ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಸ್ಪೋಟಕ ಬ್ಯಾಟ್ಸ್ಮನ್ ತಿಲಕರತ್ನೆ ದಿಲ್ಶಾನ್ ತನ್ನ ನೆಚ್ಚಿನ ಬೆಸ್ಟ್ ಇಲೆವೆನ್ ಏಕದಿನ ತಂಡವನ್ನು ಪ್ರಕಟಮಾಡಿದ್ದಾರೆ. ವಿಶೇಷ ಎಂದರೆ ಈ ತಂಡದಲ್ಲಿ ಒಬ್ಬನೇ ಒಬ್ಬ ಇಂಗ್ಲೆಂಡ್ ಕ್ರಿಕೆಟಿಗನಿಲ್ಲ. ಜೊತೆಗೆ ಭಾರತ ಹಾಗೂ ಪಾಕಿಸ್ತಾನ ತಂಡದ ಪೈಕಿ ಕೇವಲ ಒಬ್ಬರಿಗಷ್ಟೆ ದಿಲ್ಶಾನ್ ಸ್ಥಾನ ನೀಡಿದ್ದಾರೆ.
ದಿಲ್ಶಾನ್ ಪ್ರಕಟಿಸಿರುವ ತಂಡ ಅತ್ಯಂತ ಕಠಿಣವಾಗಿದೆ. ಆರಂಭಿಕರಾಗಿ ಸನತ್ ಜಯಸೂರ್ಯ ಹಾಗೂ ಸಚಿನ್ ತೆಂಡೂಲ್ಕರ್ ಕಣಕ್ಕಿಳಿದರೆ, ಮೂರನೇ ಸ್ಥಾನವನ್ನು ಬ್ರಿಯಾನ್ ಲಾರಾ ಅವರಿಗೆ ನೀಡಿದ್ದಾರೆ. ಮಹೇಲಾ ಜಯವರ್ಧನೆ ನಾಲ್ಕನೇ ಸ್ಥಾನದಲ್ಲಿ ಕಣಕ್ಕಿಳಿಯಬೇಕು ಎಂದಿರುವ ಇವರು, ಐದನೇ ಸ್ಥಾನವನ್ನು ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್ ಅವರಿಗೆ ನೀಡಿದ್ದಾರೆ.
ಐಪಿಎಲ್ ಟೂರ್ನಿ ರದ್ದಾದರೆ ಭಾರತೀಯ ಕ್ರಿಕೆಟ್ಗೆ ಆಗುವ ನಷ್ಟ ಅಷ್ಟಿಷ್ಟಲ್ಲ; ಇಲ್ಲಿದೆ ಮಾಹಿತಿ...
ಇನ್ನೂ ಆಲ್ರೌಂಡರ್ ಜವಾಬ್ದಾರಿ ಜ್ಯಾಕ್ ಕ್ಯಾಲೀಸ್ ನಿರ್ವಹಿಸಬೇಕು ಎಂದಿರುವ ದಿಲ್ಶಾನ್, ಎಬಿ ಡಿವಿಲಿಯರ್ಸ್ ಹಾಗೂ ಕರ್ಟ್ನಿ ವಾಲ್ಷ್ ಅವರುಕೂಡ ತಂಡದಲ್ಲಿದ್ದಾರೆ. ಪಾಕಿಸ್ತಾನದ ಒಬ್ಬ ಆಟಗಾರ ವಾಸೀಂ ಅಕ್ರಂ ಅವರನ್ನು ಆರಿಸಿಕೊಂಡಿದ್ದಾರೆ. ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹಾಗೂ ಶೇನ್ ವಾರ್ನ್ ಪ್ರಮುಖ ಸ್ಪಿನ್ನರ್ಗಳಾದರೆ ಗ್ಲೆನ್ ಮೆಗ್ರಾತ್ ಅವರಿಗೆ 12ನೇ ಸ್ಥಾನ ನೀಡಿದ್ದಾರೆ.
ಆಧುನಿಕ ಯುವ ಕ್ರಿಕೆಟಿಗರನ್ನು ಆಯ್ಕೆ ಮಾಡಿಕೊಳ್ಳದೆ ತನ್ನ ಕಾಲದಲ್ಲಿ ಜೊತೆಯಾಗಿ ಮತ್ತು ವಿರುದ್ಧ ತಂಡದ ಪರ ಆಡಿದ ಆಟಗಾರರಿಗೆ ದಿಲ್ಶಾನ್ ಸ್ಥಾನ ನೀಡಿದ್ದಾರೆ.
43ರ ಹರೆಯದ ದಿಲ್ಶನ್ ಅವರು 2016 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ 10,000 ಕ್ಕೂ ಹೆಚ್ಚು ಏಕದಿನ ರನ್ ಗಳಿಸಿದ್ದಾರೆ.
MS Dhoni: ನನ್ನ ಮಗನಿಗೆ ಅಷ್ಟೊಂದು ವಯಸ್ಸಾಗಿಲ್ಲ: ಧೋನಿ ತಾಯಿ
ದಿಲ್ಶನ್ ನೆಚ್ಚಿನ ಆಲ್ ಟೈಮ್ ಏಕದಿನ ತಂಡ:
ಸನತ್ ಜಯಸೂರ್ಯ (ಶ್ರೀಲಂಕಾ), ಸಚಿನ್ ತೆಂಡೂಲ್ಕರ್ (ಭಾರತ), ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್), ಮಹೇಲಾ ಜಯವರ್ಧನೆ (ಶ್ರೀಲಂಕಾ), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಜಾಕ್ ಕ್ಯಾಲೀಸ್ (ದಕ್ಷಿಣ ಆಫ್ರಿಕಾ), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), ವಾಸೀಂ ಅಕ್ರಂ (ಪಾಕಿಸ್ತಾನ), ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್), ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ), ಶೇನ್ ವಾರ್ನ್ (ಆಸ್ಟ್ರೇಲಿಯಾ), ಗ್ಲೆನ್ ಮೆಗ್ರಾತ್ (ಆಸ್ಟ್ರೇಲಿಯಾ, 12ನೇ ಬ್ಯಾಟ್ಸ್ಮನ್).
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ