ಚೀನಾದ ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡಾನ್ ಶನಿವಾರ ತಮ್ಮ 20 ವರ್ಷದ ಬ್ಯಾಡ್ಮಿಂಟನ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಪೋಸ್ಟ್ವೊಂದನ್ನು ಹಾಕಿರುವ ಲಿನ್ ಡಾನ್, ತನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬೀಜಿಂಗ್ ಹಾಗೂ ಲಂಡನ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ಲೀ ಇದೀಗ ನಿವೃತ್ತಿ ನಿರ್ಧಾರ ಪ್ರಕಟಿಸುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಹ್ಯಾಟ್ರಕ್ ಪೂರೈಸುವ ಅವಕಾಶ ತಪ್ಪಿಸಿಕೊಂಡಿದ್ದಾರೆ. ಈ ವರ್ಷ ನಡೆಯಬೇಕಾಗಿದ್ದ ಟೋಕಿಯೊ ಒಲಿಂಪಿಕ್ಸ್ ಕೊರೋನ ವೈರಸ್ ಕಾರಣಕ್ಕೆ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.
2011 ವಿಶ್ವಕಪ್ ಫೈನಲ್ ಫಿಕ್ಸಿಂಗ್ ಪ್ರಕರಣ: ಸಾಕ್ಷ್ಯವಿಲ್ಲ ಎಂದು ತನಿಖೆ ಕೈ ಬಿಟ್ಟ ಶ್ರೀಲಂಕಾ!
2000 ದಿಂದ 2020 ರವರೆಗೆ ಸುಮಾರು 20 ವರ್ಷಗಳ ನಂತರ ನಾನು ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳಬೇಕಿದೆ. ಅದನ್ನು ಮಾತಿನಲ್ಲಿ ಹೇಳಲು ತುಂಬಾ ಕಷ್ಟವಾಗುತ್ತಿದೆ ಎಂದು ಚೀನಾದ ಟ್ವಿಟರ್ ತರಹದ ಸಾಮಾಜಿಕ ಮಾಧ್ಯಮವಾದ ವಿಬೋದಲ್ಲಿ ಲಿನ್ ಡಾನ್ ಹೇಳಿದ್ದಾರೆ.
"ನಾನು ಪ್ರೀತಿಸುವ ಕ್ರೀಡೆಗೆ ಎಲ್ಲವನ್ನೂ ಅರ್ಪಿಸಿದ್ದೇನೆ. ನಾನು ಗೆದ್ದು ಸಂಭ್ರಮಿಸಿದಾಗ, ಸೋತು ಕುಸಿದಾಗಲೆಲ್ಲಾ ನನ್ನ ಕುಟುಂಬಸ್ಥರು, ತರಬೇತುದಾರರು, ತಂಡದ ಸದಸ್ಯರು ಮತ್ತು ಅಭಿಮಾನಿಗಳು ನನ್ನ ಜೊತೆಗಿದ್ದರು" ಎಂದು ಡಾನ್ ಹೇಳಿರುವುದಾಗಿ ಚೀನಾದ ಮಾಧ್ಯಮಗಳು ವರದಿ ಮಾಡಿವೆ.
Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್ಮನ್ಗಳು ಇವರೇ..!
ಕಳೆದ ವರ್ಷ ಲಿನ್ ಡಾನ್ ಅವರ ಬದ್ಧ ಎದುರಾಳಿ, ಸ್ನೇಹಿತ ಮಲೇಷ್ಯಾದ ಸ್ಟಾರ್ ಶೆಟ್ಲರ್ ಲೀ ಚೊಂಗ್ ವೀ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಬ್ಯಾಡ್ಮಿಂಟನ್ ಲೋಕದಲ್ಲಿ ಮಿನುಗಿದ್ದ ಲಿನ್ ಡಾನ್ ವೃತ್ತಿ ಬದುಕೂ ಕಳೆಗುಂದುತ್ತಾ ಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ