ನಾಳೆ ವಿಶ್ವಕಪ್ ಮಹಾಸಮರಕ್ಕೆ ಚಾಲನೆ; ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್-ಆಫ್ರಿಕಾ ಕಾದಾಟ

ICC Cricket World Cup 2019: ನಾಳೆ ವಿಶ್ವಕಪ್​​ ಮೊದಲ ಪಂದ್ಯ ನಡೆಯಲಿದೆ. ಇಂಗ್ಲೆಂಡ್- ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

news18
Updated:May 29, 2019, 11:10 PM IST
ನಾಳೆ ವಿಶ್ವಕಪ್ ಮಹಾಸಮರಕ್ಕೆ ಚಾಲನೆ; ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್-ಆಫ್ರಿಕಾ ಕಾದಾಟ
ವಿಶ್ವಕಪ್ 2019
  • News18
  • Last Updated: May 29, 2019, 11:10 PM IST
  • Share this:
ನಾಳೆ ವಿಶ್ವಕಪ್ ಮಹಾಸಮರಕ್ಕೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲೆಸೆಯುತ್ತಿದೆ.

ನೂರಾರು ಕೋಟಿ ಅಭಿಮಾನಿಗಳ ನಿರೀಕ್ಷೆಯನ್ನ ಹೊತ್ತಿರುವ ಟೀಮ್ ಇಂಡಿಯಾ,  ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಒಟ್ಟು 46 ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಮಹಾಯುದ್ಧದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದ ಸಮಯ ಹತ್ತಿರವಾಗಿದೆ. ಅದರಲ್ಲೂ ಟೀಮ್ ಇಂಡಿಯಾ ಅಭಿಮಾನಿಗಳಂತೂ ಟೀಮ್ ಇಂಡಿಯಾದ ಮೊದಲ ಪಂದ್ಯವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

28 ವರ್ಷಗಳ ಬಳಿಕ ಮುಂಬೈನ ವಾಂಖೆಡೆ ಮೈದಾನದಲ್ಲಿ ಇತಿಹಾಸ ಸೃಷ್ಟಿಸಿದ್ದ ಧೋನಿ ನಾಯಕತ್ವದ ಭಾರತ,  2011ರಲ್ಲಿ ವಿಶ್ವಕಪ್ ಗೆದ್ದಿದ್ದನ್ನ ನಾವು ಮರೆಯೋ ಹಾಗಿಲ್ಲ. ಆದರೆ ಕಳೆದ 2015ರ ವಿಶ್ವಕಪ್​​ನಲ್ಲಿ ಭಾರತ ಸೆಮಿಫೈನಲ್​​ನಲ್ಲಿ ನಿರಾಸೆ ಅನುಭವಿಸಿ ವಿಶ್ವಕಪ್​​ ಅನ್ನು ಕಾಂಗರೂಗಳಿಗೆ ಬಿಟ್ಟುಕೊಟ್ಟಿತು. ಇದೀಗ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಪೈಪೋಟಿ ನೀಡಲು ಸಜ್ಜಾಗಿರುವ ಟೀಮ್ ಇಂಡಿಯಾ,  ಯುವ ಆಟಗಾರರು-ಅನುಭವಿ ಪ್ಲೇಯರ್ಸ್​ಗಳ ಸಮ್ಮಿಶ್ರಣದೊಂದಿಗೆ ವಿಶ್ವಕಪ್​​ನಲ್ಲಿ ಆಡಲು ಸಿದ್ಧಗೊಂಡಿದೆ.

ನಾಳೆ ವಿಶ್ವಕಪ್​​ ಮೊದಲ ಪಂದ್ಯ ನಡೆಯಲಿದೆ. ಇಂಗ್ಲೆಂಡ್- ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಆದರೆ ಭಾರತದ ಅಭಿಯಾನ ಆರಂಭವಾಗೋದು ಜೂನ್ 5 ರಂದು. ಹರಿಣಗಳ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡುತ್ತಿರೋ ಟೀಮ್ ಇಂಡಿಯಾ ಜೋಶ್​​​​​​​ನಲ್ಲಿ ಕಣಕ್ಕಿಳಿಯಲಿದೆ. ಒಟ್ಟು 9 ಪಂದ್ಯಗಳನ್ನಾಡುವ ಭಾರತದ ವೇಳಾಪಟ್ಟಿ ಇಂತಿವೆ.

ಇದನ್ನೂ ಓದಿ: ಜೀವಕ್ಕಿಂತ ಗೆಳೆತನ ದೊಡ್ಡದು ಎಂದು ಸಾಬೀತು ಮಾಡಿದ ನಟ ಅಂಬರೀಶ್​: ದೊಡ್ಡಣ್ಣ

ಟೀಮ್ ಇಂಡಿಯಾ ವಿಶ್ವಕಪ್ ಸಮರ
Loading...

ಜೂನ್  5: ಭಾರತ - ದಕ್ಷಿಣ ಆಫ್ರಿಕಾ

ಜೂನ್  9: ಭಾರತ - ಆಸ್ಟ್ರೇಲಿಯಾ

ಜೂನ್ 13: ಭಾರತ- ನ್ಯೂಜಿಲೆಂಡ್

ಜೂನ್ 16: ಭಾರತ- ಪಾಕಿಸ್ತಾನ

ಜೂನ್ 22: ಭಾರತ- ಅಫ್ಘಾನಿಸ್ಥಾನ

ಜೂನ್ 27: ಭಾರತ - ವೆಸ್ಟ್ ಇಂಡೀಸ್

ಜೂನ್ 30: ಭಾರತ- ಇಂಗ್ಲೆಂಡ್

ಜುಲೈ 2: ಭಾರತ- ಬಾಂಗ್ಲಾ

ಜುಲೈ 6: ಭಾರತ - ಶ್ರೀಲಂಕಾ

ಭಾರತ ಈ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಜೂನ್ 5ರಂದು ಮೊದಲ ಪಂದ್ಯವನ್ನಾಡುತ್ತಿದ್ದು, ಜೂನ್ 9ರಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸಲಿದೆ. ಜೂನ್ 13ರಂದು ನ್ಯೂಜಿಲೆಂಡ್ ಸವಾಲು ಸ್ವೀಕರಿಸಲಿದೆ. ಇನ್ನು ಬಹುನಿರೀಕ್ಷಿತ ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕಿಸ್ತಾನ ಪಂದ್ಯ ಜೂನ್ 16 ರಂದು ಮ್ಯಾಂಚೆಸ್ಟರ್​​ನಲ್ಲಿ ನಡೆಯಲಿದೆ. ಇನ್ನುಳಿದಂತೆ ನಂತರದಲ್ಲಿ ಅಫ್ಘಾನಿಸ್ತಾನ, ವೆಸ್ಟ್ಇಂಡೀಸ್, ಇಂಗ್ಲೆಂಡ್ , ಬಾಂಗ್ಲಾ ಹಾಗೂ ಶ್ರೀಲಂಕಾ ವಿರುದ್ಧ ಭಾರತ ಮುಖಾಮುಖಿಯಾಗಲಿದೆ.

ಇದನ್ನೂ ಓದಿ: ಕೋಲಾರ ಸಂಸದ ಎಸ್ ಮುನಿಸ್ವಾಮಿಗೆ ಕೆ.ಚಂದ್ರಾರೆಡ್ಡಿ ಬಹಿರಂಗ ಸವಾಲು

ಒಟ್ಟು 46 ದಿನಗಳು ನಡೆಯುವ ಐಸಿಸಿಯ ಬೃಹತ್ ಟೂರ್ನಮೆಂಟ್ ಜುಲೈ 14 ರವರೆಗೂ ನಡೆಯಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಓವಲ್‌, ಎಡ್ಜ್​​ಬಸ್ಟನ್‌, ಟ್ರೆಂಟ್‌ ಬ್ರಿಡ್ಜ್‌, ಹೆಡಿಂಗ್ಲೆ, ಕಾರ್ಡಿಫ್‌, ಸೌತಾಂಪ್ಟನ್‌, ಬ್ರಿಸ್ಟಲ್‌, ಓಲ್ಡ್‌ ಟ್ರಾಫೋರ್ಡ್‌, ಟೌನ್‌ಟನ್ ಹೀಗೆ 11 ಪ್ರಮುಖ ಮೈದಾನಗಳು ವಿಶ್ವಕಪ್​​​ ಆತಿಥ್ಯ ವಹಿಸಲಿವೆ. ಇನ್ನು ಲೀಗ್ ಹಂತದಲ್ಲಿ ಪ್ರತಿ ತಂಡಗಳು 9 ಪಂದ್ಯಗಳನ್ನಾಡಲಿದ್ದು,  ಎಲ್ಲಾ ತಂಡವು ಒಮ್ಮೆಯಾದ್ರು ಮುಖಾಮುಖಿಯಾಗುತ್ತಿರುವುದು ಈ ಬಾರಿಯ ವಿಶ್ವಕಪ್​​​ ವಿಶೇಷ.

ಹೀಗೆ ಪ್ರತಿ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ 9 ಪಂದ್ಯಗಳನ್ನು ಆಡಿದ ಬಳಿಕ ಅಗ್ರಸ್ಥಾನಗಳಿಸಿದ 4 ತಂಡಗಳು ಸೆಮಿಫೈನಲ್​​​ಗೆ ಪ್ರವೇಶಿಸಲಿದೆ. ಜುಲೈ 14 ರಂದು ಲಾರ್ಡ್ಸ್​​​ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
First published:May 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...