ಮಹಿಳಾ ಕಿರಿಯರ ಫಿಫಾ ವಿಶ್ವಕಪ್ ದಿನಾಂಕ ಪ್ರಕಟ; ಭಾರತ ಆತಿಥ್ಯ

U-17 Women’s World Cup: ಈ ಮೊದಲು ನವೆಂಬರ್​ 2ರಿಂದ 21ರವರೆಗೆ ಮಹಿಳಾ ಕಿರಿಯರ ವಿಶ್ವಕಪ್​​​ ಟೂರ್ನಿಯ ದಿನಾಂಕ ನಿಗದಿಯಾಗಿತ್ತು. ಆದರೆ ಕೊರೋನಾ ಲಾಕ್​​ಡೌನ್​ನಿಂದಾಗಿ ಟೂರ್ನಿ ದಿನಾಂಕ ಮುಂದಕ್ಕೆ ಹೋಗಿದೆ. ಮುಂಬರುವ 2021ರಲ್ಲಿ ಈ ಟೂರ್ನಿಯನ್ನು ನಡೆಸಲಾಗುತ್ತದೆ ಎಂದು ಮಂಗಳವಾರ ಪ್ರಕಟಿಸಲಾಗಿದೆ.

ಮಹಿಳಾ ಕಿರಿಯರ ಫಿಫಾ ವಿಶ್ವಕಪ್

ಮಹಿಳಾ ಕಿರಿಯರ ಫಿಫಾ ವಿಶ್ವಕಪ್

 • Share this:
  ಮಹಿಳಾ ಕಿರಿಯರ ವಿಶ್ವಕಪ್​​​​​ ಫುಟ್ಬಾಲ್​​ ಟೂರ್ನಿಯ ದಿನಾಂಕ ಪ್ರಕಟವಾಗಿದೆ.  2021ರ ಫೆಬ್ರವರಿ 17ರಿಂದ ಮಾರ್ಚ್​ 7ರವರೆಗೆ ಈ ಟೂರ್ನಿ ನಡೆಯಲಿದ್ದು, ಭಾರತ ಕೂಡ ಆತಿಥ್ಯವಹಿಸಲಿದೆ.

  ಈ ಮೊದಲು ನವೆಂಬರ್​ 2ರಿಂದ 21ರವರೆಗೆ ಮಹಿಳಾ ಕಿರಿಯರ ಫಿಫಾ ವಿಶ್ವಕಪ್​​​ ಟೂರ್ನಿಯ ದಿನಾಂಕ ನಿಗದಿಯಾಗಿತ್ತು. ಆದರೆ ಕೊರೋನಾ ಲಾಕ್​​ಡೌನ್​ನಿಂದಾಗಿ ಟೂರ್ನಿ ದಿನಾಂಕ ಮುಂದಕ್ಕೆ ಹೋಗಿದೆ. ಮುಂಬರುವ 2021ರಲ್ಲಿ ಈ ಟೂರ್ನಿಯನ್ನು ನಡೆಸಲಾಗುತ್ತದೆ ಎಂದು ಮಂಗಳವಾರ ಪ್ರಕಟಿಸಲಾಗಿದೆ.

  ಟೂರ್ನಿ 2021ಕ್ಕೆ ನಿಗದಿಯಾಗಿರುವುದರಿಂದ ಅರ್ಹತಾ ಮಾನದಂಡವು ಬದಲಾಗುವುದಿಲ್ಲ. 2003, ಜನವರಿ 1ರ ನಂತರ ಮತ್ತು 2005ರ ಡಿಸೆಂಬರ್​​​ 31ಕ್ಕಿಂತ ಮೊದಲು ಜನಿಸಿದವರು ಟೂರ್ನಿಗೆ ಅರ್ಹರು ಎಂದು ಫಿಫಾ ಹೇಳಿದೆ.

  ಈ ಬಾರಿ ಕೊಲ್ಕತ್ತ, ಗುವಾಹಟಿ, ಭುವನೇಶ್ವರ, ಅಹ್ಮದಾಬಾದ್​​ ಹಾಗೂ ಮುಂಬೈನಲ್ಲಿ ಟೂರ್ನಿಗಳನ್ನು ನಡೆಯಲಿದೆ. ವಿಶ್ವದಾದ್ಯಂತ 16 ತಂಡಗಳು ಈ ಮಹಿಳಾ ಕಿರಿಯರ ಫಿಫಾದಲ್ಲಿ ಪಾಲ್ಗೊಳ್ಳಲಿದೆ, ಭಾರತ ಕೂಡ ಈ ಟೂರ್ನಿಯಲ್ಲಿ ಆತಿಥ್ಯವಹಿಸಲಿದೆ.

  ಇನ್ನು ಮಹಿಳಾ ಕಿರಿಯರ ಫಿಫಾ ನಡೆಯುವ ದಿನಾಂಕ ನಿಗದಿ ಕುರಿತು ಕ್ರೀಡಾ ಸಚಿವ ಕಿರಣ್​ ರಿಜಿಜು ಪ್ರತಿಕ್ರಿಯಿಸಿದ್ದಾರೆ. ಟೂರ್ನಿ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.

  ಸಮಂತಾ ಅಕ್ಕಿನೇನಿ ಈ ಪಾತ್ರ ಮಾಡಲು ತುಂಬಾ ಭಯಪಟ್ಟಿದ್ದರಂತೆ!
  First published: