T20 World Cup IND vs PAK| ಈ ವರ್ಷ ಭಾರತದ ವಿರುದ್ಧ ಗೆಲುವು ನಮ್ಮದೇ; ಪಾಕ್ ನಾಯಕ ಬಾಬರ್ ಅಜಂ ವಿಶ್ವಾಸ!

ಯುಎಇ ನಲ್ಲಿ ವಿಕೆಟ್ ಹೇಗೆ ವರ್ತಿಸುತ್ತದೆ ಮತ್ತು ಬ್ಯಾಟರ್‌ಗಳು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಎಂದು ನಮಗೆ ತಿಳಿದಿದೆ. ಯಾರು ಉತ್ತಮ ಕ್ರಿಕೆಟ್ ಆಡುತ್ತಾರೆ ಅವರು ಪಂದ್ಯವನ್ನು ಗೆಲ್ಲುತ್ತಾರೆ. ಆದರೆ, ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಗೆಲ್ಲಲು ಹೆಚ್ಚು ಅವಕಾಶ ಇದೆ ಎಂದು ಬಾಬರ್ ಅಜಾಂ ತಿಳಿಸಿದ್ದಾರೆ.

ಬಾಬರ್ ಅಜಂ

ಬಾಬರ್ ಅಜಂ

 • Share this:
  "ವಿಶ್ವಕಪ್​ನಲ್ಲಿ ಪಾಕಿಸ್ತಾನ (Pakistan) ತಂಡ ಈವರೆಗೆ ಭಾರತದ ವಿರುದ್ಧ ಗೆಲುವು ದಾಖಲಿಸಿಲ್ಲ. ಆದರೆ, ಕಳೆದ ಮೂರು-ನಾಲ್ಕು ವರ್ಷಗಳಿಂದ ಯುಎಇಯಲ್ಲಿ ಹೆಚ್ಚಾಗಿ ಆಡಿದ್ದರಿಂದ ಇಲ್ಲಿನ ಪರಿಸ್ಥಿತಿಯ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಟಿ-20 ವಿಶ್ವಕಪ್‌ನ(T20 World Cup) ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಎದುರಾಳಿ ಭಾರತವನ್ನು ಸೋಲಿಸಲಿದೆ" ಎಂದು ಪಾಕಿಸ್ತಾನದ ತಂಡದ ನಾಯಕ ಬಾಬರ್ ಅಜಂ (Babar Azam) ಇಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಪಾಕಿಸ್ತಾನವು ಅಕ್ಟೋಬರ್ 24 ರಂದು ದುಬೈ (Dubai) ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತವನ್ನು ಎದುರಿಸಲಿದೆ. ಈ ಅಂಗಳದಲ್ಲಿ ಪಾಕಿಸ್ತಾನ ಈ ಹಿಂದೆ ಆಡಿದ್ದ ಎಲ್ಲಾ 6 ಪಂದ್ಯಗಳಲ್ಲೂ ಗೆಲುವು ದಾಖಲಿಸಿ ಅಜೇಯ ಓಟ ಮುಂದುವರೆಸಿದೆ. ಇದೇ ಆಧಾರದಲ್ಲಿ ಭಾರತದ ಮೇಲೂ ಗೆಲ್ಲುವ ವಿಶ್ವಾಸದಲ್ಲಿದೆ.

  ಈ ಬಗ್ಗೆ ಮಾತನಾಡಿರುವ ಬಾಬರ್ ಅಜಂ, "ಯುಎಇ ನಲ್ಲಿ ವಿಕೆಟ್ ಹೇಗೆ ವರ್ತಿಸುತ್ತದೆ ಮತ್ತು ಬ್ಯಾಟರ್‌ಗಳು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು? ಎಂದು ನಮಗೆ ತಿಳಿದಿದೆ. ಯಾರು ಉತ್ತಮ ಕ್ರಿಕೆಟ್ ಆಡುತ್ತಾರೆ ಅವರು ಪಂದ್ಯವನ್ನು ಗೆಲ್ಲುತ್ತಾರೆ. ನೀವು ನನ್ನನ್ನು ಕೇಳಿದರೆ ನಾನು ಈ ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನವೇ ಗೆಲ್ಲುತ್ತೇವೆ" ಎಂದು ಬಾಬರ್ ಅಜಂ ಹೇಳಿಕೆ ನೀಡಿದ್ದಾರೆ. ನಾಯಕ ಸ್ಥಾನಕ್ಕೆ ಪ್ರಮೋಟ್​ ಆದ ನಂತರ ಬಾಬರ್ ಅಜಂ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಮೊದಲ ಐಸಿಸಿ ಟ್ರೋಫಿ ಇದಾಗಿದೆ.

  2009 ರಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ತಂಡಗಳು ಪಾಕಿಸ್ತಾನ ಪ್ರವಾಸಕ್ಕೆ ಹಿಂಜರಿಯುತ್ತಿದ್ದಾರೆ. ನ್ಯೂಜಿಲೆಂಡ್​ ಇತ್ತೀಚೆಗೆ ಏಕದಿನ ಟೂರ್ನಿಗಾಗಿ ಪಾಕಿಸ್ತಾನಕ್ಕೆ ತೆರಳಿತ್ತಾದರೂ ಪಂದ್ಯ ಆರಂಭಕ್ಕೂ ಮುನ್ನವೇ ಸರಣಿಯನ್ನು ರದ್ದು ಮಾಡಿ ನ್ಯೂಜಿಲೆಂಡ್​ಗೆ ಮರಳಿತ್ತು.

  ಹೀಗಾಗಿ ಪಾಕಿಸ್ತಾನ ಕಳೆದ ಒಂದು ದಶಕಗಳಿಂದ ತಮ್ಮ ಎಲ್ಲಾ ಸರಣಿಯನ್ನು ಯುಎಇ ಅಂಗಳದಲ್ಲೇ ಆಯೋಜಿಸುತ್ತಿದೆ. ಹೀಗಾಗಿ ಪಾಕಿಸ್ತಾನ ಆಟಗಾರರ ಪಾಲಿಗೆ ಯುಎಇ ತವರಿನ ಅಂಗಳದಂತಾಗಿದ್ದು, ಅವರಿಗೆ ಹೆಚ್ಚು ಅನುಕೂಲಕರವಾಗಿರಲಿದೆ ಎಂದು ಹೇಳಲಾಗುತ್ತಿದೆ.  ವೈರಲ್ ಆಗುತ್ತಿದೆ ಮೌಕಾ ಮೌಕಾ ಜಾಹೀರಾತು:

  ಭಾರತ-ಪಾಕಿಸ್ತಾನ ಪಂದ್ಯ ಕಾವು ದಿನೇ ದಿನೇ ಏರುತ್ತಿದ್ದಂತೆ "ಮೌಕಾ ಮೌಕಾ" ಜಾಹೀರಾತು ಇಂದು ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್ ಆಗಿದೆ. ಪಾಕಿಸ್ತಾನ ತಂಡ ಈವರೆಗೆ ಭಾರತದ ವಿರುದ್ಧ 12ಕ್ಕೂ ಹೆಚ್ಚು ವಿಶ್ವಕಪ್​ ಪಂದ್ಯಗಳಲ್ಲಿ ಕಣಕ್ಕೆ ಇಳಿದಿದೆ. ಆದರೆ, ಈವರೆಗೆ ಒಂದೇ ಒಂದು ಪಂದ್ಯದಲ್ಲೂ ಗೆಲುವು ಸಾಧಿಸಿಲ್ಲ. ಇನ್ನೂ 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತ ಪಾಕಿಸ್ತಾವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದನ್ನು ಈವರೆಗೆ ವಿಶ್ವ ಕ್ರಿಕೆಟ್​ ಇತಿಹಾಸದಲ್ಲಿ ಅಚ್ಚಳಿಯದ ನೆನೆಪು.

  ಹೀಗಾಗಿ ಸ್ಟಾರ್​ ಸ್ಪೋರ್ಟ್​ ಪ್ರತಿ ವಿಶ್ವಕಪ್ ವೇಳೆಯೂ ಪಾಕಿಸ್ತಾನ ಈ ವರ್ಷವಾದರೂ ಭಾರತದ ವಿರುದ್ಧ ಗೆಲ್ಲುತ್ತದೆಯೇ? ಎಂಬ ಕಾನ್ಸೆಪ್ಟ್​ ಅನ್ನು ಮುಂದಿಟ್ಟು ಜಾಹೀರಾತು ನಿರ್ಮಾಣ ಮಾಡುತ್ತಲೇ ಇದೆ. ಆದರೆ, ಪಾಕಿಸ್ತಾನ ಮಾತ್ರ ಸತತ ನಿರಾಸೆ ಅನುಭವಿಸುತ್ತಲೇ ಇದೆ. ಈ ವರ್ಷವೂ ಸಹ ಸ್ಟಾರ್​ ಸ್ಪೋರ್ಟ್​ ಇದೇ ಅಂಶವನ್ನು ಮುಂದಿಟ್ಟು ಮತ್ತೊಂದು ಹೊಸ ಜಾಹೀರಾತನ್ನು ರಚಿಸಿದ್ದು, ಈ ಜಾಹೀರಾತು ಸಹ ಸಾಕಷ್ಟು ವೈರಲ್ ಆಗುತ್ತಿದೆ.

  ಇದನ್ನೂ ಓದಿ: T20 World Cup- ವಿಶ್ವಕಪ್​ನಲ್ಲಿ ಭಾರತದ ಮುನ್ನಡೆಗೆ ಕೆಎಲ್ ರಾಹುಲ್ ಪಾತ್ರ ಮುಖ್ಯ ಎಂದ ಬ್ರೆಟ್ ಲೀ

  ಇದು ಕ್ರೀಡಾ ಮನೋಭಾವದ ಜಾಹೀರಾತು:

  ಜಾಹೀರಾತಿನ ಬಗ್ಗೆ ಮಾತನಾಡಿರುವ ಸ್ಟಾರ್​ ಸ್ಪೋರ್ಟ್​ ವಾಹಿನಿಯ ಮುಖ್ಯಸ್ತ ಸಂಜೋಗ್ ಗುಪ್ತಾ, "ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಐತಿಹಾಸಿಕ ಪೈಪೋಟಿ ಸಾಟಿಯಿಲ್ಲ. ಸಾಂಪ್ರದಾಯಿಕ 'ಮೌಕಾ ಮೌಕಾ' ಅಭಿಯಾನವು ಈ ಪೈಪೋಟಿಯ ಮಿಶ್ರ ಸ್ಪರ್ಧೆ, ವಿಡಂಬನೆ ಮತ್ತು ಕ್ರೀಡಾ ಮನೋಭಾವವನ್ನು ಸೆರೆಹಿಡಿಯುವ ಪ್ರಯತ್ನವಾಗಿದೆ. ಈ ಪಂದ್ಯವನ್ನು ಪ್ರಸಾರ ಮಾಡುವುದಕ್ಕಾಗಿ ಸ್ಟಾರ್ ಮತ್ತು ಡಿಸ್ನಿ ಇಂಡಿಯಾ ಹೆಮ್ಮೆಪಡುತ್ತದೆ" ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಈ ಇನಿಂಗ್ಸ್ ಟಿ20 ವಿಶ್ವಕಪ್ ಇತಿಹಾಸದ ಅತ್ಯಂತ ಶ್ರೇಷ್ಠ ಕ್ಷಣವೆಂದು ಘೋಷಣೆ

  ವಿಶ್ವ ಕ್ರಿಕೆಟ್​ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ತನ್ನದೇ ಆದ ಮಹತ್ವ ಇದೆ. ಏಕದಿನ ಮತ್ತು ಟಿ20 ಎರಡರಲ್ಲೂ ಈವರೆಗೆ ಪಾಕಿಸ್ತಾನ ಭಾರತದ ವಿರುದ್ಧ ಗೆದ್ದಿಲ್ಲ. ಸತತ ಐದು ಐಸಿಸಿ ಟಿ-20 ವಿಶ್ವಕಪ್ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಉತ್ತಮ ಆಟದ ಮೂಲಕ ಗೆಲುವು ದಾಖಲಿಸಿದೆ. 2007 ಟಿ 20 ವಿಶ್ವಕಪ್‌ನಲ್ಲಿ ಎರಡು ಬಾರಿ, ನಂತರ 2012, 2014, ಮತ್ತು 2016 ರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದೆ. ಹೀಗಾಗಿ ಸಾಮಾನ್ಯವಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
  Published by:MAshok Kumar
  First published: