(VIDEO): ಕ್ರಿಕೆಟ್ ಇತಿಹಾಸದಲ್ಲಿ ಇಂದು ಮರೆಯಲಾಗದ ದಿನ; ಆರ್ಸಿಬಿ ಪರ ಇತಿಹಾಸ ರಚಿಸಿದ ಕ್ರಿಸ್ ಗೇಲ್
Chris Gayle 175: 175 ರನ್ ಸಿಡಿಸುವ ಮೂಲಕ ಎಡಗೈ ಬ್ಯಾಟ್ಸ್ಮನ್ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವೈಯಕ್ತಿಕ ರನ್ ದಾಖಲಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಸಾಧನೆಗೆ ಭಾಜನರಾಗಿದ್ದರು.
38 ಎಸೆತಗಳಲ್ಲಿ 76 ರನ್ ಬಾರಿಸಿದ್ದ ಗೇಲ್ ಈ ಸಂದರ್ಭದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಇದರ ಬೆನ್ನಲ್ಲೇ 35 ಎಸೆತಗಳಲ್ಲಿ 54 ರನ್ ಸಿಡಿಸಿದ ಕೊಹ್ಲಿ ಕೂಡ ವಿಕೆಟ್ ಕೈ ಚೆಲ್ಲಿದರು. ನಂತರ ಬಂದ ಎಬಿ ಡಿವಿಲಿಯರ್ಸ್, ಶೇನ್ ವಾಟ್ಸನ್ ಹಾಗೂ ಕೆಎಲ್ ರಾಹುಲ್ ಬೇಗನೆ ನಿರ್ಗಮಿಸಿದರು.
ಕ್ರಿಕೆಟ್ ಇತಿಹಾಸದಲ್ಲಿ ಇಂದು ಮರೆಯಲಾಗದ ದಿನ. 2013 ಏಪ್ರಿಲ್ 23 ರಂದು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅಕ್ಚರಶಃ ಅಬ್ಬರಿಸಿದ್ದರು. ಗೇಲ್ ಬ್ಯಾಟಿಂಗ್ ವೈಖರಿಯೇ ಹಾಗೆ. ಕ್ರೀಸ್ನಲ್ಲಿ ಕೆಲವೇ ಓವರ್ಗಳು ಇದ್ದರೆ ಸಾಕು ಎದುರಾಳಿ ಬೌಲರ್ಗಳಿಗೆ ಬೆವರಿಳಿಸುವುದಂತೂ ಖಂಡಿತಾ ನಿಜ.
ಇದೇ ಜಮೈಕಾ ಆಟಗಾರ ಸರಿಯಾಗಿ ಏಳು ವರ್ಷಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಕೇವಲ 66 ಎಸೆತಗಳಲ್ಲಿ ಅಜೇಯ 175 ರನ್ ಸಿಡಿಸಿದ್ದರು. ಪುಣೆ ತಂಡದ ಬೌಲರ್ಗಳನ್ನು ನುಚ್ಚು ನೂರು ಮಾಡಿದ್ದರು.
175 ರನ್ ಸಿಡಿಸುವ ಮೂಲಕ ಎಡಗೈ ಬ್ಯಾಟ್ಸ್ಮನ್ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವೈಯಕ್ತಿಕ ರನ್ ದಾಖಲಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಸಾಧನೆಗೆ ಭಾಜನರಾಗಿದ್ದರು. ಇದುವರೆಗೂ ಈ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಾಗಿಲ್ಲ. ಜೊತೆಗೆ, ಟಿ-20 ಕ್ರಿಕೆಟ್ನ ಅತ್ಯಂತ ವೇಗದ ಶತಕ ಕೂಡ ಇದಾಗಿತ್ತು. ಈ ಸಾಧನೆಯಿಂದಾಗಿ ಕ್ರಿಸ್ ಗೇಲ್ ಯೂನಿವರ್ಸ್ ಬಾಸ್ ಆಗಿ ಉಳಿದುಕೊಂಡರು.
ಏಳು ವರ್ಷಗಳ ಹಿಂದಿನ ಆ ಪಂದ್ಯ ಹೇಗಿತ್ತು? ಇಲ್ಲಿದೆ ವಿಡಿಯೋ:
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ