ಯುವತಿಯಿಂದ ಸ್ಟಾರ್ ಕ್ರಿಕೆಟಿಗನ ವಿರುದ್ಧ ವಿಡಿಯೋ ಕಾಲ್​ನಲ್ಲಿ ಹಸ್ತಮೈಥುನ ಮಾಡಿದ ಆರೋಪ!

ಇದಕ್ಕೂ ಮೊದಲು ಪಾಕ್ ತಂಡದ ಮತ್ತೊಬ್ಬ ಪ್ರಮುಖ ಬ್ಯಾಟ್ಸ್​ಮನ್​ ಇಮಾಮ್ ಉಲ್ ಹಖ್​​ ವಿರುದ್ಧ ಟ್ವಿಟ್ಟರ್ ಖಾತೆದಾರರೊಬ್ಬರು, ಇಮಾಮ್ ಏಳರಿಂದ ಎಂಟು ಯುವತಿಯರೊಂದಿಗೆ ವಾಟ್ಸ್​ಆ್ಯಪ್​ನಲ್ಲಿ ಸಂಬಂಧ ಹೊಂದಿದ್ದಾನೆ ಎಂದು ಹೇಳಿ ಖಾಸಗಿ ಚಾಟಿಂಗ್​ನ​ ಸ್ಕ್ರೀನ್​​ ಶಾಟ್​ಗಳನ್ನು ಶೇರ್ ಮಾಡಿದ್ದರು.

news18-kannada
Updated:November 4, 2019, 4:58 PM IST
ಯುವತಿಯಿಂದ ಸ್ಟಾರ್ ಕ್ರಿಕೆಟಿಗನ ವಿರುದ್ಧ ವಿಡಿಯೋ ಕಾಲ್​ನಲ್ಲಿ ಹಸ್ತಮೈಥುನ ಮಾಡಿದ ಆರೋಪ!
ಹರೀಮ್ ಷಾ ಹಾಗೂ ಕ್ರಿಕೆಟಿಗ
  • Share this:
ಬೆಂಗಳೂರು (ನ. 04): ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಾಗುತ್ತಲೆ ಇದ್ದಾರೆ. ಆ ಪೈಕಿ ಮಹಿಳೆಯರ ಜೊತೆ ಫ್ಲರ್ಟ್​ ಮಾಡುವ ವಿಚಾರದಲ್ಲಿ ಯುವ ಆಟಗಾರ ಇಮಾನ್ ಉಲ್ ಹಖ್ ಹಾಗೂ ಹೆಸರು ಜೋರಾಗಿ ಕೇಳಿಬಂದಿತ್ತು.

ಸದ್ಯ ಮತ್ತೊಬ್ಬ ಸ್ಟಾರ್ ಆಟಗಾರನ ವಿರುದ್ಧ ಪಾಕಿಸ್ತಾನದ ಟಿಕ್​ಟಾಕ್ ಮಾಡೆಲ್ ಹರೀಮ್ ಷಾ ಗಂಭೀರ ಆರೋಪ ಮಾಡಿದ್ದಾರೆ. 19 ವರ್ಷ ಪ್ರಾಯದ ಪಾಕ್ ಪ್ರಮುಖ ಬೌಲರ್ ಶಾಹಿನ್ ಅಫ್ರಿದಿ ನನ್ನ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡುವ ವೇಳೆ ಹಸ್ತಮೈಥುನ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಹರೀಮ್ ಆರೋಪ ಮಾಡಿದ್ದಾರೆ.

 Hareem Shah Confirms She Didn’t Leak Private Video Of Shaheen Afridi
ಹರೀಮ್ ಷಾ, ಪಾಕಿಸ್ತಾನ ಟಿಕ್​ಟಾಕ್ ಮಾಡೆಲ್


ಇನ್ಮುಂದೆ ಪ್ರತಿ ವರ್ಷ ಭಾರತದಲ್ಲಿ ಡೇ ನೈಟ್ ಟೆಸ್ಟ್​; ಸೌರವ್ ಗಂಗೂಲಿ

ಈ ಬಗ್ಗೆ ಟ್ವಿಟ್ಟರ್​​ನಲ್ಲಿ ಬೇಸರ ಹಂಚಿಕೊಂಡಿರುವ ಹರೀಮ್, "ವಿಡಿಯೋ ಕಾಲ್​ನಲ್ಲಿ ಪಾಕ್ ಕ್ರಿಕೆಟ್ ತಂಡದ ಆಟಗಾರ ಶಾಹಿನ್ ಅಫ್ರಿದಿ ತನ್ನ ಗುಪ್ತಾಂಗ ತೋರಿಸಿದ್ದಲ್ಲದೆ ಹಸ್ತಮೈಥುನ ಮಾಡಿದ್ದಾರೆ" ಎಂದು ಬರೆದುಕೊಂಡು ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.

Hareem Shah Shaheen Afridi
ಹರೀಮ್ ಷಾ ಅವರು ಶಾಹಿನ್  ಅಫ್ರಿದಿ ವಿರುದ್ಧ ಆರೋಪ ಮಾಡಿ ವಿಡಿಯೋ ಹಂಚಿಕೊಂಡಿರುವ ಸ್ಕ್ರೀನ್​ ಶಾಟ್​​


ಆದರೆ, ಇಷ್ಟೆಲ್ಲ ಹೇಳಿ ಕೆಲ ಸಮಯದ ಬಳಿಕ ಹರೀಮ್ ಷಾ ಆ ವಿಡಿಯೋವನ್ನು ಟ್ವಿಟ್ಟರ್​ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಅಲ್ಲದೆ ಅದು ನನ್ನ ಅಕೌಂಟ್ ಅಲ್ಲ. ನಾನು ಟ್ವಿಟ್ಟರ್ ಬಳಸುವುದೇ ಇಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಶಾಹಿನ್ ವಿರುದ್ಧ ಫೆರಿಹಾ ಎಂಬವರು ಟ್ವಿಟ್ಟರ್​​ನಲ್ಲಿ ಕಿಡಿಕಾರಿದ್ದರು. "ಫ್ಲರ್ಟ್​ ಮಾಡುವ ವಿಚಾರದಲ್ಲಿ ಶಾಹಿನ್ ಒಂದುರೀತಿಯ ಸಮುದ್ರದ ತಿಮಿಂಗಿಲವಿದ್ದಂತೆ, ಈತ ಯಾವಾಗಲು ಹೆಣ್ಣು ಮಕ್ಕಳ ಜೊತೆಗೆ ಅನಭ್ಯವಾಗಿ ವರ್ತಿಸುತ್ತಾನೆ" ಎಂದು ಟ್ವೀಟ್ ಮಾಡಿದ್ದರು.

IND vs BAN: ಮೊದಲ ಟಿ-20 ಪಂದ್ಯದಲ್ಲೇ ಭಾರತ ಸೋಲಲು ಒಂದಲ್ಲಾ-ಎರಡಲ್ಲಾ ಮೂರು ಕಾರಣಗಳು!

ಇದಕ್ಕೂ ಮೊದಲು ಪಾಕ್ ತಂಡದ ಮತ್ತೊಬ್ಬ ಪ್ರಮುಖ ಬ್ಯಾಟ್ಸ್​ಮನ್​ ಇಮಾಮ್ ಉಲ್ ಹಖ್​​ ವಿರುದ್ಧ ಟ್ವಿಟ್ಟರ್ ಖಾತೆದಾರರೊಬ್ಬರು, "ಇಮಾಮ್ ಏಳರಿಂದ ಎಂಟು ಯುವತಿಯರೊಂದಿಗೆ ವಾಟ್ಸ್​ಆ್ಯಪ್​ನಲ್ಲಿ ಸಂಬಂಧ ಹೊಂದಿದ್ದಾನೆ" ಎಂದು ಹೇಳಿ ಖಾಸಗಿ ಚಾಟಿಂಗ್​ನ​ ಸ್ಕ್ರೀನ್​​ ಶಾಟ್​ಗಳನ್ನು ಶೇರ್ ಮಾಡಿದ್ದರು.
First published:November 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading