಲ್ಲಿ ಟಾಸ್ ಕೂಡ ಮಹತ್ವದ ಪಾತ್ರ ವಹಿಸಿತು. ಟಾಸ್ ಗೆದ್ದು ಪಾಕ್ ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭದ ವಾತಾವರಣ ಪಾಕಿಸ್ತಾನದ ವೇಗದ ಬೌಲರ್​ಗೆ ಅನುಕೂಲವಾಗಿತ್ತು. ಪರಿಣಾಮವಾಗಿ ಭಾರತ ತಂಡ 41 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹಿಂದಿನ ಯುಎಇ ವಿರುದ್ಧದ ಪಂದ್ಯದ ಹೀರೋ ಎನಿಸಿದ್ದ ಹರ್ನೂರ್ ಸಿಂಗ್ ಈ ಪಂದ್ಯದಲ್ಲೂ ಆಪದ್ಬಾಂಧವರಾದರು. ಅವರು, ರಾಜ್ ಬಾವ, ಆರಾಧ್ಯ ಯಾದವ್, ಕೌಶಲ್ ತಂಬೆ, ರಾಜವರ್ಧನ್ ಹಂಗರ್ಗೇಕರ್ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿ ಭಾರತಕ್ಕೆ 237 ರನ್​ಗಳ ಗೌರವಾರ್ಹ ಮೊತ್ತ ದೊರಕಿಸಿದರು. ಆರಾಧ್ಯ ಯಾದವ್ ಅರ್ಧಶತಕ ಭಾರಿಸಿದರು.


  ಪಾಕಿಸ್ತಾನದ ವೇಗದ ಬೌಲರ್ ಜೀಶನ್ ಜಮೀರ್ (Jeeshan Zameer) ತುಸು ದುಬಾರಿ ಎನಿಸಿದರೂ 5 ವಿಕೆಟ್ ಕಿತ್ತು ಭಾರತದ ಬ್ಯಾಟಿಂಗ್ ಬುಡವನ್ನು ಅಲ್ಲಾಡಿಸುವಲ್ಲಿ ಯಶಸ್ವಿಯಾದರು.


  238 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನದ ಚೇಸಿಂಗ್​ಗೆ ಪುಷ್ಟಿ ನೀಡಿದ್ದು ಮುಹಮ್ಮದ್ ಶಹಜಾದ್ ಅವರ ಇನ್ನಿಂಗ್ಸ್. 105 ಬಾಲ್​ನಲ್ಲಿ ಅವರು 81 ರನ್ ಗಳಿಸಿದರು. ಪಾಕಿಸ್ತಾನ ಒಂದು ಹಂತದಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಡಿ ದಾಟಿತ್ತು. ಆಗ ಪಾಕಿಸ್ತಾನ ಸುಲಭವಾಗಿ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಭಾರತದ ಯುವ ಬೌಲರ್​ಗಳು ಪ್ರಯತ್ನ ಬಿಡಲಿಲ್ಲ. ಕೊನೆಯ ಎಸೆತದವರೆಗೂ ಹೋರಾಟ ತೋರಿದತು. ಆದರೆ, ಕೊನೆಯ ಬಾಲ್​ನಲ್ಲಿ ಅಹ್ಮದ್ ಖಾನ್ ಬೌಂಡರಿ ಭಾರಿಸಿ ಭಾರತದ ಪ್ರತಿಹೋರಾಟಕ್ಕೆ ಅಂತ್ಯಹಾಡಿದರು.


  ಭಾರತ-ಅಫ್ಘಾನಿಸ್ತಾನ್ ನಿರ್ಣಾಯಕ ಪಂದ್ಯ:


  ಪಾಕಿಸ್ತಾನ 2 ಪಂದ್ಯಗಳಿಂದ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ತಲಾ 2 ಅಂಕಗಳನ್ನ ಹೊಂದಿಗೆ. ಸೋಮವಾರ ಎ ಗುಂಪಿನಲ್ಲಿ ಭಾರತ-ಅಫ್ಘಾನಿಸ್ತಾನ, ಹಾಗು ಪಾಕಿಸ್ತಾನ-ಯುಎಇ ನಡುವಿನ ಪಂದ್ಯಗಳಿವೆ. ಪಾಕ್ ಯುಎಇ ಪಂದ್ಯ ನಾಮಕಾವಸ್ತೆಯದ್ದಾಗಿದೆ. ಸಮಾನ ಅಂಕಗಳನ್ನ ಹೊಂದಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ನಿರ್ಣಾಯಕವಾಗಿದೆ. ಇದರಲ್ಲಿ ಗೆದ್ದ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.


  ಇದನ್ನೂ ಓದಿ: IND vs SA: ಭಾರತ 4-5 ಸೆಷನ್ಸ್ ಬ್ಯಾಟ್ ಮಾಡಲಿಲ್ಲವೆಂದರೆ ಗೆಲ್ಲೋದು ಕಷ್ಟ: ಚೋಪ್ರಾ


  ಇನ್ನು, ಬಿ ಗುಂಪಿನಲ್ಲಿ ಬಾಂಗ್ಲಾದೇಶ ತಂಡ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ. ಮತ್ತೊಂದು ಸ್ಥಾನಕ್ಕಾಗಿ ಶ್ರೀಲಂಕಾ, ಕುವೈತ್ ಮತ್ತು ನೇಪಾಳ ಮಧ್ಯೆ ಈಗಲೂ ಪೈಪೋಟಿ ಇದೆ.


  ಸ್ಕೋರು ವಿವರ:


  ಭಾರತ ಕಿರಿಯರ ತಂಡ 49 ಓವರ್ 237/10
  (ಆರಾಧ್ಯ ಯಾದವ್ 50, ಕೌಶಲ್ ತಂಬೆ 32, ರಾಜವರ್ಧನ್ ಹಂಗರ್ಗೇಕರ್ 33, ಹರ್ನೂರ್ ಸಿಂಗ್ 46 ರನ್- ಜೀಷನ್ ಜಮೀರ್ 60/5, ಅವೇಸ್ ಅಲಿ 43/2)


  ಪಾಕಿಸ್ತಾನ ಕಿರಿಯರ ತಂಡ 50 ಓವರ್ 240/8
  (ಮುಹಮ್ಮದ್ ಶೆಹಜಾದ್ 82, ಇರ್ಫಾನ್ ಖಾನ್ 33, ರಿಜ್ವಾನ್ ಮೆಹಮೂದ್ 29, ಅಹಮದ್ ಖಾನ್ ಅಜೇಯ 29, ಖಾಸಿಂ ಅಕ್ರಮ್ 22 ರನ್- ರಾಜ್ ಬಾವ 56/4)

  Published by:Vijayasarthy SN
  First published: