HOME » NEWS » Sports » CRICKET THIS ENGLAND PLAYER WITHDRAWS FROM THIS YEARS IPL AUCTION CITING FAMILY REASON SNVS

IPL Auction - ಅತಿಹೆಚ್ಚು ಮೂಲಬೆಲೆಗೆ ಬಿಡ್ ಹಾಕಿದ್ದ ಈ ಇಂಗ್ಲೆಂಡ್ ಆಟಗಾರ ಐಪಿಎಲ್ ಹರಾಜಿನಿಂದ ವಾಪಸ್

ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಇಂಗ್ಲೆಂಡ್ ತಂಡದ ಈ ಆಟಗಾರ ತಮ್ಮ ಕುಟುಂಬದ ಜೊತೆ ಕಾಲ ಕಳೆಯಬೇಕೆಂಬ ಕಾರಣವೊಡ್ಡಿ ಐಪಿಎಲ್ ಬಿಡ್ಡಿಂಗ್​ನಿಂದ ಹಿಂದಕ್ಕೆ ಸರಿದಿದ್ದಾರೆ. ಇವರು 2 ಕೋಟಿ ಬೇಸ್ ಪ್ರೈಸ್ ಹೊಂದಿದ್ದಾರೆ.

cricketnext
Updated:February 18, 2021, 12:10 PM IST
IPL Auction - ಅತಿಹೆಚ್ಚು ಮೂಲಬೆಲೆಗೆ ಬಿಡ್ ಹಾಕಿದ್ದ ಈ ಇಂಗ್ಲೆಂಡ್ ಆಟಗಾರ ಐಪಿಎಲ್ ಹರಾಜಿನಿಂದ ವಾಪಸ್
ಮಾರ್ಕ್ ವುಡ್
  • Cricketnext
  • Last Updated: February 18, 2021, 12:10 PM IST
  • Share this:
ಚೆನ್ನೈ(ಫೆ. 18): ಇವತ್ತು ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಹರಾಜು ಪಟ್ಟಿಯಲ್ಲಿ 292 ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿದ್ದ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಅವರು ಹರಾಜಿನಿಂದ ಹೊರಬಂದಿದ್ದಾರೆ. ತಮ್ಮ ಪತ್ನಿಗೆ ಮಗು ಜನಸಿರುವ ಹಿನ್ನೆಲೆಯಲ್ಲಿ ಕುಟುಂಬದ ಜೊತೆ ಸಮಯ ಕಳೆಯಲು ಐಪಿಎಲ್​ನಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅವರು ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಮೊದಲ ಎರಡು ಪಂದ್ಯದಲ್ಲಿ ಅವರು ಆಡಿಲ್ಲ. ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ಅವರು ಆಡಲಿದ್ದಾರೆ.

ವೇಗದ ಬೌಲರ್ ಆಗಿರುವ ಮಾರ್ಕ್ ವುಡ್ ಐಪಿಎಲ್ ಹರಾಜಿಗೆ 2 ಕೋಟಿ ರೂ ಮೂಲ ಬೆಲೆ ನಿಗದಿ ಮಾಡಿಕೊಂಡಿದ್ದರು. 31 ವರ್ಷದ ಇವರನ್ನು ಕೊಳ್ಳಲು ಕೆಲ ಫ್ರಾಂಚೈಸಿಗಳು ಆಸಕ್ತಿ ತೋರಿಸಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹರಾಜು ನಡೆದು ತಮ್ಮನ್ನು ಫ್ರಾಂಚೈಸಿಯೊಂದು ಖರೀದಿಸಿ ಆ ನಂತರ ಹೊರನಡೆಯುವುದಕ್ಕಿಂತ ಈಗಲೇ ಹರಾಜು ಪ್ರಕ್ರಿಯೆಯಿಂದ ದೂರು ಉಳಿಯುವುದು ಎಲ್ಲರಿಗೂ ಒಳ್ಳೆಯದು ಎಂಬ ತೀರ್ಮಾನಕ್ಕೆ ಮಾರ್ಕ್ ವುಡ್ ಬಂದಿದ್ದಾರೆ. ಭಾರತದ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಅವರು ತಮ್ಮ ತಾಯ್ನಾಡಿಗೆ ಮರಳಿ ಕುಟುಂಬ ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ: IPL 2021 Auction: ಪ್ರತಿ ತಂಡದ ಬಳಿ ಎಷ್ಟು ಮೊತ್ತವಿದೆ? ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ಮಾರ್ಕ್ ವುಡ್ ಅವರು 2018ರ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರು. ಆ ವರ್ಷದ ಐಪಿಎಲ್​ನಲ್ಲಿ ಅವರು ಆಡಿದ್ದು ಒಂದೇ ಪಂದ್ಯ. 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಲಸಿತ್ ಮಾಲಿಂಗ ಸ್ಥಾನ ತುಂಬಿಸಲು ಮಾರ್ಕ್ ವುಡ್ ಅವರನ್ನ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿತ್ತು. ಆದರೆ ಆ ಆಫರ್ ಅನ್ನು ವುಡ್ ತಿರಸ್ಕರಿಸಿದ್ದರು. ಅವರ ಬದಲು ಜೇಮ್ಸ್ ಪ್ಯಾಟಿನ್ಸನ್ ಅವರನ್ನ ಮುಂಬೈ ಇಂಡಿಯನ್ಸ್ ತಂಡ ಸೇರಿಸಿಕೊಂಡಿತು.

ಇಂದು ಮಧ್ಯಾಹ್ನ 3ಗಂಟೆಗೆ ಐಪಿಎಲ್ 2021 ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನಡೆಯುತ್ತಿದೆ.
Published by: Vijayasarthy SN
First published: February 18, 2021, 12:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories