ಧೋನಿ ಕ್ಯಾಚ್​ಗೆ ಫಿದಾ ಆದ ಅಭಿಮಾನಿಗಳು; ಟ್ರೋಲ್​ ಆದ ಪಾಕ್​ ನಾಯಕ​ ಸರ್ಫರಾಜ್​

Dhoni Dive Catch: ಸರ್ಫರಾಜ್​ ಹಾಗೂ ಧೋನಿ ಕ್ಯಾಚ್​ ಹಿಡಿದ ವಿಡಿಯೋವನ್ನು ಸೇರಿಸಿ ಟ್ವೀಟ್​ ಮಾಡಿದ್ದ ಐಸಿಸಿ ಯಾವುದು ಉತ್ತಮ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿತ್ತು. ಇದಕ್ಕೆ ಧೋನಿ ಎಂದು ಉತ್ತರ ಕೊಟ್ಟಿರುವ ಅನೇಕರು, ಸರ್ಫರಾಜ್​ ಅವರನ್ನು ಟ್ರೋಲ್​ ಮಾಡಿದ್ದಾರೆ.

Rajesh Duggumane | news18
Updated:June 28, 2019, 9:26 AM IST
ಧೋನಿ ಕ್ಯಾಚ್​ಗೆ ಫಿದಾ ಆದ ಅಭಿಮಾನಿಗಳು; ಟ್ರೋಲ್​ ಆದ ಪಾಕ್​ ನಾಯಕ​ ಸರ್ಫರಾಜ್​
ಧೋನಿ-ಸರ್ಫರಾಜ್​
Rajesh Duggumane | news18
Updated: June 28, 2019, 9:26 AM IST
ಅದು ವೆಸ್ಟ್​ ಇಂಡೀಸ್​ ಹಾಗೂ ಭಾರತದ ನಡುವಣ ವಿಶ್ವಕಪ್​ ಹಣಾಹಣಿ. 27ನೇ ಓವರ್​ ಎಸೆಯಲು ಬೂಮ್ರಾ​ ಬಾಲ್​ ಹಿಡಿದಿದ್ದರು. ಅವರ ಮೊದಲನೇ ಎಸೆತ ಎದುರಿಸಲು ಬ್ಯಾಟ್​ ಹಿಡಿದು ನಿಂತಿದ್ದು ಬ್ರಾಥ್​ವೈಟ್. ಬೂಮ್ರಾ ಬಾಲನ್ನು ಎಸೆಯುತ್ತಿದ್ದಂತೆ ಅದು ಬ್ಯಾಟ್​ಗೆ ತಾಗಿ ಕೀಪರ್​ನತ್ತ ಸಾಗಿತ್ತು. ಕೀಪರ್​ ಎಂಎಸ್​ ಧೋನಿ ಅದ್ಭುತವಾಗಿ ಕ್ಯಾಚ್​ ಹಿಡಿಯುವ ಮೂಲಕ ಬ್ರಾಥ್​ವೈಟ್​ರನ್ನು ಪೆವಿಲಿಯನ್​ಗೆ ಕಳುಹಿಸಿದ್ದರು.

ಇದಾಗಿದ್ದೇ ತಡ, ಧೋನಿ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿಬಿಟ್ಟರು. ಅಷ್ಟು ಕಷ್ಟದ ಕ್ಯಾಚ್​ಅನ್ನು ಡೈವ್​ ಮಾಡಿ ಸುಲಭವಾಗಿ ಹಿಡಿದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಸುರಿಮಳೆಯೇ ಕೇಳಿಬಂದಿದೆ. ಅಷ್ಟೇ ಅಲ್ಲ, ಧೋನಿ ಸಾಮರ್ಥ್ಯವನ್ನು ಎಲ್ಲರೂ ಕೊಂಡಾಡಿದ್ದಾರೆ.

ಈ ಮೊದಲಿನಿಂದಲೂ ಟ್ರೋಲ್​ ಆಗುತ್ತಾ ಬಂದಿದ್ದ ಪಾಕ್​ ಕ್ಯಾಪ್ಟನ್​ ಹಾಗೂ ವಿಕೆಟ್​ ಕೀಪರ್​ ಸರ್ಫರಾಜ್​ ಅಹ್ಮದ್​ ಮತ್ತೆ ಮುನ್ನೆಲೆಗೆ ಬಂದಿದ್ದಾರೆ! ಧೋನಿ ಕ್ಯಾಚ್​ ಹಿಡಿಯುತ್ತಿದ್ದಂತೆ ಸರ್ಫರಾಜ್​ ಅವರನ್ನು ಟ್ರೋಲ್​ ಮಾಡಲಾಗಿದೆ. ಇದಕ್ಕೆ ಐಸಿಸಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡ ವಿಡಿಯೋ ಕಾರಣ.

ಇದನ್ನೂ ಓದಿ: ಕೊಹ್ಲಿ ಪಡೆಯ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ವಿಂಡೀಸ್; ಭಾರತದ ಸೆಮೀಸ್ ಹಾದಿ ಸುಗಮ



ಈ ಮೊದಲು ಸರ್ಫರಾಜ್​ ಕೂಡ ಹೀಗೆಯೇ ಡೈವ್​ ಮಾಡಿ ಕ್ಯಾಚ್​ ಹಿಡಿದ್ದರು. ಆದರೆ ಅವರು ಅದಕ್ಕೆ ತುಂಬಾ ಪ್ರಯಾಸಪಟ್ಟಂತೆ ಕಾಣುತ್ತಿತ್ತು. ಈ ವಿಡಿಯೋ ಹಾಗೂ ಧೋನಿ ಕ್ಯಾಚ್​ ಹಿಡಿದ ವಿಡಿಯೋವನ್ನು ಸೇರಿಸಿ ಟ್ವೀಟ್​ ಮಾಡಿದ್ದ ಐಸಿಸಿ ಯಾವುದು ಉತ್ತಮ? ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿತ್ತು. ಇದಕ್ಕೆ ಧೋನಿ ಎಂದು ಉತ್ತರ ಕೊಟ್ಟಿರುವ ಅನೇಕರು ಸರ್ಫರಾಜ್​ ಅವರನ್ನು ಟ್ರೋಲ್​ ಮಾಡಿದ್ದಾರೆ.

“ಕ್ಯಾಚ್​ ಹಿಡಿಯುವಾಗ ಧೋನಿ ಆಕಸ್ಮಿಕವಾಗಿ ನೆಲಕ್ಕೆ ಬಿದ್ದರು. ಆದರೆ ಸರ್ಫರಾಜ್​ ನಿದ್ರೆಯಿಂದ ಕೆಳಗೆ  ಬೀಳುವಾಗ ಆಕಸ್ಮಿಕವಾಗಿ ಕ್ಯಾಚ್​ ಹಿಡಿದರು” ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಒಟ್ಟಿನಲ್ಲಿ ಧೋನಿ ಹೀರೋ ಆಗುವುದರ ಜೊತೆಗೆ ಸರ್ಫರಾಜ್​ ಭಾರೀ ಟ್ರೋಲ್​ ಕೂಡ ಆಗಿದ್ದಾರೆ.

ಇದನ್ನೂ ಓದಿ: ಹೇಗಿತ್ತು ಭಾರತ-ವೆಸ್ಟ್​​ ಇಂಡೀಸ್​ ನಡುವಣ ಹಣಾಹಣಿ?; ಇಲ್ಲಿದೆ ಹೈಲೈಟ್ಸ್​​













First published:June 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...