ಸಾಕು ನಾಯಿ ಜೊತೆ ಫೋಟೋ ಹಾಕಿ ದೆಹಲಿಗೆ ಬಂದೆ ಎಂದ ಕೊಹ್ಲಿ

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಎರಡು ಪಂದ್ಯ ಗೆದ್ದು ಸಮಬಲ ಸಾಧಿಸಿದ್ದು, ಅಂತಿಮ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ತವರಿನಲ್ಲೇ ಟಿ-20 ಸರಣಿಯನ್ನು ಕಳೆದುಕೊಂಡಿದ್ದ ಭಾರತ ಕನಿಷ್ಠ ಏಕದಿನ ಸರಣಿಯನ್ನಾದರು ಗೆಲ್ಲಬೇಕೆಂದು ಪಣತೊಟ್ಟಿದೆ.

Vinay Bhat | news18
Updated:March 13, 2019, 5:05 PM IST
ಸಾಕು ನಾಯಿ ಜೊತೆ ಫೋಟೋ ಹಾಕಿ ದೆಹಲಿಗೆ ಬಂದೆ ಎಂದ ಕೊಹ್ಲಿ
ಸಾಕು ನಾಯಿ ಜೊತೆ ವಿರಾಟ್ ಕೊಹ್ಲಿ
  • News18
  • Last Updated: March 13, 2019, 5:05 PM IST
  • Share this:
ನವ ದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಹಾಗೂ ಅಂತಿಮ ಏಕದಿನ ಪಂದ್ಯ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿದೆ. ಇದಕ್ಕಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೆಹಲಿಗೆ ಬಂದಿಳಿದಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸಾಕು ನಾಯಿ ಜೊತೆ ಫೋಟೋವೊಂದನ್ನು ಹಂಚಿಕೊಂಡಿರುವ ಕೊಹ್ಲಿ, ದೆಹಲಿಗೆ ಬಂದೆ ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಈ ಪೋಟೋ ಹಂಚಿಕೊಂಡ ಕೆಲವೇ ಘಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿದ್ದು, ಸಾಕಷ್ಟು ಕಮೆಂಟ್​​ಗಳು ಬರುತ್ತಿವೆ.

  View this post on Instagram
 

Touchdown Delhi 🐶


A post shared by Virat Kohli (@virat.kohli) on


ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದರು. ಜೊತೆಗೆ ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.

ಇದನ್ನೂ ಓದಿ: (VIDEO): ಧೋನಿ ಸ್ಟೈಲ್ ಕಾಪಿ ಮಾಡಲು ಹೋಗಿ ಪಂತ್ ಎಡವಟ್ಟು; ಟ್ವಿಟ್ಟರ್​​​ನಲ್ಲಿ ಬೈಗುಳಗಳ ಸುರಿಮಳೆ

ಸದ್ಯ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಎರಡು ಪಂದ್ಯ ಗೆದ್ದು ಸಮಬಲ ಸಾಧಿಸಿದ್ದು, ಅಂತಿಮ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ತವರಿನಲ್ಲೇ ಟಿ-20 ಸರಣಿಯನ್ನು ಕಳೆದುಕೊಂಡಿದ್ದ ಭಾರತ ಕನಿಷ್ಠ ಏಕದಿನದಲ್ಲಾದರು ಗೆಲ್ಲಬೇಕೆಂದು ಪಣತೊಟ್ಟಿದೆ. ಹೀಗಾಗಿ ಮಾರ್ಚ್​ 13 ರಂದು ನಡೆಯಲಿರುವ ಐದನೇ ಪಂದ್ಯ ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

 First published: March 11, 2019, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading