'ಭಾರತಕ್ಕೆ ಮತ್ತೊಂದು ವಿಶ್ವಕಪ್ ಸೋಲು ಖಚಿತ': ಶಾಸ್ತ್ರಿಯೇ ಕೋಚ್ ಆಗಿದ್ದಕ್ಕೆ ಅಭಿಮಾನಿಗಳ ಕಿಡಿ

ಶಾಸ್ತ್ರಿ ಅವರನ್ನೇ ಮತ್ತೆ ಕೋಚ್ ಆಗಿ ಆಯ್ಕೆ ಮಾಡುತ್ತೀರಿ ಎಂದಾದರೆ, ಸಂದರ್ಶನ, ಹೊಸ ಕೋಚ್​ಗೆ ಅರ್ಜಿ ಸಲ್ಲಿಸುವಿಕೆ ಇದೆಲ್ಲಾ ಯಾಕೆ ಬೇಕಿತ್ತು ಎಂದು ಟ್ವಿಟ್ಟರ್​ನಲ್ಲಿ ಅಭಿಮಾನಿಗಳು ಕಿಡಿ ಕಾರಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ

ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ

  • News18
  • Last Updated :
  • Share this:
ಬೆಂಗಳೂರು (ಆ. 17): ಅಂದುಕೊಂಡಂತೆ ಟೀಂ ಇಂಡಿಯಾ ಹೊಸ ಕೂಚ್ ಆಗಿ ರವಿಶಾಸ್ತ್ರಿ ಅವರನ್ನೇ ಮರು ಆಯ್ಕೆ ಮಾಡಲಾಗಿದೆ. ಕಪೀಲ್ ದೇವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಲಿ ಕೋಚ್​ರನ್ನೇ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ.

ನ್ಯೂಜಿಲ್ಯಾಂಡ್​ನ ಮಾಜಿ ಕೋಚ್​​ ಮೈಕ್​ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್​ ಹಾಗೂ ಶ್ರೀಲಂಕಾ ಕೋಚ್​ ಟಾಮ್​ ಮೂಡಿ, ಆಫ್ಘಾನಿಸ್ತಾನದ ಕೋಚ್​​ ಸಿಮನ್ಸ್​​, ಟೀಂ ಇಂಡಿಯಾ ಮಾಜಿ ಮ್ಯಾನೇಜರ್​ ಲಾಲ್​ಚಂದ್​ ರಜಪೂತ್​, ರಾಬಿನ್​​ ಸಿಂಗ್​​ ಹೆಸರುಗಳು ಹೊಸ ಕೋಚ್ ಪಟ್ಟಿಯಲ್ಲಿದ್ದವು.

ಇವರೆಲ್ಲರನ್ನು ಹಿಂದಿಕ್ಕಿ ಮತ್ತೊಮ್ಮೆ ತಂಡದ ತರಬೇತುದಾರರಾಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ. ಹೊಸ ಕೋಚ್​ನ ಅವಧಿ 2021 ವಿಶ್ವಕಪ್ ಟಿ-20 ವರೆಗೆ ಇರಲಿದ್ದು, ಆ ಬಳಿಕ ಮತ್ತೆ ಮರು ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

India vs West Indies: ಇಂದಿನಿಂದ ವಿಂಡೀಸ್ ಇಲೆವೆನ್ ವಿರುದ್ಧ ಭಾರತಕ್ಕೆ ಅಭ್ಯಾಸ ಪಂದ್ಯ

 ಈ ಹಿಂದೆ ನಾಯಕ ವಿರಾಟ್ ಕೊಹ್ಲಿ, 'ರವಿಶಾಸ್ತ್ರಿ ಅವರೇ ಭಾರತ ತಂಡದ ಕೋಚ್ ಆಗಿ ಮುಂದುವರಿದರೆ ಉತ್ತಮ' ಎಂದು ಹೇಳಿದ್ದರು. ಅಲ್ಲದೆ ಇನ್ನೊಂದು ಅವಧಿಗೆ ಶಾಸ್ತ್ರಿ ಅರವನ್ನೇ ಕೋಚ್​ ಆಗಿ ಮುಂದುವರಿಸುವ ಇರಾದೆ ಬಿಸಿಸಿಐಗೆ ಇದೆ ಎನ್ನಲಾಗಿತ್ತು.

ಸದ್ಯ ರವಿಶಾಸ್ತ್ರಿ ಅವರನ್ನೇ ಮತ್ತೆ ಭಾರತದ ಕೋಚ್ ಆಗಿ ಆಯ್ಕೆ ಮಾಡಿದ್ದಕ್ಕೆ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. 'ಶಾಸ್ತ್ರಿ ಅವರನ್ನೇ ಮತ್ತೆ ಕೋಚ್ ಆಗಿ ಆಯ್ಕೆ ಮಾಡುತ್ತೀರಿ ಎಂದಾದರೆ, ಸಂದರ್ಶನ, ಹೊಸ ಕೋಚ್​ಗೆ ಅರ್ಜಿ ಸಲ್ಲಿಸುವಿಕೆ ಇದೆಲ್ಲಾ ಯಾಕೆ ಬೇಕಿತ್ತು' ಎಂದು ಟ್ವಿಟ್ಟರ್​ನಲ್ಲಿ ಅಭಿಮಾನಿಗಳು ಕಿಡಿ ಕಾರಿದ್ದಾರೆ.

 ಅಲ್ಲದೆ 'ರವಿಶಾಸ್ತ್ರಿ ಮತ್ತೊಮ್ಮ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಭಾರತ ಮತ್ತೊಂದು ವಿಶ್ವಕಪ್ ಸೋಲುವುದು ಖಚಿತ' ಎಂದು ಬರೆದುಕೊಂಡಿದ್ದಾರೆ.

 ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ)
First published: