Tokyo Olympics: 11 ಸಾವಿರ ಕ್ರೀಡಾಪಟುಗಳಿಗೆ ನೀಡಲಾಗುತ್ತೆ 1,60 ಲಕ್ಷ ಕಾಂಡೋಮ್!

ಜುಲೈ 23ರಿಂದ ಒಲಂಪಿಕ್ಸ್​ ಪ್ರಾರಂಭವಾಗಲಿದೆ. ಪ್ರತಿ ವರ್ಷದಂತೆ ಸ್ಪರ್ಧಾಳುಗಳಿಗೆ ಉಚಿತ ಕಾಂಡೋಮ್ ಅನ್ನು ಒಲಂಪಿಕ್ಸ್​ನಲ್ಲಿ ​ನೀಡಲಾಗುತ್ತದೆ. ಈ ವರ್ಷ ಕೂಡ ಭಾಗವಗಿಸುವ ಸ್ಫರ್ಧಾಳುಗಳಿಗೆ ಲಕ್ಷಾಂತರ ಕಾಂಡೋಮ್​ ನೀಡಲು ಸಂಘಟಕರು ಮುಂದಾಗಿದ್ದಾರೆ.

Tokyo Olympics

Tokyo Olympics

  • News18
  • Last Updated :
  • Share this:
    ಕೊರೊನಾ ಎರಡನೇ ಅಲೆಯ ನಡುವೆ ಜಪಾನ್​ನ ಟೋಕಿಯೊದಲ್ಲಿ ಈ ವರ್ಷದ ಒಲಂಪಿಕ್ಸ್​ ನಡೆಯಲಿದೆ. ಮಾಹಾಮಾರಿ ಅವಾಂತರದ ನಡುವೆ ಕೆಲವು ನೀತಿ ನಿಯಮಗಳ ಅನುಸಾರ ಒಲಂಪಿಕ್ಸ್​ ನಡೆಯಲಿದೆ, ಸ್ಪರ್ಧಾಳುಗಳಿಗೆ ಅನೇಕ ಕಟ್ಟುಪಾಡನ್ನು ಹಾಕಲಾಗಿದೆ.

    ಜುಲೈ 23ರಿಂದ ಒಲಂಪಿಕ್ಸ್​ ಪ್ರಾರಂಭವಾಗಲಿದೆ. ಪ್ರತಿ ವರ್ಷದಂತೆ ಸ್ಪರ್ಧಾಳುಗಳಿಗೆ ಉಚಿತ ಕಾಂಡೋಮ್ ಅನ್ನು ಒಲಂಪಿಕ್ಸ್​ನಲ್ಲಿ ​ನೀಡಲಾಗುತ್ತದೆ. ಈ ವರ್ಷ ಕೂಡ ಭಾಗವಗಿಸುವ ಸ್ಫರ್ಧಾಳುಗಳಿಗೆ ಲಕ್ಷಾಂತರ ಕಾಂಡೋಮ್​ ನೀಡಲು ಸಂಘಟಕರು ಮುಂದಾಗಿದ್ದಾರೆ.

    ವಿಶ್ವದಾದ್ಯಂತ 11 ಸಾವಿರ ಕ್ರೀಡಾಪಟುಗಳಿಗೆ ಭಾಗವಹಿಸಲಿದ್ದಾರೆ. ಅದರಂತೆ ಒಬ್ಬ ಸ್ಪರ್ಧಿಗೆ ತಲಾ 14 ಕಾಂಡೋಮ್ ಸಿಗಲಿದೆ. ಸುಮಾರು 1,60 ಲಕ್ಷ ಕಾಂಡೋಮ್ ಅನ್ನು ಒಲಿಪಿಂಕ್ಸ್​ ಸ್ಪರ್ಧಿಗಳಿಗೆ ಉಚಿತವಾಗಿ ವಿತರಿಸಲಿದ್ದಾರೆ.

    ಏಡ್ಸ್​ ತಡೆಗಟ್ಟುವ ನಿಟ್ಟಿನಲ್ಲಿ ಕಾಂಡೋಮ್​ ಅನ್ನು ಒಲಿಂಪಿಕ್ಸ್​ನಲ್ಲಿ ನೀಡಲಾಗುತ್ತದೆ. ಆದರೆ ಯಾರೂ ಈ ಕಾಂಡೋಮ್​ ಅನ್ನು ಅಲ್ಲಿ ಬಳಸುವಂತಿಲ್ಲ. ಸ್ಪರ್ಧಾಳುಗಳು ತಮ್ಮ ದೇಶಕ್ಕೆ ಹಿಂತಿರುಗಿದ ನಂತರ ಬಳಸುವಂತೆ ಸೂಚಿಸಲಾಗಿದೆ.

    1988ರಲ್ಲಿ ಒಲಂಪಿಕ್ಸ್​ನಲ್ಲಿ ಕಾಂಡೋಮ್​ ವಿತರಣೆ ಮಾಡಲಾಯಿತು. ರಿಯೋ ಒಲಂಪಿಕ್ಸ್​ನಲ್ಲಿ 4.5 ಲಕ್ಷ ಕಾಂಡೋಮ್​ ವಿತರಣೆ ಮಾಡಲಾಯಿತು. ಎಡ್ಸ್​ ತಡೆಗ್ಟುವ ನಿಟ್ಟಿನಲ್ಲಿ ಈ ಕಾರ್ಯ ಪ್ರಾರಂಭವಾಯಿತು.
    First published: