ಏಕದಿನ ಪಂದ್ಯಕ್ಕೆ ಧೋನಿ ಇಂದೇ ಘೋಷಿಸಲಿದ್ದಾರೆ ನಿವೃತ್ತಿ?; ಹೌದೆನ್ನುತ್ತಿವೆ ಮೂಲಗಳು

MS Dhoni Retirement: 2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ ಧೋನಿ, ವಿಶ್ವಕಪ್​ನೊಂದಿಗೆ ಕ್ರಿಕೆಟ್​ ವಿದಾಯ ಹೇಳಲು ಇಚ್ಛಿಸಿದ್ದಾರೆ. ಈಗಾಗಲೇ ಸೋಲಿನ ನೋವಿನಲ್ಲಿರುವ ಭಾರತಕ್ಕೆ ಧೋನಿ ವಿದಾಯ ಮತ್ತೊಂದು ಆಘಾತ ಉಂಟು ಮಾಡಲಿದೆ.

Rajesh Duggumane | news18
Updated:July 11, 2019, 11:03 AM IST
ಏಕದಿನ ಪಂದ್ಯಕ್ಕೆ ಧೋನಿ ಇಂದೇ ಘೋಷಿಸಲಿದ್ದಾರೆ ನಿವೃತ್ತಿ?; ಹೌದೆನ್ನುತ್ತಿವೆ ಮೂಲಗಳು
ಎಂಸ್​ ಧೋನಿ
  • News18
  • Last Updated: July 11, 2019, 11:03 AM IST
  • Share this:
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೊನಿಗೆ ಈಗ ವಯಸ್ಸು 38. ಅವರು ಈಗ ಮೊದಲಿನ ಚಾರ್ಮ್​ ಹಾಗೂ ಫಾರ್ಮ್​ ಹೊಂದಿಲ್ಲ ಎಂದು ಟೀಕಿಗೊಳಗಾಗುತ್ತಿದ್ದಾರೆ. ಇದೇ ಕಾರಣಕ್ಕೆ ಧೋನಿಗೆ ಏಕದಿನ ಪಂದ್ಯಕ್ಕೆ ವಿದಾಯ ಹೇಳುತ್ತಿದ್ದಾರಂತೆ. ಅಚ್ಚರಿ ಎಂದರೆ ಎಂಎಸ್​ ಧೋನಿ ಇಂದೇ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮಹೇಂದ್ರ ಸಿಂಗ್ ಧೋನಿ ಈ ಹಿಂದೆ ಯಾರೂ ಊಹಿಸದ ರೀತಿಯಲ್ಲಿ ಮೂರು ಮಾದರಿಯ ಕ್ರಿಕೆಟ್​ನ ನಾಯಕತ್ವಕ್ಕೆ ಏಕಾಏಕಿ ದಿಢೀರನೇ ನಿವೃತ್ತಿ ಘೋಷಿಸಿದ್ದರು. ಧೋನಿ ನಿವೃತ್ತಿಯ ನಂತರ ಈ ಸ್ಥಾನ ವಿರಾಟ್​ ಕೊಹ್ಲಿಗೆ ಅನಾಯಾಸವಾಗಿ ಒಲಿದುಬಂದಿತ್ತು. ಧೋನಿ ನಾಯಕತ್ವಕ್ಕೆ ವಿದಾಯ ನೀಡಿದಂತೆ ಟೆಸ್ಟ್​ ಕ್ರಿಕೆಟ್​ಗೂ ದಿಢೀರೆಂದು ವಿದಾಯ ಘೋಷಿಸಿದ್ದರು.

ಕೊಹ್ಲಿಗೆ ನಾಯಕ ಪಟ್ಟ ದೊರೆತಿದ್ದರೂ ಕಳೆದ ಮೂರು ವರ್ಷದಿಂದ ಅವರ ಬೆನ್ನಿಗೆ ನಿಂತು ನಾಯಕತ್ವದ ಒಂದೊಂದೆ ಪಟ್ಟುಗಳನ್ನು ತಂತ್ರಗಳನ್ನು ಹೇಳಿಕೊಟ್ಟು ಬೆಳೆಸಿದ್ದು, ಕೊಹ್ಲಿಯ ಈಗಿನ ಎಲ್ಲಾ ಸಾಧನೆಗಳ ಹಿಂದೆ ಇರುವುದು ಇದೇ ಮಹೇಂದ್ರ ಸಿಂಗ್ ಧೋನಿ ಎನ್ನುವ ಶಕ್ತಿ ಎಂಬುದು ಇಂದು ಗುಟ್ಟಾಗೇನು ಉಳಿದಿಲ್ಲ. ಹಾಗಾಗಿ ಈ ಬಾರಿಯ ವಿಶ್ವಕಪ್​ ಗೆಲ್ಲುವ ಮೂಲಕ ಧೋನಿಗೆ ವಿದಾಯ ಹೇಳಬೇಕು ಎನ್ನುವ ಆಲೋಚನೆಯಲ್ಲಿತ್ತು ಕೊಹ್ಲಿ ಪಡೆ.

ಇದನ್ನೂ ಓದಿ: 2011ರ ವಿಶ್ವಕಪ್​ ಸಚಿನ್​ಗಾಗಿ, 2019 ಎಂಎಸ್​ಡಿಗಾಗಿ!; ಗ್ರೇಟ್​ ಫಿನಿಶರ್ ವಿದಾಯಕ್ಕೆ​ ಕೊಹ್ಲಿಯಿಂದ ಮಾಸ್ಟರ್​ ಪ್ಲಾನ್?

ಆದರೆ, ಸೆಮಿ ಫೈನಲ್​ನಲ್ಲಿ ಕೊಹ್ಲಿ ಪಡೆ ಸೋತಿದೆ. ಈ ಮೂಲಕ ಫೈನಲ್​ ಏರಿವ ಕನಸು ನುಚ್ಚು ನೂರಾಗಿದೆ. ಈ ಮಧ್ಯೆ ಧೋನಿ ಕಳಪೆ ಆಟವಾಡಿದ್ದಾರೆ ಎನ್ನುವ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟ್​ ಮಾಡಿದ್ದಕ್ಕೆ ಧೋನಿ ಟೀಕೆಗೆ ಒಳಗಾಗಿದ್ದರು. ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರಾದರೂ ರನ್​ಔಟ್​ಗೆ ಬಲಿಯಾಗಿದ್ದರು. ಇದು ಧೋನಿಗೆ ಬೇಸರ ಉಂಟುಮಾಡಿದೆ.

ಈ ಮಧ್ಯೆ,   ಧೋನಿಗೆ ಕಳಪೆ ಕೀಪರ್​ ಎನ್ನುವ ಕುಖ್ಯಾತಿಯೂ ಬೆನ್ನಿಗಂಟಿದೆ. ಬ್ಯಾಟಿಂಗ್​ನಲ್ಲಿ ಮಿಂಚುತ್ತಿದ್ದ ಧೋನಿ ಕೀಪಿಂಗ್​ನಲ್ಲೂ ಚಾಕಚಕ್ಯತೆ ಮೆರೆಯುತ್ತಿದ್ದರು. ಅವರು ಕೀಪಿಂಗ್​ಗೆ ನಿಂತಾಗ ಎದುರಾಳಿ ಬ್ಯಾಟ್ಸ್​​ಮನ್​ಗಳು ಸ್ಕ್ರೀಸ್​ ಬಿಟ್ಟು ಮುಂದೆ ತೆರಳಲು ಭಯ ಬೀಳುತ್ತಿದ್ದರು. ಆದರೆ, ಈಗ ಕೀಪಿಂಗ್​ನಲ್ಲಿ ಧೋನಿ ಚಮತ್ಕಾರ  ಮುಂಚಿನಂತೆ ನಡೆಯುತ್ತಿಲ್ಲ. ಅನೇಕ ಕ್ಯಾಚ್​ಗಳನ್ನು ಕೈ ಬಿಟ್ಟು ಅಭಿಮಾನಿಗಳ ಬೇಸರಕ್ಕೆ ಅವರು ಕಾರಣವಾಗಿದ್ದಾರೆ.ಇದನ್ನೂ ಓದಿ: ವಿರಾಟ್​ ಕೊಹ್ಲಿ ಪಡೆಗೆ ಕಡೆಗೂ ಮುಳುವಾಗಿದ್ದು ಈ ಒಂದು ಅಂಶ!

2019ರ ವಿಶ್ವಕಪ್​ನಲ್ಲಿ ಭಾರತ ಆಡಿದ ಪಂದ್ಯಗಳಲ್ಲಿ  ತಲಾ 2 ಕ್ಯಾಚ್​​  ಹಾಗೂ 2 ಸ್ಟಂಪಿಂಗ್​ ಮಾಡುವ ಅವಕಾಶವನ್ನು ಧೋನಿ ಕೈಚೆಲ್ಲಿದ್ದಾರೆ. ಪ್ರಯಾಸದ ಕ್ಯಾಚ್​ಗಳನ್ನು ಹಿಡಿಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವ ಮಾತೂ ಇದೆ. ಈ ದತ್ತಾಂಶಗಳನ್ನು ಪರಿಗಣಿಸಿದರೆ ವಿಶ್ವಕಪ್​ನಲ್ಲಿ ಕಳಪೆ ಕೀಪರ್​ ಸ್ಥಾನದಲ್ಲಿ ಧೋನಿಗೆ ಮೂರನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಇದು ಕೂಡ ಧೋನಿ ನಿವೃತ್ತಿ ಪಡೆಯಲು ಮುಖ್ಯ ಕಾರಣ.

2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ ಧೋನಿ, ವಿಶ್ವಕಪ್​ನೊಂದಿಗೆ ಕ್ರಿಕೆಟ್​ ವಿದಾಯ ಹೇಳಲು ಇಚ್ಛಿಸಿದ್ದಾರೆ. ಈಗಾಗಲೇ ಸೋಲಿನ ನೋವಿನಲ್ಲಿರುವ ಭಾರತದ ಕ್ರೀಡಾಭಿಮಾನಿಗಳಿಗೆ ಧೋನಿ ವಿದಾಯ ಮತ್ತೊಂದು ಆಘಾತ ಉಂಟು ಮಾಡಲಿದೆ.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ