ದೇಶದೆಲ್ಲೆಡೆ ವಿಶ್ವಕಪ್ ಅಲೆ ಜೊರಾಗಿ ಬೀಸುತ್ತಿದೆ. ಅಭಿಮಾನಿಗಳಂತೂ ಟೀಂ ಇಂಡಿಯಾದ ಪಂದ್ಯ ವೀಕ್ಷಣೆಗೆ ಕಾತುರಾಗಿದ್ದಾರೆ. ಜೂನ್ 5 ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಲು ಸಜ್ಜಾಗಿದೆ. ಟೀಂ ಇಂಡಿಯಾ 2019 ವಿಶ್ವಕಪ್ ಗೆಲ್ಲುವ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮತ್ತು ಟಿಕ್ಟಾಕ್ ವಿಡಿಯೋ ಆ್ಯಪ್ನಲ್ಲಿ ಕ್ರಿಕೆಟ್ ಕುರಿತ ವಿಡಿಯೋಗಳು ವಿಶ್ವಕಪ್ ಗೆಲ್ಲಲು ಪ್ರೋತ್ಸಾಹ ನೀಡುತ್ತಿದೆ.
ಟಿಕ್ಟಾಕ್ ಆ್ಯಪ್ನಲ್ಲಿ ವಿಶ್ವಕಪ್ ಕಿಕ್ರೆಟ್ ಕುರಿತಾಗಿ ನಾನಾ ತರಹದ ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ. ಅಂತೆಯೇ, ಟಿಕ್ಟಾಕ್ ಕೂಡ ಬಳಕೆದಾರರನ್ನು ಹೆಚ್ಚಿಸುವ ಸಲುವಾಗಿ '#CricketWorldCup' ಹೊಸ ಚಾಲೆಂಜ್ ಅನ್ನು ಶುರುಮಾಡಿದೆ. ಈಗಾಗಲೇ ಈ ಟ್ಯಾಗ್ನಡಿಯಲ್ಲಿ 98 ಸಾವಿರಕ್ಕೂ ಅಧಿಕ ವಿಶ್ವಕಪ್ ಕುರಿತಾದ ವಿಡಿಯೋಗಳು ಅಪ್ಲೋಡ್ ಆಗಿವೆ.
ಇದನ್ನೂ ಓದಿ: ನಿಮಗೆ ಸಿಟ್ಟು ಬಂದಿದ್ರೆ ಈ ರಸ್ತೆಯಲ್ಲಿ ಮನಬಂದಂತೆ ತೀರಿಸಿಕೊಳ್ಳಿ
ಇದರ ಜೊತೆ ಟಿಕ್ಟಾಕ್ ವಿಶೇಷ ಆಫರ್ ಒಂದನ್ನು ನೀಡಿದ್ದು, ಈ ಹ್ಯಾಶ್ಟ್ಯಾಗ್ ಬಳಸಿ ಟಿಕ್ಟಾಕ್ನಲ್ಲಿ ವಿಡಿಯೋ ಹಂಚಿಕೊಂಡ ಒಬ್ಬ ವಿಜಯ ಶಾಲಿಗೆ ಇಂಗ್ಲೆಂಡ್ನಲ್ಲಿ ಭಾರತ ಪಂದ್ಯ ನೋಡುವ ಅವಕಾಶ ನೀಡಲಿದೆ ಎಂಬ ಮಾಹಿತಿಯಿದೆ.
2019 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ಇಂಗ್ಲೆಂಡ್, ಆಸ್ಟ್ರೇಲಿಯಾ ಜೊತೆ ಟೀಂ ಇಂಡಿಯಾ ಕೂಡಯಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಮೂರನೇ ಬಾರಿ ವಿಶ್ವಕಪ್ ಗೆದ್ದು ಬರಲಿ ಎಂದು ಈಗಗಅಲೇ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ದಿಗ್ಗಜರು ಶುಭಹಾರೈಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ