ಟೆಸ್ಟ್​ ಆರಂಭಕ್ಕೂ ಮುನ್ನವೇ ಭಾರತಕ್ಕೆ ಪಂಚ್‌ ನೀಡಲಿದ್ದೇವೆ ಆಸ್ಟ್ರೇಲಿಯಾ ಆರಂಭಿಕನ ಎಚ್ಚರಿಕೆ..!

ಎರಡನೇ ಏಕದಿನ ಪಂದ್ಯದಲ್ಲಿ ಗಾಯಗೊಂಡಿರುವ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ. ಹೀಗಾಗಿ ಆರಂಭಿಕರಾಗಿ ಜೋ ಬರ್ನ್ಸ್‌ ಹಾಗೂ ಯುವ ಬ್ಯಾಟ್ಸ್​ಮನ್​ ವಿಲಿಯಮ್‌ ಪುಕೋವೊಸ್ಕೀ ಇನಿಂಗ್ಸ್ ಆರಂಭಿಸಲಿದ್ದಾರೆ.

india vs australia

india vs australia

 • Share this:
  ಆಸ್ಟ್ರೇಲಿಯಾ-ಭಾರತ ನಡುವಣ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಶುರುವಾಗಲಿದೆ. ಆದರೆ ಅದಕ್ಕೂ ಮುನ್ನವೇ ನಾವು ಅಭ್ಯಾಸ ಪಂದ್ಯದಲ್ಲೇ ಮೊದಲ ಪಂಚ್ ನೀಡಲಿದ್ದೇವೆ ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಜೋ ಬರ್ನ್ಸ್ ಎಚ್ಚರಿಸಿದ್ದಾರೆ. ಟೀಮ್ ಇಂಡಿಯಾ ಟಿ20 ಸರಣಿ ಬಳಿಕ ಆಸ್ಟ್ರೇಲಿಯಾ ಎ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಈ ಅಭ್ಯಾಸ ಪಂದ್ಯದಲ್ಲಿ ಗೆಲ್ಲುವು ಮೂಲಕ ನಮ್ಮ ತಂಡದ ಮೇಲುಗೈ ಸಾಧಿಸಲಿದೆ ಎಂದು ಬರ್ನ್ಸ್​ ತಿಳಿಸಿದ್ದಾರೆ.

  ಮೊದಲ ಅಭ್ಯಾಸ ಪಂದ್ಯ ಡಿಸೆಂಬರ್‌ 6ರಂದು ಶುರುವಾಗಲಿದೆ. ಹಾಗೆಯೇ ಡಿಸೆಂಬರ್‌ 11 ರಿಂದ ಡೇ-ನೈಟ್‌ ಟೆಸ್ಟ್ ಅಭ್ಯಾಸ ಪಂದ್ಯ ಜರುಗಲಿದೆ. ಇದೇ ಮೊದಲ ಬಾರಿಗೆ ಭಾರತ-ಆಸ್ಟ್ರೇಲಿಯಾ ತಂಡಗಳ ನಡುವೆ ಪಿಂಕ್‌ ಬಾಲ್‌ ಟೆಸ್ಟ್‌ ನಡೆಯಲಿದ್ದು, ಹೀಗಾಗಿ ಪಿಂಕ್ ಬಾಲ್​ನೊಂದಿಗೆ ಹೊನಲು ಬೆಳಕಿನ ಅಭ್ಯಾಸ ಪಂದ್ಯವನ್ನು ಏರ್ಪಡಿಸಲಾಗಿದೆ.

  ನಮ್ಮ ಗುರಿ ಭಾರತ ತಂಡವನ್ನು ಮಣಿಸುವುದು. ಅದು ಅಭ್ಯಾಸ ಪಂದ್ಯಗಳಲ್ಲೂ ಮುಂದುವರೆಯಲಿದೆ. ಏಕೆಂದರೆ ಟೀಮ್ ಇಂಡಿಯಾ ವಿರುದ್ಧದ ಅಭ್ಯಾಸ ಪಂದ್ಯ ಟೆಸ್ಟ್ ಸರಣಿಗೆ ಉತ್ತಮ ತಂಡವನ್ನು ಕಟ್ಟಲು ನೆರವಾಗಲಿದೆ. ಹಾಗೆಯೇ ಟೆಸ್ಟ್ ಸರಣಿಗೂ ಮುನ್ನವೇ ಟೀಮ್ ಇಂಡಿಯಾ ಪಂಚ್ ನೀಡಲು ಇದು ಉತ್ತಮ ವೇದಿಕೆ. ಈ ಮೂಲಕ ಭಾರತದ ಆಟಗಾರರು ಆತ್ಮವಿಶ್ವಾಸದಿಂದ ಇರದಂತೆ ಎಚ್ಚರಿಕೆವಹಿಸಬೇಕಾಗುತ್ತದೆ ಎಂದು ಜೋ ಬರ್ನ್ಸ್ ತಿಳಿಸಿದ್ದಾರೆ.

  ಇದೇ ವೇಳೆ ಭಾರತ ವೇಗಿಗಳ ಬಗ್ಗೆ ಮಾತನಾಡಿದ ಬರ್ನ್ಸ್, ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಹೀಗಾಗಿ ಅವರು ನಮಗೆ ಕಠಿಣವಾಗಲಿದ್ದಾರೆ. ಯಾವುದೇ ಹಂತದಲ್ಲೂ ಭಾರತ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಕಡೆಗಣಿಸುವಂತಿಲ್ಲ ಎಂದರು.

  ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ಗಾಯಗೊಂಡಿರುವ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ. ಹೀಗಾಗಿ ಆರಂಭಿಕರಾಗಿ ಜೋ ಬರ್ನ್ಸ್‌ ಹಾಗೂ ಯುವ ಬ್ಯಾಟ್ಸ್​ಮನ್​ ವಿಲಿಯಮ್‌ ಪುಕೋವೊಸ್ಕೀ ಇನಿಂಗ್ಸ್ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!
  Published by:zahir
  First published: