ಬೆಚ್ಚಿ ಬಿದ್ದ ಕ್ರಿಕೆಟ್ ಜಗತ್ತು; ಪಾಕಿಸ್ತಾನದ 10 ಆಟಗಾರರಿಗೆ ಕೊರೋನಾ ಪಾಸಿಟಿವ್

Pakistani cricketers: ಆದರೆ ಮೊದಲ ಹಂತದಲ್ಲಿ ಮೂವರು ಆಟಗಾರರಗಿದೆ ಕೊರೋನಾ ಪಾಸಿಟಿವ್​ ಕಾಣಿಸಿಕೊಂಡಿದೆ. ನಂತರದ ಹಂತದ ಪರೀಕ್ಷೆಯಲ್ಲಿ 7 ಆಟಗಾರರಲ್ಲಿ ಕೋವಿಡ್​ ಸೋಂಕು ತಗುಲಿರುವು ದೃಢಪಟ್ಟಿದೆ.

ಪಾಕಿಸ್ತಾನದ ಕ್ರಿಕೆಟಿಗರು

ಪಾಕಿಸ್ತಾನದ ಕ್ರಿಕೆಟಿಗರು

 • Share this:
  ಕೊರೋನಾ ಅವಾಂತರ ಹೆಚ್ಚಾಗುತ್ತಲೇ ಇದೆ. ದಿನೇ ದಿನೇ ಸಾಕಷ್ಟು ಜನರನ್ನು ಕೋವಿಡ್​-19 ಬಲಿ ತೆಗೆದುಕೊಳ್ಳುತ್ತಿದೆ. ಎಲ್ಲಾ ದೇಶಗಳು ಈ ಮಹಾಮಾರಿ ವೈರಸ್​ ಯಾವಾಗ ತೊಲಗುತ್ತೋ ಎಂದು ದೇವರ ಬಳಿ ಪ್ರಾರ್ಥಿಸುತ್ತಿದ್ದಾರೆ. ಇತ್ತ ಕ್ರಿಕೆಟ್​ ಲೋಕಕ್ಕೂ ಕೊರೋನಾ ಕಾಲಿಟ್ಟಿದೆ. ಕ್ರಿಕೆಟ್​ ತಾರೆಯರು ಕೂಡ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಪಾಕಿಸ್ತಾನದಲ್ಲಿ ಒಟ್ಟು 10 ಕ್ರಿಕೆಟಿಗರಿಗೆ ಕೊರೋನಾ ಪಾಸಿಟಿವ್​ ಕಂಡುಬಂದಿದೆ.

  ಇಂಗ್ಲೇಡ್​ ಪ್ರವಾಸಕ್ಕೆ ಸಿದ್ಧಗೊಂಡಿರುವ ಪಾಕಿಸ್ತಾನ ತಂಡ ಕಳೆದ ವಾರ 29 ಆಟಗಾರರ ತಂಡವನ್ನು ಪ್ರಕಟಿಸಿತ್ತು. ಜೂನ್​ 28 ರಂದು ಮ್ಯಾಚೆಂಸ್ಟರ್​ಗೆ ಪ್ರಯಾಣ ಬೆಳೆಸುವ ಈ ಆಟಗಾರರು ಮೊದಲ ಎರಡು ಹಂತಗಳಲ್ಲಿ ಕೊರೋನಾ ವೈರಸ್​ ತಪಾಸಣೆಗೆ ಒಳಪಡಬೇಕಿತ್ತು.

  ಆದರೆ ಮೊದಲ ಹಂತದಲ್ಲಿ ಮೂವರು ಆಟಗಾರರಗಿದೆ ಕೊರೋನಾ ಪಾಸಿಟಿವ್​ ಕಾಣಿಸಿಕೊಂಡಿದೆ. ನಂತರದ ಹಂತದ ಪರೀಕ್ಷೆಯಲ್ಲಿ 7 ಆಟಗಾರರಲ್ಲಿ ಕೋವಿಡ್​ ಸೋಂಕು ತಗುಲಿರುವು ದೃಢಪಟ್ಟಿದೆ.

  ಪಾಕ್​ ಆಟಗಾರರಾದ ಶಾದಬ್ ಖಾನ್, ಹ್ಯಾರಿಸ್ ರೌಫ್, ಹೈದರ್ ಅಲಿ ಮೊದಲ ಹಂತದಲ್ಲಿ ಕೊರೋನಾ ಪಾಸಿಟಿವ್​​ ಕಂಡುಬಂದಿದೆ. ನಂತರ ಮೊಹ್ಮಮದ್​​ ಹಫೀಜ್​​, ಕಾಶಿಫ್​ ಭಟ್ಟಿ, ಮಹಮ್ಮದ್​​ ಹಸ್ನೈನ್​​, ಫಖರ್​ ಜಮಾನ್​​, ಮೊಹ್ಮಮದ್​​​ ರಿಜ್ವಾನ್​​, ಇಮ್ರಾನ್​ ಖಾನ್​​, ಮೊಹಮ್ಮದ್​ ಹಫೀಜ್​​​ ಮತ್ತು ವಾಹೆಬ್​ ರಿಯಾಜ್​​​ಗೆ ಕೋವಿಡ್-19ರ ಪರೀಕ್ಷೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

  ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ಮಂಡಲಿಯ (ಪಿಸಿಬಿ) ಸಿಇಒ ವಾಸಿಮ್ಖಾನ್​ ‘ಇದು ಸರಿಯಾದ ಪರಿಸ್ಥಿತಿಯಲ್ಲ. ಕೊರೋನಾ ಪಾಸಿಟೀವ್ಬಂದಿರುವ 10 ಆಟಗಾರ ಉತ್ತಮ ಆಟಗಾರರು. ಆಟಗಾರರಿಂದ ಉಳಿದ ಆಟಗಾರರಿಗೂ ಸೋಂಕು ಹರಡಬಹುದು. ಸೋಂಕು ತಗುಲಿದ ಆಟಗಾರರಿಗೆ ಅಗತ್ಯದ ವೈದ್ಯಕೀಯ ನೆರವು ನೀಡಲಾಗುವುದು. ಅವರಲ್ಲಿ ನೆಗೆಟಿವ್​​ ಬಂದ ಕೂಡಲೇ ಇಂಗ್ಲೆಂಡ್​​ ಪ್ರವಾಸ ಕೈಗೊಂಡು ತಂಡ ಸೇರಿಕೊಳ್ಳಲ್ಲಿದ್ದಾರೆ. ಅದಕ್ಕೂ ಮುನ್ನ ಅವರನ್ನು ಐಸೊಲೇಷನ್​ನಲ್ಲಿ ಇಡಲಾಗಿದೆ. ತಂಡದ ಆಟಗಾರರು 28ಕ್ಕೆ ಮ್ಯಾಂಚೆಸ್ಟರ್​​ಗೆ ಪ್ರಯಾಣ ಬೆಳೆಸಲಿದ್ದಾರೆಎಂದು ಹೇಳಿದ್ದಾರೆ.

  Sushant Singh Rajput: ಎರಡು ಕೈಗಳನ್ನು ಬಳಸಿ ಬರೆಯುತ್ತಿರುವ ಸುಶಾಂತ್​ ಸಿಂಗ್;​ ವಿಡಿಯೋ ವೈರಲ್​!

  Roberrt Movie: ಈ ವರ್ಷ ‘ರಾಬರ್ಟ್’​ ದರ್ಶನ ಅನುಮಾನ​!; ಯಾಕೆ ಗೊತ್ತಾ?
  First published: