Tokyo Olympics 2021: ಸೆಕ್ಸ್​ ಮಾಡಿದರೆ ಮಂಚ ಮುರಿಯುತ್ತೆ! ಕ್ರೀಡಾ ಸ್ಪರ್ಧಿಗಳಿಗೆಂದೇ ತಯಾರಿಸಲಾಗಿದೆ ಈ ಕಾರ್ಡ್‌ಬೋರ್ಡ್ ಬೆಡ್‌!

Anti-Sex Bed: ಕ್ರೀಡಾಪಟುಗಳು ಲೈಂಗಿಕಾಸಕ್ತಿ ತೋರದೆ ಕೇವಲ ಕ್ರೀಡಾಸ್ಪರ್ಧೆಗಳತ್ತ ಗಮನಹರಿಸಲಿ ಎಂಬ ಉದ್ದೇಶದಿಂದ ಈ ಆ್ಯಂಟಿ ಸೆಕ್ಸ್ ಬೆಡ್‌ಗಳನ್ನು ನೀಡಲಾಗಿದ್ದು, ಇದನ್ನು ಕಾರ್ಡ್‌ಬೋರ್ಡ್‌ನಿಂದ ತಯಾರಿಸಲಾಗಿದೆ ಹಾಗೂ ಒಬ್ಬರ ತೂಕವನ್ನು ಹೊರುವ ಸಾಮರ್ಥ್ಯವನ್ನು ಈ ಬೆಡ್ ಹೊಂದಿದೆ.

Tokyo Olympics 2021

Tokyo Olympics 2021

  • Share this:

ಟೋಕಿಯೊ ಒಲಿಂಪಿಕ್‌ನಲ್ಲಿ ಆ್ಯಂಟಿ ಸೆಕ್ಸ್ ಬೆಡ್‌ಗಳನ್ನು ಕಾರ್ಡ್‌ಬೋರ್ಡ್‌ನಿಂದ ಮಾಡಲಾಗಿದ್ದು, ಇದರಲ್ಲಿ ಒಬ್ಬರಿಗೆ ಮಾತ್ರ ಮಲಗಲು ಸಾಧ್ಯವಿದೆ ಹಾಗೂ ಒಬ್ಬ ವ್ಯಕ್ತಿಯ ತೂಕವನ್ನು ಮಾತ್ರ ಹೊರುವ ಸಾಮರ್ಥ್ಯ ಈ ಬೆಡ್‌ಗಳಿಗಿವೆ.


ಬಹುನಿರೀಕ್ಷಿತ ಟೋಕಿಯೊ ಒಲಿಂಪಿಕ್ಸ್ ಜುಲೈ 23 ರಂದು ಆರಂಭವಾಗಲಿದೆ. ಹಿಂದೆ ಇದ್ದ ಸೌಕರ್ಯಗಳನ್ನು ಸೌಲಭ್ಯಗಳನ್ನು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಡೆಯಲು ಸಾಧ್ಯವಿಲ್ಲ ಅದರಲ್ಲೂ ಆ್ಯಂಟಿ ಸೆಕ್ಸ್ ಬೆಡ್‌ಗಳನ್ನು ಕ್ರೀಡಾಳುಗಳಿಗೆ ನೀಡಿರುವುದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ. ಕ್ರೀಡಾಪಟುಗಳು ಲೈಂಗಿಕಾಸಕ್ತಿ ತೋರದೆ ಕೇವಲ ಕ್ರೀಡಾಸ್ಪರ್ಧೆಗಳತ್ತ ಗಮನಹರಿಸಲಿ ಎಂಬ ಉದ್ದೇಶದಿಂದ ಈ ಆ್ಯಂಟಿ ಸೆಕ್ಸ್ ಬೆಡ್‌ಗಳನ್ನು ನೀಡಲಾಗಿದ್ದು, ಇದನ್ನು ಕಾರ್ಡ್‌ಬೋರ್ಡ್‌ನಿಂದ ತಯಾರಿಸಲಾಗಿದೆ ಹಾಗೂ ಒಬ್ಬರ ತೂಕವನ್ನು ಹೊರುವ ಸಾಮರ್ಥ್ಯವನ್ನು ಈ ಬೆಡ್ ಹೊಂದಿದೆ. ಬೇರೊಬ್ಬರು ಸೇರಿದಂತೆ ಅಥವಾ ಯಾವುದೇ ಹಠಾತ್ ಚಲನೆಗಳುಂಟಾದರೆ ಈ ಬೆಡ್ ಮುರಿಯುವ ಸಾಧ್ಯತೆ ಇದೆ. ಹಾಗಾಗಿ ಈ ಬಾರಿಯ ಒಲಿಂಪಿಕ್‌ನಲ್ಲಿ ಕ್ರೀಡಾಳುಗಳಿಗೆ ಪ್ರಣಯಿಸಲು ಕಷ್ಟವಾಗಲಿದೆ.


ಕೊರೋನಾ ನಿಯಮಗಳ ಉಲ್ಲಂಘನೆ ಅಥವಾ ದೈಹಿಕ ಅಂತರವನ್ನು ಅನುಸರಿಸದೇ ಇದ್ದರೆ ಅಂತಹ ಕ್ರೀಡಾಳುಗಳನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗುತ್ತದೆ ಅಥವಾ ಹೊರಹಾಕಲಾಗುವುದು ಎಂದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಎಚ್ಚರಿಸಿದೆ. ಒಲಿಂಪಿಕ್ ಮಂಡಳಿಯು ಅಂತರವನ್ನು ಕಾಯ್ದುಕೊಳ್ಳಲು ಹಾಗೂ ಲೈಂಗಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಸಲುವಾಗಿ ಒದಗಿಸಿರುವ ಕಾರ್ಡ್‌ಬೋರ್ಡ್ ಬೆಡ್‌ಗಳು ಈಗ ಚರ್ಚೆಗೆ ಗ್ರಾಸವಾಗಿದೆ.


ಅಮೆರಿಕಾದ ಓಟಗಾರ ಪೌಲ್ ಕೆಲಿಮೋ ತನಗೆ ನೀಡಿರುವ ಕಾರ್ಡ್‌ಬೋರ್ಡ್ ಬೆಡ್‌ಗಳ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು ಒಲಿಂಪಿಕ್ ಮಂಡಳಿಯ ಈ ತೀರ್ಮಾನ ಶ್ಲಾಘನೀಯ ಆದರೆ ಇದರಲ್ಲಿ ನೆಮ್ಮದಿಯಾಗಿ ನಿದ್ದೆಮಾಡಲು ಸಾಧ್ಯವಿಲ್ಲ ನೆಲದಲ್ಲೇ ಮಲಗುವುದು ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಜಿಮ್ನಾಸ್ಟ್ ಮೆಕಾಲಾಗ್ರಾಮ್ ಬೆಡ್ ಮೇಲೆ ಹಾರುತ್ತಿರುವ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದು ಇದು ಸಾಕಷ್ಟು ಗಟ್ಟಿಮುಟ್ಟಾಗಿದೆ ಎಂದು ಹೇಳಿದ್ದಾರೆ.


ಈ ಸುದ್ದಿ ಈಗ ಟ್ವಿಟರ್‌ನಲ್ಲಿ ಇನ್ನಿತರ ಸಾಮಾಜಿಕ ತಾಣದಲ್ಲಿ ಬಿಸಿಬಿಸಿ ಚರ್ಚೆಯಾಗಿ ಮಾರ್ಪಟ್ಟಿದ್ದು ಕೆಲವರು ಒಲಿಂಪಿಕ್ ಮಂಡಳಿಯ ತೀರ್ಮಾನವನ್ನು ಹೊಗಳಿದರೆ ಇನ್ನು ಕೆಲವರು ಹಾಸ್ಯದ ಮಳೆ ಸುರಿಸುತ್ತಿದ್ದಾರೆ. ಜಾನ್ ಅರ್‌ವೊಸಿಸ್ ಕಾರ್ಡ್‌ಬೋರ್ಡ್ ಬೆಡ್‌ಗಳ ಅಳವಡಿಕೆಯ ತೀರ್ಮಾನವನ್ನು ಶ್ಲಾಫಿಸಿದ್ದು ಇದೊಂದು ಕ್ರೇಜಿ ನಿರ್ಧಾರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.


ಕ್ರೀಡಾಳುಗಳಿಗೆ ಉತ್ತಮ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಈ ಕಾರ್ಡ್‌ಬೋರ್ಡ್ ಬೆಡ್ ಅನುಕೂಲಕರವಾಗಿಲ್ಲವೆಂದು ಇನ್ನೊಬ್ಬ ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದು ಇದು ಹೆಚ್ಚು ವಿಶಾಲವಾಗಿಲ್ಲವೆಂದು ತಿಳಿಸಿದ್ದಾರೆ. ಜೇಮ್ಸ್‌ ಲಾಂಗ್‌ಮ್ಯಾನ್ ಟ್ವೀಟ್ ಮಾಡಿದ್ದು ಟೋಕಿಯೊ 2020 ಸುರಕ್ಷತೆ ಹಾಗೂ ಆರೋಗ್ಯಕ್ಕೆ ಮಹತ್ವವವನ್ನು ನೀಡಿದೆ ಎಂದು ತಿಳಿಸಿದ್ದಾರೆ.


CNBC ಹೇಳಿರುವಂತೆ ಟೋಕಿಯೊ 2020 ಗೇಮ್ಸ್‌ನಲ್ಲಿ ಹಾಸಿಗೆಗಳನ್ನು ಸಂಪೂರ್ಣವಾಗಿ ಕಾರ್ಡ್‌ಬೋರ್ಡ್‌ನಿಂದ ತಯಾರಿಸಲಾಗಿದೆ. ಈ ಹಾಸಿಗೆಗಳು ಟೋಕಿಯೋ 2020 ಕ್ರೀಡಾಕೂಟದ ಸುಸ್ಥಿರತೆಯ ಪರಿಕಲ್ಪನೆಯೊಂದಿಗೆ ಹೊಂದಿಕೆಯಾಗುತ್ತವೆ ಮತ್ತು ಈವೆಂಟ್ ನಂತರ ಮರುಬಳಕೆ ಮಾಡಲಾಗುತ್ತದೆ. ಈ ಹಾಸಿಗೆಯನ್ನು ಏರ್‌ವೇವ್ ಸಂಸ್ಥೆ ತಯಾರಿಸಿದ್ದು ಇದು 200 ಕಿಲೊ ತೂಕವನ್ನು ಹೊರುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಹಾಗೂ ಕಠಿಣ ಪರೀಕ್ಷೆಗಳಿಗೆ ಹಾಸಿಗೆಯನ್ನು ಒಳಪಡಿಸಲಾಗಿದೆ ಎಂದು ತಿಳಿಸಿದೆ.

First published: