ಭಾರತೀಯರು ಟ್ರೂ ಕಾಲರ್ ಆ್ಯಪ್ ಬಳಸುತ್ತಿದ್ದಾರೆ. ಅದರ ಮೂಲಕ ಅಪರಿಚಿತ ನಂಬರ್ನಿಂದ ಬಂದ ಕರೆಗಳನ್ನು ಪರಿಶೀಲಿಸಲು ಸಹಾಯಕವಾಗಿದೆ. ಇದೀಗ ಟ್ರೂ ಕಾಲರ್ ಆ್ಯಪ್ ಅಭಿವೃದ್ಧಿ ಪಡಿಸಿದ್ದ ಸಂಸ್ಥೆಯು ಗಾರ್ಡಿಯನ್ ಹೆಸರಿನ ಆ್ಯಪ್ವೊಂದನ್ನು ಸಿದ್ಧಪಡಿಸಿ ಪರಿಚಯಿಸಿದೆ.
ಮಹಿಳೆಯರ ಭದ್ರತೆಯನ್ನು ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಂಡು ಗಾರ್ಡಿಯನ್ ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಯಾರೇ ಆದರು ಅಪಾಯದಲ್ಲಿರುವ ವೇಳೆ ಗಾರ್ಡಿಯನ್ನಲ್ಲಿರುವ ಎಮರ್ಜೆನ್ಸಿ ಬಟನ್ ಒತ್ತಿದರೆ ಸಾಕು ಅವರಿಗೆ ತಕ್ಷಣವೇ ಸುರಕ್ಷತೆಯನ್ನು ಒದಗಿಸುವಲ್ಲಿ ಈ ಆ್ಯಪ್ ನೆರವು ನೀಡುತ್ತಿದೆ.
ಅಂದಹಾಗೆಯೇ ಗಾರ್ಡಿಯನ್ ಆ್ಯಪ್ನಲ್ಲಿ ಕುಟುಂಬದವರು, ಸ್ನೇಹಿತರು, ಸ್ಥಳೀಯ ಪೊಲೀಸ್ ಸಹಾಯವಾಣಿ ನಂಬರ್ಗಳನ್ನು ಗಾರ್ಡಿಯನ್ ಆಗಿ ಸೇವ್ ಮಾಡಿಕೊಳ್ಳಬಹುದು. ತುರ್ತು ಅಥವಾ ಅಪಾಯವಿದೆ ಎಂದು ತಿಳಿದಾಗ ಆ್ಯಪ್ನಲ್ಲಿರುವ ಎಮರ್ಜೆನಿ ಬಟನ್ ಒತ್ತಿದರೆ ತಕ್ಷಣವೇ ಗಾರ್ಡಿಯನ್ಗಳಿಗೆ ಮಾಹಿತಿ ತಲುಪುತ್ತದೆ. ಮತ್ತು ಅಪಾಯದಲ್ಲಿದ್ದಾರೆ ಎಂಬುದನ್ನು ತಿಳಿಸುತ್ತದೆ.
ನಗರ ಪ್ರದೇಶಗಳಲ್ಲಿ ರಾತ್ರಿ ವೇಳೆ ಈ ಆ್ಯಪ್ ಹೆಚ್ಚು ಉಪಯೋಗಕ್ಕೆ ಬರಲಿದೆ. ಜೊತೆಗೆ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ನೆರವಾಗಲಿದೆ ಈ ಗಾರ್ಡಿಯನ್ ಆ್ಯಪ್.
ಈ ಆ್ಯಪ್ನಲ್ಲಿ ಯಾರನ್ನು ಬೇಕಾದರು ಗಾರ್ಡಿಯನ್ ಆಗಿ ಸೇರಿಸಿಕೊಳ್ಳಬಹುದು. ಮಾತ್ರವಲ್ಲದೆ ಎಲ್ಲಾ ನಂಬರ್ಗಳಿಗೂ ಏಕಕಾಲದಲ್ಲಿ ತುರ್ತು ಸಂದೇಶ ಹೋಗುವ ಆಯ್ಕೆಯನ್ನು ಮಾಡಬಹುದಾಗಿದೆ.
ಟ್ರೂ ಕಾಲರ್ ಸಿಇಒ ಅಲನ್ ಮಾಮೆಡಿ ಈ ಬಗ್ಗೆ ಮಾತನಾಡಿ, ’ಗಾರ್ಡಿಯನ್ ಎಂದರೆ ರಕ್ಷಕರು ಎಂದು ಅರ್ಥ. ಅಪಾಯದಲ್ಲಿರುವ ಸಮಯದಲ್ಲಿ ಈ ಆ್ಯಪ್ ನೆರವಿಗೆ ಬರಲಿದೆ. ಜನರ ರಕ್ಷಣೆಗೆ ಮೊದಲ ಆದತ್ಯೆಯನ್ನು ನೀಡುತ್ತಿದ್ದೇವೆ. ಹಣ ಗಳಿಸುವುದು ನಮ್ಮ ಉದ್ದೇಶವಲ್ಲ’ ಎಂದು ಹೇಳಿದ್ದಾರೆ.
ಗಾರ್ಡಿಯನ್ ಆ್ಯಪ್ ಅನ್ನು ಭಾರತ ಮಾತ್ರವಲ್ಲದೆ ಬೇರೆ ದೇಶಗಳಲ್ಲಿಯೂ ಪರಿಚಯಿಸಲು ಮುಂದಾಗಿದೆ. ಅದಕ್ಕಾಗಿ ವಿವಿಧ ದೇಶಗಳ ಸರ್ಕಾರದ ಜೊತೆಗೆ ಮಾತನಾಡಿಕೊಂಡು ಮುಂದಿನ ಕ್ರಮದ ಬಗ್ಗೆ ಆಲೋಚನೆ ಮಾಡಿದೆ. ಆ್ಯಂಡ್ರಾಯ್ಡ್ ಬಳಕೆದಾರರಿಗಾಗಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ಮತ್ತು ಐಫೋನ್ ಬಳಕೆದಾರರಿಗೆ ಆ್ಯಪಲ್ ಸ್ಟೋರ್ನಲ್ಲಿ ಬಿಡುಗಡೆ ಮಾಡಿದೆ.
Truecaller ಆ್ಯಪ್:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ