Video: ವಾವ್ಹ್...ಕ್ಯಾಚ್ ಆಫ್ ದಿ ಮ್ಯಾಚ್: ಬೌಂಡರಿ ಲೈನ್​ನಲ್ಲಿ ಅದ್ಭುತ ಫೀಲ್ಡಿಂಗ್

Tom Cooper stunning catch: ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಸ್ಟ್ರೈಕರ್ಸ್‌ ತಂಡ, ಮೊದಲು ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಅಲ್ಲದೆ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 173 ರನ್‌ಗಳ ಬೃಹತ್ ಸವಾಲನ್ನು ಮೆಲ್ಬೋರ್ನ್‌ ರೆನೇಗೇಡ್ಸ್‌ ತಂಡದ ಮುಂದಿಟ್ಟಿತು.

zahir | news18-kannada
Updated:January 13, 2020, 5:55 PM IST
Video: ವಾವ್ಹ್...ಕ್ಯಾಚ್ ಆಫ್ ದಿ ಮ್ಯಾಚ್: ಬೌಂಡರಿ ಲೈನ್​ನಲ್ಲಿ ಅದ್ಭುತ ಫೀಲ್ಡಿಂಗ್
BBL
  • Share this:
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‌ ಬ್ಯಾಷ್‌ ಲೀಗ್‌ ಟಿ20 ಟೂರ್ನಿ ಅಧ್ಬುತ ಫೀಲ್ಡಿಂಗ್ ಸಾಕ್ಷಿಯಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಹೋಬಾರ್ಟ್​ ಹುರ್ರಿಕೇನ್ಸ್ ತಂಡದ ಆಟಗಾರ ರೇನ್​ಶಾ ಬೌಂಡರಿ ದಾಟಿ ಅದ್ಭುತ ಫೀಲ್ಡಿಂಗ್ ಮಾಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದರು.


ಇದೀಗ ಬೌಂಡರಿ ಲೈನ್​ನಲ್ಲೇ ಅದ್ಭುತ ಫೀಲ್ಡಿಂಗ್ ಮೂಲಕ ಟಾಮ್‌ ಕೂಪರ್‌ ಸಹ ಕಮಾಲ್ ಮಾಡಿದ್ದಾರೆ. ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಸ್ಟ್ರೈಕರ್ಸ್‌ ತಂಡ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಅಲ್ಲದೆ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 173 ರನ್‌ಗಳ ಬೃಹತ್ ಸವಾಲನ್ನು ಮೆಲ್ಬೋರ್ನ್‌ ರೆನೇಗೇಡ್ಸ್‌ ತಂಡದ ಮುಂದಿಟ್ಟಿತು.

ಆದರೆ ಈ ಬೃಹತ್ ಗುರಿ ಬೆನ್ನತ್ತಿದ ಆರೋನ್ ಫಿಂಚ್ ನಾಯಕತ್ವದ ರೆನೆಗೇಡ್ಸ್‌ ತಂಡ ಕೇವಲ 110 ರನ್‌ಗಳಿಗೆ ಆಲ್‌ಔಟ್‌ ಆಗುವ ಮೂಲಕ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಸತತ 9 ಪಂದ್ಯಗಳ ಸೋತು ಹೀನಾಯ ದಾಖಲೆ ಬರೆಯಿತು.

ಆದರೆ, ಇದಕ್ಕೂ ಮುನ್ನ ಮೆಲ್ಬೋರ್ನ್‌ ರೆನೇಗೇಡ್ಸ್‌ ತಂಡದ ಆಟಗಾರ ಟಾಮ್‌ ಕೂಪರ್‌ ಮಾಡಿದ ಫೀಲ್ಡಿಂಗ್​ವೊಂದು ಪೇಕ್ಷಕರ ಹುಬ್ಬೇರುವಂತೆ ಮಾಡಿತು. ಬೌಲರ್‌ ಜಾಕ್‌ ವೈಲ್ಡರ್ಮತ್‌ ಎಸೆತವನ್ನು ಫಿಲ್‌ ಸಾಲ್ಟ್‌ ಸಿಕ್ಸರ್‌ ಬಾರಿಸಲು ಯತ್ನಿಸಿದ್ದರು. ಇನ್ನೇನು ಚೆಂಡು ಡೀಪ್‌ ಮಿಡ್‌ವಿಕೆಟ್‌ ಭಾಗದಲ್ಲಿ ಬೌಂಡರಿ ದಾಟಲಿದೆ ಅನ್ನುವಾಗಲೇ ಟಾಪ್ ಕೂಪರ್ ಫಿನಿಕ್ಸ್​ನಂತೆ ಬಾಲನ್ನು ಬಂಧಿಸಿದ್ದರು.



ಆದರೆ ಜಿಗಿದು ಚೆಂಡನ್ನು ಹಿಡಿದ ಟಾಮ್ ನಿಯಂತ್ರಣ ತಪ್ಪಿದ್ದರು. ಅಷ್ಟೇ ಅಲ್ಲದೆ ಬೌಂಡರಿ ಗಡಿ ದಾಟುತ್ತಿದ್ದಂತೆ ಚೆಂಡನ್ನು ಮತ್ತೆ ಮೇಲೆಕ್ಕೆಸೆದು, ಪುನಃ ಮೈದಾನಕ್ಕೆ ಬಂದು ಕ್ಯಾಚ್ ಹಿಡಿದು ಗಮನ ಸೆಳೆದರು. ಈ ಅದ್ಭುತ ಕ್ಯಾಚ್​ನ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.


ಇದನ್ನೂ ಓದಿ: Bigg Boss Kannada 7: ಹುಡುಗಿಯರ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ನೀಡಿದ ಹೇಳಿಕೆ ಕಿಚ್ಚನನ್ನೇ ಬೆಚ್ಚಿ ಬೀಳಿಸಿತು..!
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ