India Vs England: ಭಾರತ-ಇಂಗ್ಲೆಂಡ್​ ಪಂದ್ಯದಲ್ಲಿ ನಿಮ್ಮ ಬೆಂಬಲ ಯಾರಿಗೆ?; ಅಚ್ಚರಿ ಮೂಡಿಸಿದ ಪಾಕ್​ ಅಭಿಮಾನಿಗಳ ಉತ್ತರ

India Vs England: ಪ್ರಬಲ ತಂಡಗಳ ಪೈಕಿ ಗುರುತಿಸಿಕೊಂಡಿರುವ ಇಂಗ್ಲೆಂಡ್​ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ. ವಿಶ್ವದಾದ್ಯಂತ ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಲ್ಲಿದ್ದಾರೆ.

ಭಾರತ-ಪಾಕಿಸ್ತಾನ ಆಟಗಾರರು

ಭಾರತ-ಪಾಕಿಸ್ತಾನ ಆಟಗಾರರು

 • News18
 • Last Updated :
 • Share this:
  2019ರ ವಿಶ್ವಕಪ್​ ಪಂದ್ಯ ರೋಚಕತೆಯಿಂದ ಸಾಗುತ್ತಿದೆ. ಟೀಂ ಇಂಡಿಯಾ ಎದುರಾಳಿ ತಂಡಗಳನ್ನು ಸೋಲಿಸಿ ವಿಶ್ವಕಪ್​ ಬಾಚಿಕೊಳ್ಳುವ ತವಕದಲ್ಲಿದೆ. ಈವರೆಗೆ ಟೀಂ ಇಂಡಿಯಾ ಆಡಿರುವ ಎಲ್ಲಾ ಪಂದ್ಯವನ್ನು ಗೆದ್ದು ಬೀಗಿದೆ. ಇದೀಗ ಜೂನ್​ 30ರಂದು ನಡೆಯುವ ಇಂಗ್ಲೆಂಡ್​ ವಿರುದ್ಧದ ಪಂದ್ಯ ಭಾರೀ ಕುತೂಹಲತೆಗೆ ಕಾರಣವಾಗಿದೆ.

  ಪ್ರಬಲ ತಂಡಗಳ ಪೈಕಿ ಗುರುತಿಸಿಕೊಂಡಿರುವ ಇಂಗ್ಲೆಂಡ್​ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ. ವಿಶ್ವದಾದ್ಯಂತ ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತುರದಲ್ಲಿದ್ದಾರೆ. ಮಾಜಿ ಕಮೆಂಟರ್​ ನಾಸಿರ್​ ಹುಸೈನ್​  ಕೂಡ ಭಾರತ-ಇಂಗ್ಲೆಂಡ್​ ಪಂದ್ಯಗಳ ಜಟಾಪಟಿಯ ಕುರಿತು ತಮ್ಮ ಟ್ಟಟ್ಟರ್​ ಖಾತೆಯಲ್ಲಿ ಸಂದೇಶವೊಂದನ್ನು ಬರೆದಿದ್ದು, ಯಾರೆಲ್ಲಾ ಪಾಕಿಸ್ತಾನಿ ಅಭಿಮಾನಿಗಳು ಜೂನ್​ 30ಕ್ಕೆ ನಡೆಯುವ ಇಂಡಿಯಾ-ಇಂಗ್ಲೆಂಡ್​​ ಪಂದ್ಯಕ್ಕೆ ಸಪೋರ್ಟ್​ ಮಾಡುತ್ತೀರಾ ಎಂದು ಬರೆದಿದ್ದಾರೆ. ಇದಕ್ಕೆ ಮರುಉತ್ತರವಾಗಿ ಕೆಲ ಪಾಕಿಸ್ತಾನಿ ಅಭಿಮಾನಿಗಳು ಟೀಂ ಇಂಡಿಯಾಗೆ ಪ್ರೋತ್ಸಾಹ ನೀಡುವಂತೆ ಮರುಟ್ವಿಟ್​​ ಮಾಡಿದ್ದಾರೆ.

   

  2019ರ ವಿಶ್ವಕಪ್  ಪಂದ್ಯ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ವಿಶ್ವಕಪ್​ ಕ್ರಿಕೆಟ್​ ಅಂಕಿ ಅಂಶಗಳ ಪೈಕಿ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್​ ತಂಡ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಟೀಂ ಇಂಡಿಯಾ ಆಡಿರುವ 5 ಪಂದ್ಯಗಳಲ್ಲಿ ವಿಜಯಶಾಲಿಯಾಗಿದ್ದು 3 ನೇ ಸ್ಥಾನದಲ್ಲಿದೆ. ಅಂತೆಯೇ, ಇಂಗ್ಲೆಂಡ್​ ತಂಡ 4 ನೇ ಸ್ಥಾನವನ್ನು ಅಲಂಕರಿಸಿದೆ. ಇದೀಗ ಜೂನ್​ 30 ರಂದು ನಡೆಯುವ ಪಂದ್ಯ ಸಾಕಷ್ಟು ಕೂತೂಹಲ ಮೂಡಿಸಿದ್ದು, ಟೀಂ ಇಂಡಿಯಾಕ್ಕೆ ಪಾಕಿಸ್ತಾನಿ ಅಭಿಮಾನಿಗಳ ಬೆಂಬಲ ನೀಡುತ್ತಾರೆಯೇ ಎಂಬುದು ಯಕ್ಷ ಪಶ್ನೆಯಾಗಿದೆ.
  First published: