Virat Kohli: ನಾನು ಕ್ರೀಸ್​ಗೆ ಕಾಲಿಟ್ಟಾಗ ಭಯ ಇರಬೇಕು; ಆ ಭಯ ಎದುರಾಳಿಗರದ್ದು ಆಗಿರಬೇಕು

2012ರ ಆಸ್ಟ್ರೇಲಿಯಾ ಪ್ರವಾಸ ಕೊಹ್ಲಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿತು. ಅಲ್ಲಿಂದ ವಿರಾಟ್ ಹಿಂತುರುಗಿ ನೋಡಿದ್ದೇ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಸಾಗಿದರು. ಅದು ಇಂದಿಗು ಮುಂದುವರೆಯುತ್ತಲೇ ಇದೆ!

Vinay Bhat | news18-kannada
Updated:September 9, 2019, 9:06 AM IST
Virat Kohli: ನಾನು ಕ್ರೀಸ್​ಗೆ ಕಾಲಿಟ್ಟಾಗ ಭಯ ಇರಬೇಕು; ಆ ಭಯ ಎದುರಾಳಿಗರದ್ದು ಆಗಿರಬೇಕು
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ
Vinay Bhat | news18-kannada
Updated: September 9, 2019, 9:06 AM IST
ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್ ವೈಖರಿಗೆ ದಾಖಲೆಗಳೇ ಸಾಕ್ಷಿ. ಕೊಹ್ಲಿ ಬ್ಯಾಟಿಂಗ್​ನಲ್ಲಿ ಮಿಂಚಿದರೆ ಅದರಿಂದ ಒಂದಾಲ್ಲಾ ಒಂದು ಹೊಸ ದಾಖಲೆ ಸೃಷ್ಟಿಯಾಗಿರುತ್ತದೆ. ಕಿಂಗ್ ಕೊಹ್ಲಿ, ಚೇಸಿಂಗ್ ಮಾಸ್ಟರ್ ಎಂದೇ ಕರೆಯಲ್ಪಡುವ ವಿರಾಟ್ ಕ್ರೀಸ್​ಗೆ ಬಂದರೆ ಎದುರಾಳಿ ಆಟಗಾರರು ಎಚ್ಚೆತ್ತುಕೊಳ್ಳುತ್ತಾರೆ.

ಆರಂಭದಲ್ಲಿ ಕೊಹ್ಲಿಗೆ ತುಂಬಾನೇ ಅಹಂಕಾರವಿದೆ ಎಂಬ ಮಾತುಗಳು ಕ್ರೀಡಾವಲಯದಿಂದಲೆ ಕೇಳಿಬಂದಿದ್ದವು. ಆದರೆ, ವಿರಾಟ್ ಇದ್ಯಾವುದನ್ನು ಲೆಕ್ಕಿಸದೆ ತಮ್ಮ ಬ್ಯಾಟ್ ಮೂಲಕ ಪ್ರತಿಯೊಬ್ಬರಿಗೂ ಉತ್ತರ ನೀಡಿದರು.

ಸದ್ಯ ಕೊಹ್ಲಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು, ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. 2012ರ ಆಸ್ಟ್ರೇಲಿಯಾ ಪ್ರವಾಸ ಕೊಹ್ಲಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿತು. ಅಲ್ಲಿಂದ ವಿರಾಟ್ ಹಿಂತುರುಗಿ ನೋಡಿದ್ದೇ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಸಾಗಿದರು. ಅದು ಇಂದಿಗು ಮುಂದುವರೆಯುತ್ತಲೇ ಇದೆ!

Till 2012, I didn’t see fear or respect for me in opposition’s eye: Virat Kohli
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)


ಗ್ರ್ಯಾನ್ ಸ್ಲಾಮ್ ಗೆದ್ದ ಬಿಯಾಂಕಗೆ ಕೇವಲ 19 ವರ್ಷ; ಮುದ್ದು ಮುಖದ ಚೆಲುವೆಯ ಫೋಟೋ ಇಲ್ಲಿದೆ ನೋಡಿ!

"ಅದೊಂದು ಕಾಲವಿತ್ತು. 2012ರ ವರೆಗೆ ನಾನು ಬ್ಯಾಟಿಂಗ್​ ಮಾಡಲು ಕ್ರೀಸ್​ಗೆ ಇಳಿದಾಗ ಎದುರಾಳಿಗರ ಕಣ್ಣಲ್ಲಿ ಭಯ ಅಥವಾ ಗೌರವ ಕಾಣುತ್ತಿರಲಿಲ್ಲ. ನಾನು ಮೈದಾನಕ್ಕೆ ಕಾಲಿಡುವಾಗ ಎದುರಾಳಿಯವರು ಈ ಆಟಗಾರನಿಂದ ಏನನ್ನು ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಳ್ಳದಂತೆ ಇರಬೇಕೆಂದು ಬಯಸಿದ್ದೆ. ನಾನು ಎಲ್ಲರಂತಿರುವ ಆಟಗಾರನಲ್ಲ. ಪ್ರತಿ ಬಾರಿ ಕಣಕ್ಕಿಳಿದಾಗ ಆ ಪಂದ್ಯದ ಮೇಲೆ ಪರಿಣಾಮ ಬೀರುವುದು ನನ್ನ ಗುರಿ"

"ನಾನು ಬ್ಯಾಟ್ ಹಿಡಿದು ಕ್ರೀಸ್​ಗೆ ಕಾಲಿಟ್ಟಾಗ ಎದುರಾಳಿಗರಲ್ಲಿ ಭಯ ಮೂಡಬೇಕು. ಇವನನ್ನು ಹೇಗಾದರು ಮಾಡಿ ಬೇಗನೆ ಔಟ್‌ ಮಾಡಬೇಕು, ಇಲ್ಲದಿದ್ದರೆ ಪಂದ್ಯವನ್ನು ಕಳೆದುಕೊಳ್ಳುತ್ತೇವೆಂಬ ಯೋಚನೆ ಅವರಲ್ಲಿರಬೇಕು. ಹೀಗಿರುವ ಆಲೋಚನೆ ಅವರಲ್ಲಿ ಮೂಡಿಲ್ಲ ಎಂದಾದರೆ ನಮ್ಮಲ್ಲಿ ಏನೋ ದೋಷವಿದೆ ಎಂದರ್ಥ" ಎಂಬುದು ಕೊಹ್ಲಿ ಮಾತು.
Loading...

ಕೊಹ್ಲಿ-ಧೋನಿಯಷ್ಟು ಶ್ರೀಮಂತನಲ್ಲ ಈ ಕ್ರಿಕೆಟಿಗ; ಆದರೂ ಪಂದ್ಯದ ಸಂಭಾವನೆ ದಾನ ಮಾಡಿದ ಸಂಜು!

ಇನ್ನು ತಮ್ಮ ಫಿಟ್​​ನೆಸ್​ ಬಗ್ಗೆ ಮಾತನಾಡಿರುವ ಕೊಹ್ಲಿ, "2012ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಳಿಕ ನನ್ನ ದೈಹಿಕ ಸಾಮರ್ಥ್ಯದ ಬಗ್ಗೆ ಅರಿವಾಯಿತು. ಫಿಟ್​ನೆಸ್ ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಂಡೆ. ಅಲ್ಲಿಂದ ನಾನು ಮತ್ತಷ್ಟು ಬಲಿಷ್ಠನಾದೆ. ನನ್ನ ಆಟದ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡೆ" ಎಂದು ಕೊಹ್ಲಿ ತಮ್ಮ ಹಳೆಯ ನೆನಪುಗಳ ಬಗ್ಗೆ ಹೇಳಿದ್ದಾರೆ.

ಸದ್ಯ ವೆಸ್ಟ್​ ಇಂಡೀಸ್ ಪ್ರವಾಸ ಮುಗಿಸಿ ತವರಿನಲ್ಲಿರುವ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಸಜ್ಜಾಗುತ್ತಿದೆ. ಸೆ. 15 ರಂದು ಧರ್ಮಶಾಲದಲ್ಲಿ ಹರಿಣಗಳ ವಿರುದ್ಧ ಮೊದಲ ಟಿ-20 ಪಂದ್ಯ ಆಡಲಿದೆ.

First published:September 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...