ಕೊಹ್ಲಿ-ಅನುಷ್ಕಾ ಎರಡನೇ ವಿವಾಹ ವಾರ್ಷಿಕೋತ್ಸವ: ವಿರುಷ್ಕಾ ಲವ್​​ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?

ದೆಹಲಿ ಮೂಲದವರಾದ ಇವರಿಬ್ಬರ ಪರಿಚಯವಾಗಿದ್ದು 2013ರ ಜಾಹೀರಾತು ಚಿತ್ರೀಕರಣವೊಂದರಲ್ಲಿ. ಕ್ಲಿಯರ್ ಹೇರ್ ಶಾಂಪುನಲ್ಲಿ ಬ್ಲಾಕ್ ಡ್ರೆಸ್‍ನಲ್ಲಿ ಹಾಟ್ ಜೋಡಿ ಆಗಿ ಕಾಣಿಸಿಕೊಂಡ ಇವರು ನೋಡುಗರ ಹುಬ್ಬೇರುವಂತೆ ಮಾಡಿತ್ತು.

Vinay Bhat | news18-kannada
Updated:December 11, 2019, 4:46 PM IST
ಕೊಹ್ಲಿ-ಅನುಷ್ಕಾ ಎರಡನೇ ವಿವಾಹ ವಾರ್ಷಿಕೋತ್ಸವ: ವಿರುಷ್ಕಾ ಲವ್​​ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?
ವಿರುಷ್ಕಾ ಜೋಡಿ
  • Share this:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಮದುವೆಯಾಗಿ ಇಂದಿಗೆ ಎರಡು ವರ್ಷ. ಡಿ. 11, 2017 ರಂದು ಅದ್ಧೂರಿಯಾಗಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ವಿರುಷ್ಕಾ ಜೋಡಿ ಕಾಲಿಟ್ಟಿದ್ದರು.

ಈ ಸಂಭ್ರಮದಲ್ಲಿ ಕೊಹ್ಲಿ ಮತ್ತು ಅನುಷ್ಕಾ, ಸಾಮಾಜಿಕ ತಾಣಗಳಲ್ಲಿ ತಮ್ಮ ಮದುವೆಯ ಫೋಟೋಗಳನ್ನ ಹಂಚಿಕೊಳ್ಳುವ ಮೂಲಕ, ಪರಸ್ಪರ ಶುಭ ಕೋರಿದ್ದಾರೆ. ಇಬ್ಬರು ಪರಸ್ಪರ ಭಾವನಾತ್ಮಕ ಸಂದೇಶ ಕಳುಹಿಸುವ ಮೂಲಕ, ಅಭಿಮಾನಿಗಳ ಮನ ಗೆದ್ದಿದ್ದಾರೆ.

IND vs WI: ಟೀಂ ಇಂಡಿಯಾದಲ್ಲಿ 2 ಮಹತ್ವದ ಬದಲಾವಣೆ; ಸ್ಯಾಮ್ಸನ್​ಗಿಲ್ಲ ಚಾನ್ಸ್​; ಮತ್ಯಾರಿಗೆ?

 
ವಿರುಷ್ಕಾ ಲವ್​​ ಸ್ಟೋರಿ:

ದೆಹಲಿ ಮೂಲದವರಾದ ಇವರಿಬ್ಬರ ಪರಿಚಯವಾಗಿದ್ದು 2013ರ ಜಾಹೀರಾತು ಚಿತ್ರೀಕರಣವೊಂದರಲ್ಲಿ. ಕ್ಲಿಯರ್ ಹೇರ್ ಶಾಂಪುನಲ್ಲಿ ಬ್ಲಾಕ್ ಡ್ರೆಸ್‍ನಲ್ಲಿ ಹಾಟ್ ಜೋಡಿ ಆಗಿ ಕಾಣಿಸಿಕೊಂಡ ಇವರು ನೋಡುಗರ ಹುಬ್ಬೇರುವಂತೆ ಮಾಡಿತ್ತು. ಮೊದಲ ಪರಿಚಯದಿಂದಲೇ ಇಬ್ಬರು ಮನಸೋತರು. ಪರಿಚಯ ಸ್ನೇಹವಾಗಿ.. ಸದ್ದಿಲ್ಲದೇ ಡೇಟಿಂಗ್ ಕೂಡ ಆರಂಭಿಸಿದರು. ಅದು ಎಷ್ಟರ ಮಟ್ಟಿಗೆ ಅಂದರೆ ಕೊಹ್ಲಿ ವಿದೇಶಕ್ಕೆ ಟೂರ್ನಮೆಂಟ್‍ಗೆ ತೆರಳಿದರೆ ಅನುಷ್ಕಾ ಸಹ ಕದ್ದು ಮುಚ್ಚಿ ವಿಮಾನ ಏರುತ್ತಿದ್ದರು. ಈ ಮಧ್ಯೆ ಅನುಷ್ಕಾರನ್ನ ಕೊಹ್ಲಿ ಹಿಂಬಾಲಿಸಿದ್ದೂ ಇದೆ.

IPL 2020: ಆರ್​ಸಿಬಿ ತಂಡದಿಂದ ಕೊಹ್ಲಿ ಕೈಬಿಟ್ಟ ಆಟಗಾರನನ್ನು ರೋಹಿತ್ ಶರ್ಮಾ ಬರಮಾಡಿಕೊಂಡರುಇಷ್ಟೆಲ್ಲಾ ಕದ್ದು ಮುಚ್ಚಿ ಓಡಾಡುತ್ತಿದ್ದ ಜೋಡಿ ಅಂತೂ ಒಂದು ದಿನ ಎಲ್ಲರ ಕಣ್ಣಿಗೆ ಕಂಡರು. ಅದು ಸ್ವರ್ಗವೇ ಧರಗಿಳಿದಿರುವಂತೆ ಕಾಣುವ ನ್ಯೂಜಿಲೆಂಡ್‍ನಲ್ಲಿ. ಅಷ್ಟು ದಿನ ಹೇಗೋ ಅರಾಮಾಗಿ ಸುತ್ತುತ್ತಿದ್ದ ಜೋಡಿಗೆ ಅಯ್ಯೋ ಸಿಕ್ಕಿ ಬಿದ್ದವಲ್ಲ ಎಂಬ ಮುಜುಗರ ಒಂದು ಕಡೆ ಆದರೆ, ಮತ್ತೊಂದೆಡೆ ಇನ್ನೇನು ಗೊತ್ತಾಯಿತಲ್ಲ.. ಅರಾಮಾಗಿ ಓಡಾಡೋಣ ಎಂಬ ಧೈರ್ಯ.

ಈ ಮೂಲಕ ಗಪ್​​ಚುಪ್​ ಆಗಿದ್ದ ವಿರುಷ್ಕಾ ಪ್ರೀತಿ ಬಹಿರಂಗವಾಗಿದ್ದೇ ತಡ. ಇಬ್ಬರೂ ಪ್ರೀತಿಯನ್ನ ಒಪ್ಪಿಕೊಂಡು ಕಳೆದ ವರ್ಷ ಡಿಸೆಂಬರ್ 11ರಂದು ಅದ್ಧೂರಿಯಾಗಿ ಇಟಲಿಯಲ್ಲಿ ಮದುವೆಯಾದರು. ಇವರು ಮದುವೆಯಾಗಿ ಇಂದಿಗೆ ಎರಡು ವರ್ಷವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿವೆ.

First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ