• Home
  • »
  • News
  • »
  • sports
  • »
  • MS Dhoni: ಈ 5 ಕ್ರಿಕೆಟಿಗರಿಗೆ ಧೋನಿ ಅಂದ್ರೆ ಅಷ್ಟಕಷ್ಟೆಯಂತೆ! ರಿಟೈರ್ ಆದಕೂಡ್ಲೇ ಬಾಯಿ ಬಿಟ್ಟಿದ್ದಾರೆ ನೋಡಿ

MS Dhoni: ಈ 5 ಕ್ರಿಕೆಟಿಗರಿಗೆ ಧೋನಿ ಅಂದ್ರೆ ಅಷ್ಟಕಷ್ಟೆಯಂತೆ! ರಿಟೈರ್ ಆದಕೂಡ್ಲೇ ಬಾಯಿ ಬಿಟ್ಟಿದ್ದಾರೆ ನೋಡಿ

ಎಂಎಸ್ ಧೋನಿ

ಎಂಎಸ್ ಧೋನಿ

ಅಭಿಮಾನಿಗಳಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರೂ, ಧೋನಿಯವರ ನಾಯಕತ್ವದಲ್ಲಿ ಅಡಿದಂತಹ ಐದು ಭಾರತೀಯ ಕ್ರಿಕೆಟರುಗಳಿಗೆ ಧೋನಿ ಎಂದರೆ ಅಷ್ಟಕಷ್ಟೆಯಂತೆ. ಏಕೆಂದರೆ, ನಿವೃತ್ತರಾದ ಮೇಲೆ ಈ ಕ್ರಿಕೆಟಿಗರು ಧೋನಿ ಬಗ್ಗೆ ನೀಡಿದ ಬಹಿರಂಗವಾದ ಹೇಳಿಕೆಗಳೇ ಇದಕ್ಕೆ ಜ್ವಲಂತ ಸಾಕ್ಷಿ ಎಂದು ಹೇಳಬಹುದು.

ಮುಂದೆ ಓದಿ ...
  • Share this:

ಮೊದಲೆಲ್ಲಾ ಕ್ರಿಕೆಟ್ (Cricket) ಪದವನ್ನು ಕೇಳಿದ ತಕ್ಷಣ ಮಾಸ್ಟರ್ ಬ್ಲಾಸ್ಟರ್ (Master Blaster) ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಹೇಗೆ ನೆನಪಾಗುತ್ತಿದ್ದರೋ, ಹಾಗೆಯೇ ಈವಾಗ ಕ್ರಿಕೆಟ್ ಎಂದ ತಕ್ಷಣ ಬಹುತೇಕರು ‘ಮಾಹಿ ಮಾಹಿ’ (Mahi) ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಎಂದರೆ ಈಗ ಎಂಎಸ್ ಧೋನಿ (MS Dhoni) ಎಂದರೆ ದೇಶದ ಅತ್ಯಂತ ಪ್ರೀತಿಯ ಕ್ರಿಕೆಟಿಗರಲ್ಲಿ (cricketer) ಒಬ್ಬರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅನೇಕರು ಅವರನ್ನು ಭಾರತೀಯ ಕ್ರಿಕೆಟ್ ತಂಡವನ್ನು (Indian Cricket Team) ಮುನ್ನಡೆಸಿದ ಶ್ರೇಷ್ಠ ನಾಯಕ (A great leader) ಎಂದು ಬಣ್ಣಿಸುತ್ತಾರೆ.


ರಾಂಚಿ ಮೂಲದ ಸೂಪರ್ ಸ್ಟಾರ್ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಗೆಲ್ಲಲು ಇದ್ದ ಎಲ್ಲ ಸಾಮರ್ಥ್ಯವನ್ನೂ ಒರೆಗೆ ಹಚ್ಚಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. 2007 ರಲ್ಲಿ ಚೊಚ್ಚಲ ವಿಶ್ವ ಟ್ವೆಂಟಿ-ಟ್ವೆಂಟಿ ಪ್ರಶಸ್ತಿಗೆ ಧೋನಿ ನೇತೃತ್ವದ ಯುವ ಭಾರತೀಯ ತಂಡವನ್ನು ಮುನ್ನಡೆಸಿದರು, 2011 ರಲ್ಲಿ 50 ಓವರ್ ಗಳ ವಿಶ್ವಕಪ್ ಗಾಗಿ ಭಾರತದ 28 ವರ್ಷಗಳ ಹಿಂದಿನ ವಿಶ್ವದಾಖಲೆಯನ್ನು ಕೊನೆಗೊಳಿಸಿದರು ಮತ್ತು ಎರಡು ವರ್ಷಗಳ ನಂತರ ಇಂಗ್ಲೆಂಡ್ ನಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಗೆದ್ದರು.


ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರೂ, ಧೋನಿಯ ಕ್ರೇಜ್ ಮಾತ್ರ ಅಭಿಮಾನಿಗಳಲ್ಲಿ ಸ್ವಲ್ಪವೂ ಕಡಿಮೆ ಆಗದೆ ಇನ್ನೂ ಹಾಗೆಯೇ ಉಳಿದಿದೆ. ಜನಪ್ರಿಯತೆಯ ದೃಷ್ಟಿಯಿಂದ, ಅವರು ಯಾವುದೇ ಸಕ್ರಿಯ ಅಂತರರಾಷ್ಟ್ರೀಯ ಕ್ರಿಕೆಟಿಗನಿಗೆ ಉತ್ತಮ ಪೈಪೋಟಿ ನೀಡಬಹುದು. ಅವರು ಅಭಿಮಾನಿಗಳಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರೂ, ಧೋನಿಯವರ ನಾಯಕತ್ವದಲ್ಲಿ ಅಡಿದಂತಹ ಐದು ಭಾರತೀಯ ಕ್ರಿಕೆಟರುಗಳಿಗೆ ಧೋನಿ ಎಂದರೆ ಅಷ್ಟಕಷ್ಟೆಯಂತೆ. ಏಕೆಂದರೆ, ನಿವೃತ್ತರಾದ ಮೇಲೆ ಈ ಕ್ರಿಕೆಟಿಗರು ಧೋನಿ ಬಗ್ಗೆ ನೀಡಿದ ಬಹಿರಂಗವಾದ ಹೇಳಿಕೆಗಳೇ ಇದಕ್ಕೆ ಜ್ವಲಂತ ಸಾಕ್ಷಿ ಎಂದು ಹೇಳಬಹುದು.


ಹಾಗಾದರೆ ಬನ್ನಿ ಧೋನಿಯನ್ನು ಸಾರ್ವಜನಿಕವಾಗಿ ಟೀಕಿಸಿದ ಆ ಐದು ಭಾರತೀಯ ಕ್ರಿಕೆಟಿಗರು ಯಾರು ಅಂತ ತಿಳಿದುಕೊಳ್ಳೋಣ.


1. ಗೌತಮ್ ಗಂಭೀರ್
ಎರಡು ವಿಶ್ವಕಪ್ ಪ್ರಶಸ್ತಿಗಳನ್ನು ಎಂದರೆ ಟ್ವೆಂಟಿ20 ಮತ್ತು ಏಕದಿನ ವಿಶ್ವಕಪ್ ಗಳನ್ನು ಭಾರತ ಕ್ರಿಕೆಟ್ ತಂಡ ಗೆದ್ದಿದ್ದು ಎಲ್ಲರಿಗೂ ಗೊತ್ತಿದೆ. ಅದರಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದರು. ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧದ 2007 ರ ವಿಶ್ವ ಟ್ವೆಂಟಿ-20 ಫೈನಲ್ ಮತ್ತು ಶ್ರೀಲಂಕಾ ವಿರುದ್ಧದ 2011 ರ ಏಕದಿನ ವಿಶ್ವಕಪ್ ಎರಡರಲ್ಲೂ ಭಾರತದ ಪರ ಅತ್ಯಧಿಕ ರನ್ ಗಳಿಸಿದ್ದನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ?


ಇದನ್ನೂ ಓದಿ:  Sourav Ganguly: ಹೊಸ ಮನೆ ಖರೀದಿಸಿದ ಸೌರವ್ ಗಂಗೂಲಿ, 48 ವರ್ಷಗಳ ನಂತರ ವಿಳಾಸ ಬದಲಿಸಿದ ದಾದಾ


ಶ್ರೀಲಂಕಾ ವಿರುದ್ಧ 97 ರನ್ ಗಳ ಅಮೂಲ್ಯವಾದ ಇನ್ನಿಂಗ್ಸ್ ಆಡಿದರೂ, ಅಭಿಮಾನಿಗಳು ಮತ್ತು ತಜ್ಞರು ವಿಶ್ವಕಪ್ ಗೆಲುವಿಗೆ ಸಾಕಷ್ಟು ಮನ್ನಣೆ ನೀಡುತ್ತಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ಗೌತಮ್ ಮೈಕ್ರೋ-ಬ್ಲಾಗಿಂಗ್ ಸೈಟ್ ನಲ್ಲಿ ತಮ್ಮ ಈ ಹತಾಶೆಯನ್ನು ಹೊರ ಹಾಕಿದರು.


ವಿಶ್ವಕಪ್ ಫೈನಲ್ ನಲ್ಲಿ ಧೋನಿಯ ಅಪ್ರತಿಮ ಸಿಕ್ಸರ್ ಅನ್ನು ಸಂಭ್ರಮಿಸಿದ ಇಎಸ್‌ಪಿಯನ್ ಕ್ರಿಕ್ ಇನ್ಫೋ ಅವರ ಒಂದು ಟ್ವೀಟ್ ಗೆ ಪ್ರತಿಕ್ರಿಯಿಸಿದ ಗಂಭೀರ್ ಅವರು "ಇದು ಒಂದು ಜ್ಞಾಪಕಕ್ಕೆ ಅಷ್ಟೇ: 2011ರ ವಿಶ್ವಕಪ್ ಇಡೀ ಭಾರತ, ಇಡೀ ಭಾರತ ತಂಡ ಮತ್ತು ಎಲ್ಲಾ ಸಹಾಯಕ ಸಿಬ್ಬಂದಿ ಗೆದ್ದಿದ್ದು. ನೀವು ಸರಿಯಾದ ಸಮಯಕ್ಕೆ ಸಿಕ್ಸರ್ ಹೊಡೆದಿರಬಹುದು" ಎಂದು ಟ್ವೀಟ್ ಮಾಡಿದ್ದರು.


2. ಯುವರಾಜ್ ಸಿಂಗ್
ಒಂದು ಕಾಲದಲ್ಲಿ ಯುವರಾಜ್ ಸಿಂಗ್ ಮತ್ತು ಧೋನಿ ಉತ್ತಮ ಸ್ನೇಹಿತರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅವರ ಸಂಬಂಧವು ಮುಂದೆ ಹಾಗೆಯೇ ಮುಂದುವರೆಯಲಿಲ್ಲ ಎಂಬುದು ಸಹ ಅನೇಕರಿಗೆ ಗೊತ್ತಿರುವ ವಿಚಾರವಾಗಿದೆ. ಮಾಜಿ ಆಲ್ರೌಂಡರ್ ಯುವರಾಜ್ ಅವರು ಅನೇಕ ಸಂದರ್ಭದಲ್ಲಿ ಧೋನಿ ತನ್ನನ್ನು ಮತ್ತು ಇತರ ಹಿರಿಯ ಕ್ರಿಕೆಟಿಗರಿಗೆ ದ್ರೋಹ ಬಗೆದಿದ್ದಾರೆ ಮತ್ತು ಅವರಿಗೆ ಅರ್ಹವಾದ ಬೆಂಬಲವನ್ನು ನೀಡಿಲ್ಲ ಎಂದು ದೋಷಿಸಿದ್ದಾರೆ .


ಧೋನಿ ಅವರು 350 ಏಕದಿನ ಪಂದ್ಯಗಳನ್ನು ಆಡಲು ಸಾಧ್ಯವಾಯಿತು, ಏಕೆಂದರೆ ಅವರು ಉತ್ತಮವಾಗಿ ಆಡದೇ ಇದ್ದರೂ ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಕೋಚ್ ರವಿಶಾಸ್ತ್ರಿ ಅವರಿಂದ ಪಡೆದ ಬೆಂಬಲದಿಂದಾಗಿ ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.


"ಅವರ ವೃತ್ತಿಜೀವನದ ಕೊನೆಯಲ್ಲಿ ಮಾಹಿ ಅವರನ್ನು ನೋಡಿ. ಅವರಿಗೆ ವಿರಾಟ್ ಮತ್ತು ರವಿಶಾಸ್ತ್ರಿ ಅವರಿಂದ ಸಾಕಷ್ಟು ಬೆಂಬಲವಿತ್ತು. ಅವರು ಅವರನ್ನು ವಿಶ್ವಕಪ್ ಗೆ ಕರೆದೊಯ್ದರು, ಅವರು ಕೊನೆಯವರೆಗೂ ಆಡಿದರು ಮತ್ತು 350 ಪಂದ್ಯಗಳನ್ನು ಆಡಿದರು. ಬೆಂಬಲ ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ ಆದರೆ ಭಾರತೀಯ ಕ್ರಿಕೆಟ್ ನಲ್ಲಿ ಪ್ರತಿಯೊಬ್ಬರಿಗೂ ಈ ಬೆಂಬಲ ಸಿಗುವುದಿಲ್ಲ" ಎಂದು ಯುವರಾಜ್ ಸ್ಪೋರ್ಟ್ಸ್ 18 ಗೆ ತಿಳಿಸಿದರು.


ಇದನ್ನೂ ಓದಿ:  Sakshi Dhoni: ಸಾಕ್ಷಿ ಧೋನಿ ಸೌಂದರ್ಯಕ್ಕೆ ಈ ವಿಷಯಗಳೇ ಕಾರಣವಂತೆ, ಬ್ಯೂಟಿ ಟಿಪ್ಸ್ ಬಿಟ್ಟುಕೊಟ್ಟ ಧೋನಿ ಪತ್ನಿ


ಅಷ್ಟೇ ಅಲ್ಲ, ಬಿಸಿಸಿಐನ ಕೆಲವು ಅಧಿಕಾರಿಗಳು ಅವರನ್ನು ಇಷ್ಟಪಡದ ಕಾರಣ ಮತ್ತು ಧೋನಿಗೆ ಇವರಿಗಿಂತಲೂ ಹೆಚ್ಚಿನ ಆದ್ಯತೆ ನೀಡಿದ್ದರಿಂದ ನಾನು ಭಾರತ ತಂಡದ ನಾಯಕನಾಗಲು ಸಾಧ್ಯವಾಗಲಿಲ್ಲ ಎಂದು ಯುವರಾಜ್ ಹೇಳಿ ಕೊಂಡಿದ್ದಾರೆ.


3. ವಿರೇಂದ್ರ ಸೆಹ್ವಾಗ್
ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಹಿರಿಯ ಆಟಗಾರರ ಬಗ್ಗೆ ಧೋನಿಯ ವರ್ತನೆಯನ್ನು ಸಾರ್ವಜನಿಕವಾಗಿ ಟೀಕಿಸಿದ ಇನ್ನೊಬ್ಬ ಕ್ರಿಕೆಟಿಗರಾಗಿದ್ದಾರೆ. 2012 ರಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ, ಮೂವರು ಹಿರಿಯ ಆಟಗಾರರಾದ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗಂಭೀರ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಆಗಾಗ್ಗೆ ಬದಲಾಯಿಸಿದ್ದು ಏಕೆ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಧೋನಿ ಅವರು ಇವರು ಮೂವರು ನಿಧಾನಗತಿಯ ಫೀಲ್ಡರ್ ಗಳಾಗಿದ್ದರು ಎಂದು ಬಹಿರಂಗವಾಗಿಯೇ ಹೇಳಿದ್ದರು.


"ಅಗ್ರ ಮೂವರು ಆಟಗಾರರು ನಿಧಾನಗತಿಯ ಫೀಲ್ಡರ್ ಗಳು ಎಂದು ಎಂ ಎಸ್ ಧೋನಿ ಆಸ್ಟ್ರೇಲಿಯಾದಲ್ಲಿ ಹೇಳಿದಾಗ, ನಮ್ಮನ್ನು ಎಂದಿಗೂ ಕೇಳಲಿಲ್ಲ ಅಥವಾ ಸಂಪರ್ಕಿಸಲಿಲ್ಲ. ನಾವು ಮಾಧ್ಯಮಗಳಿಂದ ಇದನ್ನು ತಿಳಿದು ಕೊಂಡೆವು. ನಾವು ನಿಧಾನಗತಿಯ ಫೀಲ್ಡರ್ ಗಳು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು, ಆದರೆ ತಂಡದ ಸಭೆಯಲ್ಲಿ ಅಲ್ಲ" ಎಂದು ಸೆಹ್ವಾಗ್ ಹೇಳಿದ್ದರು.


4. ಹರ್ಭಜನ್ ಸಿಂಗ್
ಕಳೆದ ವರ್ಷ ನಿವೃತ್ತರಾದ ನಂತರ, ಹರ್ಭಜನ್ ಸಿಂಗ್ ಕೆಲವು ಆಘಾತಕಾರಿ ಹೇಳಿಕೆಗಳನ್ನು ನೀಡಿದರು, ಅದರಲ್ಲಿ ಧೋನಿ ತಮ್ಮ ವೃತ್ತಿಜೀವನವನ್ನು ಬೇಗನೆ ಕೊನೆಗೊಳಿಸಿದ್ದಾರೆ ಎಂದು ಆರೋಪಿಸಿದರು. 2011 ರ ವಿಶ್ವಕಪ್ ಗೆಲ್ಲಲು ಭಾರತಕ್ಕೆ ಸಹಾಯ ಮಾಡಿದ ಹೆಚ್ಚಿನ ಹಿರಿಯ ಕ್ರಿಕೆಟಿಗರನ್ನು ತಂಡದಿಂದ ಹೊರ ಹಾಕಿದಾಗ ದೊಡ್ಡ ಅವಮಾನವಾಗಿದೆ ಎಂದು ಆಫ್-ಸ್ಪಿನ್ನರ್ ಹೇಳಿದರು.


ಇದನ್ನೂ ಓದಿ:   Shikhar Dhawan: ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರೆ ಗಬ್ಬರ್ ಸಿಂಗ್, ಈ ವರ್ಷವೇ ಫಿಲ್ಮ್ ಬಿಡುಗಡೆಯಂತೆ


"400 ವಿಕೆಟ್ ಗಳನ್ನು ಪಡೆದ ಯಾರನ್ನಾದರೂ ಹೇಗೆ ಕೈಬಿಡಬಹುದು ಎಂಬುದು ಒಂದು ನಿಗೂಢ ಕಥೆಯಾಗಿದೆ, ಅದು ಇನ್ನೂ ಬಹಿರಂಗಗೊಂಡಿಲ್ಲ. ನಾನು ಇನ್ನೂ ಆಶ್ಚರ್ಯ ಪಡುತ್ತೇನೆ, 'ನಿಜವಾಗಿಯೂ ಏನಾಯಿತು? ನಾನು ತಂಡದಲ್ಲಿ ಉಳಿಯಲು ಯಾರಿಗೆ ಸಮಸ್ಯೆಯಾಯಿತು" ಹರ್ಭಜನ್ ಇಂಡಿಯಾ ಟಿವಿಯಲ್ಲಿ ಹೀಗೆ ಹೇಳಿದ್ದರು.


"ಏಕೆ ಎಂದು ನಾನು ನಾಯಕ ಧೋನಿ ಅವರನ್ನು ಕೇಳಲು ಪ್ರಯತ್ನಿಸಿದೆ, ಆದರೆ ನನಗೆ ಯಾವುದೇ ಕಾರಣವನ್ನು ನೀಡಲಿಲ್ಲ. ಇದಕ್ಕೆ ಕಾರಣವನ್ನು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಾನು ಅರಿತುಕೊಂಡೆ. ಇದರ ಹಿಂದೆ ಬೇರೆ ಯಾರೋ ಇದ್ದಾರೆ, ಏಕೆಂದರೆ ನೀವು ಕೇಳುತ್ತಲೇ ಇದ್ದರೂ ಸಹ ನಿಮಗೆ ಸೂಕ್ತವಾದ ಉತ್ತರ ಸಿಗದೇ ಇದ್ದಾಗ ಅದನ್ನು ಬಿಡುವುದು ಉತ್ತಮ" ಎಂದು ಅವರು ಹೇಳಿದರು.


5. ಇರ್ಫಾನ್ ಪಠಾಣ್
ಸ್ಪೋರ್ಟ್ಸ್ ತಕ್ ಗೆ ನೀಡಿದ ಸಂದರ್ಶನದಲ್ಲಿ, ಇರ್ಫಾನ್ ಪಠಾಣ್ ಅವರು ದೇಶಕ್ಕಾಗಿ ಆಡಿದ ಕೊನೆಯ ಏಕದಿನ ಮತ್ತು ಟ್ವೆಂಟಿ20 ಸರಣಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಹೊರತಾಗಿಯೂ ತಮ್ಮನ್ನು ಕೈಬಿಟ್ಟಿದ್ದಕ್ಕಾಗಿ ಆಯ್ಕೆಯ ಉಸ್ತುವಾರಿಯನ್ನು ವಹಿಸಿಕೊಂಡವರನ್ನು ತರಾಟೆಗೆ ತೆಗೆದು ಕೊಂಡಿದ್ದರು.


"ನನ್ನ ಕೊನೆಯ ಏಕದಿನ, ಕೊನೆಯ ಟ್ವೆಂಟಿ20 ಸರಣಿಯಲ್ಲಿ ನಾನು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದೇನೆ. ನಾನು ಸ್ವಿಂಗ್ ಪಡೆಯುತ್ತಿಲ್ಲ ಎಂದು ಹೇಳುವ ಜನರು ನಾನು ಮೊದಲು ಬೌಲಿಂಗ್ ಮಾಡುತ್ತಿದ್ದೇನೆ ಎಂದು ತಿಳಿದು ಕೊಳ್ಳಬೇಕು" ಎಂದು ಇರ್ಫಾನ್ ಹೇಳಿದ್ದಾರೆ. "ಇರ್ಫಾನ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿಲ್ಲ" ಎಂದು ಮಾಧ್ಯಮಗಳಲ್ಲಿ ಹೇಳಿದ ನಂತರ ಧೋನಿಯಿಂದ ವಿವರಣೆ ಕೋರಿದ್ದೇನೆ ಎಂದು ಪಠಾಣ್ ಹೇಳಿದರು, ಆದರೆ ಅವರ ನ್ಯೂನತೆಗಳ ಬಗ್ಗೆ ಅವರು ಎಂದಿಗೂ ಪ್ರತಿಕ್ರಿಯೆ ಪಡೆಯಲಿಲ್ಲ ಎಂದು ಹೇಳಿದರು. ಪ್ರತಿಕ್ರಿಯೆಯ ವಿಷಯದಲ್ಲಿ ಅವರು ಪಡೆದದ್ದು ತಂಡದಿಂದ ಗೇಟ್ ಪಾಸ್ ಮಾತ್ರ.


"ಇರ್ಫಾನ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿಲ್ಲ ಎಂದು 2008ರ ಆಸ್ಟ್ರೇಲಿಯಾ ಸರಣಿಯಲ್ಲಿ ನನ್ನ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ನಾನು ಮಾಹಿ ಅವರೊಂದಿಗೆ ಮಾತನಾಡಿದ್ದೆ. ನಾನು ಇಡೀ ಸರಣಿಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದೆ, ಆದ್ದರಿಂದ ನಾನು ಅವರನ್ನು ಸ್ಪಷ್ಟೀಕರಣಕ್ಕಾಗಿ ಕೇಳಿದೆ ಮತ್ತು ಉತ್ತಮಗೊಳ್ಳಲು ನಾನು ಏನು ಮಾಡಬಹುದು ಎಂದು ಕೇಳಿದೆ.


ಇದನ್ನೂ ಓದಿ: Sara Tendulkar: ಸಾರಾ ತೆಂಡೂಲ್ಕರ್ ಲುಕ್​ಗೆ ಮನಸೋತ ಖ್ಯಾತ ಕ್ರಿಕೆಟಿಗನ ಪತ್ನಿ, ರಾಜಕುಮಾರಿ ಹಾಗಿದ್ದಾರಂತೆ ಸಾರಾ!


"2008 ರಲ್ಲಿ ಶ್ರೀಲಂಕಾದಲ್ಲಿ ಪಂದ್ಯವನ್ನು ಗೆದ್ದ ನಂತರ ನನ್ನನ್ನು ತಂಡದಿಂದ ಕೈಬಿಟ್ಟಿದ್ದು ನನಗೆ ಚೆನ್ನಾಗಿಯೇ ನೆನಪಿದೆ. ದೇಶಕ್ಕಾಗಿ ಆಟವನ್ನು ಗೆದ್ದ ನಂತರ ಯಾರನ್ನು ಕೈಬಿಡಲಾಗುತ್ತದೆ? ಯಾವ ಮ್ಯಾಚ್ ವಿನ್ನರ್ ಅನ್ನು ಹೊರಗೆ ಕುಳಿತು ಕೊಳ್ಳುವಂತೆ ಮಾಡಲಾಗುತ್ತದೆ? ಆದರೆ ನನ್ನ ಜೊತೆ ಹಾಗೆಯೇ ಮಾಡಿದ್ದರು" ಎಂದು ಪಠಾಣ್ ಹೇಳಿದರು.

Published by:Ashwini Prabhu
First published: