AUS vs IND: ODI, T-20 ಸರಣಿಗೆ ರೋಹಿತ್ ಜಾಗಕ್ಕೆ ಯಾವ ಆಟಗಾರ: ಮೂವರ ನಡುವೆ ಶುರುವಾಗಿದೆ ಪೈಪೋಟಿ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಗೆ ರೋಹಿತ್ ಜಾಗದಲ್ಲಿ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಸದ್ಯ ಈ ಸಾಲಿನಲ್ಲಿ ಮೂವರು ಆಟಗಾರರಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

 • Share this:
  ಭಾರತ ಕ್ರಿಕೆಟ್ ತಂಡದ ಆಟಗಾರರು ಸುಮಾರು ಎಂಟು ತಿಂಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಲು ಸಜ್ಜಾಗಿದ್ದು ಈಗಾಗಲೇ ಕಾಂಗರೂಗಳ ನಾಡಿಗೆ ಪ್ರಯಾಣ ಬೆಳೆಸಿ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಇದೇ ನವೆಂಬರ್‌ 27 ರಿಂದ ಭಾರತದ ಆಸ್ಟ್ರೇಲಿಯಾ ಪೂರ್ಣ ಪ್ರವಾಸ ಆರಂಭವಾಗಲಿದೆ. ಉಭಯ ತಂಡಗಳೆರಡು ಅತ್ಯಂತ ಬಲಿಷ್ಠವಾಗಿರುವುದರಿಂದ ಏಕದಿನ, ಟಿ-20 ಹಾಗೂ ಟೆಸ್ಟ್ ಸರಣಿಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಮೂರು ದಿನಗಳ ಹಿಂದಷ್ಟೇ ಸಿಡ್ನಿಗೆ ಬಂದಿಳಿದ ಭಾರತ ಕ್ರಿಕೆಟ್‌ ತಂಡದ ಸದಸ್ಯರು ಕ್ವಾರಂಟೈನ್‌ ಅವಧಿಯ ನಡುವೆಯೇ ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ಎಲ್ಲ ಆಟಗಾರರ ಕೋವಿಡ್‌-19 ಫ‌ಲಿತಾಂಶ ನೆಗೆಟಿವ್‌ ಬಂದಿದೆ.

  ಈ ನಡುವೆ ಇಂಜುರಿಯಿಂದ ಬಳಲುತ್ತಿರುವ ಕಾರಣ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಆಸೀಸ್ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಗೆ ಆಯ್ಕೆಯಾಗಿರಲಿಲ್ಲ. ರೋಹಿತ್‌ ಶರ್ಮ ಇನ್ನೂ ಸಂಪೂರ್ಣ ಫಿಟ್‌ನೆಸ್‌ ಹೊಂದಿಲ್ಲ, ಹೀಗಾಗಿ ಅವರನ್ನು ಆಸ್ಟ್ರೇಲಿಯ ಪ್ರವಾಸದ ಸೀಮಿತ ಓವರ್‌ಗಳ ಸರಣಿಯಿಂದ ಕೈಬಿಡಲಾಗಿದೆ ಅವರು ಕೇವಲ ಶೇ. 70ರಷ್ಟು ಫಿಟ್‌ನೆಸ್‌ ಹೊಂದಿದ್ದಾರೆ. ಇನ್ನೂ ಶೇ. 30ರಷ್ಟು ಚೇತರಿಕೆ ಕಾಣಬೇಕಿದೆ. ಇದಕ್ಕೆ ಇನ್ನೂ ಸ್ವಲ್ಪ ಕಾಲ ಬೇಕಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

  ಈ ತಂಡ ಇಟ್ಟುಕೊಂಡು ಆರ್​​ಸಿಬಿ ನಾಲ್ಕನೇ ಸ್ಥಾನಕ್ಕೇರಿದೆ ಎಂದರೆ ಅದು ವಿರಾಟ್​ ಕೊಹ್ಲಿ ಸಾಧನೆ!

  ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಗೆ ರೋಹಿತ್ ಜಾಗದಲ್ಲಿ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಸದ್ಯ ಈ ಸಾಲಿನಲ್ಲಿ ಮೂವರು ಆಟಗಾರರಿದ್ದಾರೆ.

  ಶುಭ್ಮನ್ ಗಿಲ್: ಭಾರತ ತಂಡಕ್ಕೆ ಈಗಾಗಲೇ ಪದಾರ್ಪಣೆ ಮಾಡಿರುವ ಶುಭ್ಮನ್ ಗಿಲ್ ಅವರು ರೋಹಿತ್ ಜಾಗದಲ್ಲಿ ಕಣಕ್ಕಿಳಿಯುವ ಮೊದಲ ಆಯ್ಕೆಯಾಗಿದ್ದಾರೆ. ಐಪಿಎಲ್​ನಲ್ಲಿ ಕೆಕೆಆರ್ ಪರ ಓಪನರ್ ಆಗಿ ಕಣಕ್ಕಿಳಿದು ಭರ್ಜರಿ ಫಾರ್ಮ್​ನಲ್ಲಿರುವ ಇವರು 440 ರನ್ ಬಾರಿಸಿದ್ದರು.

  ಮಯಾಂಕ್ ಅಗರ್ವಾಲ್: ಈ ಬಾರಿಯ ಐಪಿಎಲ್​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ಪರ ಭರ್ಜರಿ ಆಟ ಪ್ರದರ್ಶಿಸಿದ ಮಯಾಂಕ್ ಟಿ-20 ಕ್ರಿಕೆಟ್​ಗೆ ಸಂಪೂರ್ಣ ಫಿಟ್ ಆದಂತೆ ಕಾಣುತ್ತಿದೆ. ಭಾರತ ಟೆಸ್ಟ್ ತಂಡದಲ್ಲೂ ಓಪನರ್ ಆಗಿ ಕಣಕ್ಕಿಳಿದು ಸಾಕಷ್ಟು ಅನುಭವ ಇರುವ ಇವರು ರೋಹಿತ್ ಜಾಗದಲ್ಲಿ ಆಡುವ ಅಂದಾಜಿದೆ.

  IPL 2020 ಭರ್ಜರಿ ಯಶಸ್ವಿ: ಬಿಸಿಸಿಐ ಯುಎಇ ಕ್ರಿಕೆಟ್ ಬೋರ್ಡ್​ಗೆ ಕೊಟ್ಟ ಹಣ ಕೇಳದ್ರೆ ಶಾಕ್ ಆಗ್ತೀರಾ!

  ಸಂಜು ಸ್ಯಾಮ್ಸನ್: ಭಾರತ-ಆಸ್ಟ್ರೇಲಿಯಾ ನಡುವೆ ಟಿ-20 ಸರಣಿ ನಡೆಯುತ್ತಿರುವಾಗ ಚೇತೇಶ್ವರ್ ಪೂಜಾರ ನೇತೃತ್ವದಲ್ಲಿ ಭಾರತ ಅಭ್ಯಾಸ ಪಂದ್ಯ ಆಡಲಿದೆ. ಈ ಸಂದರ್ಭ ಕೆ. ಎಲ್ ರಾಹುಲ್ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದರೆ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಗುವುದು ಖಚಿತ. ಸ್ಯಾಮ್ಸನ್ ಕೇವಲ ಓಪನರ್ ಆಗಿ ಮಾತ್ರವಲ್ಲದೆ 3 ಹಾಗೂ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅನುಭವವಿದೆ. ಇದು ಭಾರತ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
  Published by:Vinay Bhat
  First published: